Bagalakote: ಹೇರ್ ಡ್ರೈಯರ್ ಸ್ಪೋಟಕ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಪ್ರಕರಣ ಭೇದಿಸಿದ ಪೊಲೀಸರಿಗೆ ಕಾದಿತ್ತು ಬಿಗ್ ಶಾಕ್!!
Bagalakote: ಕೋರಿಯರ್ ಮೂಲಕ ಪಾರ್ಸಲ್ ಬಂದಿದ್ದ ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯೊಬ್ಬರ ಕೈ ಬೆರಳು ಸಂಪೂರ್ಣ ಛಿದ್ರವಾಗಿರುವ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ವೊಂದು ಸಿಕ್ಕಿದೆ.
ಹೌದು, ಕೋರಿಯರ್ ಮೂಲಕ ಪಾರ್ಸಲ್ ಬಂದಿದ್ದ ಹೇರ್ ಡ್ರೈಯರ್ ಸ್ಫೋಟಗೊಂಡು ಮಹಿಳೆಯೊಬ್ಬರ ಎರಡೂ ಕೈಗಳು ತುಂಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೆರೆಡು ಟ್ವಿಸ್ಟ್‌ಗಳು ಲಭ್ಯವಾಗಿದೆ. ಈ ಪ್ರಕರಣ ಬೇಧಿಸಿದ ಪೋಲೀಸರಿಗೆ ತನ್ನ ಪ್ರೀತಿಗೆ ಅಡ್ಡಿಯಾಗಿದಕ್ಕೆ ಮಹಿಳೆಯನ್ನು ಕೊಲ್ಲಲು ಹೇರ್ ಡ್ರೈಯರ್ ನಲ್ಲಿ ಡಿಟನೇಟರ್ ಇಟ್ಟು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಯಸ್, ನವೆಂಬರ್ 20ರಂದು ಈ ಒಂದು ಹೇರ್ ಡ್ರೈಯರ್ ಸ್ಪೋಟ ಪ್ರಕರಣ ನಡೆದಿತ್ತು. ಇಳಕಲ್ ಠಾಣೆ ಪೋಲಿಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಇದೀಗ ರೋಚಕ ಸತ್ಯ ಬಯಲಾಗಿದೆ. ಬಾಗಲಕೋಟೆ(Bagalakote) ಜಿಲ್ಲೆಯ ಇಳಕಲ್ ಪಟ್ಟಣದ ಸಿದ್ದಪ್ಪ ಶೀಲವಂತ(35) ಎಂಬಾತ ಮಾಜಿ ಯೋಧನ ಪತ್ನಿ ಬಸಮ್ಮ ಎಂಬುವವರನ್ನು ಪ್ರೀತಿಸುತ್ತಿದ್ದ, ಆದರೆ ಇದಕ್ಕೆ ಶಶಿಕಲಾ ಹಡಪದ ಎಂಬ ಮಹಿಳೆ ಅಡ್ಡಿಯಾಗುತ್ತಿದ್ದರು. ಅಲ್ಲದೇ ಅವಳ ಸಹವಾಸಕ್ಕೆ ಹೋದರೆ ಜಾಗ್ರತೆ ಎಂದು ಎಚ್ಚರಿಕೆ ನೀಡಿದ್ದರು. ಶಶಿಕಲಾ ಪ್ರತಿ ಬಾರಿ ತನ್ನ ಪ್ರೀತಿಗೆ ಅಡ್ಡ ಬರುತ್ತಿರುವುದರಿಂದ ಸಿಟ್ಟಾದ ಸಿದ್ದಪ್ಪ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ, ಅದರಂತೆ ಶಶಿಕಲಾ ಅವರ ಹೆಸರಿಗೆ ಹೇರ್ ಡ್ರೈಯರ್ ಕೋರಿಯರ್ ಮಾಡಿ ಅದರಲ್ಲಿ ಡಿಟೋನೇಟರ್ ಇರಿಸಿ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದನು.
ಪ್ಲಾನ್ ಪ್ರಕಾರ, ನ.20ರಂದು ಶಶಿಕಲಾ ಹೆಸರಿಗೆ ಕೊರಿಯರ್ ಬಂದಿದೆ. ಅದರೆ ಅಂದು ಶಶಿಕಲಾ ಮನೆಯಲ್ಲಿ ಇರಲಿಲ್ಲ, ಈ ವೇಳೆ ಯೋಧನ ಪತ್ನಿ ಬಸಮ್ಮ ಬಂದಿದ್ದಂತ ಹೇರ್ ಡ್ರೈಯರ್ ಅನ್ನು ಪಡೆದಿದ್ದಳು. ಅಷ್ಟಕ್ಕೇ ಸುಮ್ಮನಾಗದ ಬಸಮ್ಮ ಶಶಿಕಲಾ ಬರುವ ಮುನ್ನವೇ ಅದನ್ನು ನೋಡಬೇಕು ಎಂದು ಕೊರಿಯರ್ ಓಪನ್ ಮಾಡಿದ್ದಾಳೆ. ಕೊರಿಯರ್ ಓಪನ್ ಮಾಡಿದಷ್ಟೇ ಅಲ್ಲದೇ ಯಾವ ರೀತಿ ಕೆಲಸ ಮಾಡುತ್ತೆ ಎಂದು ಚೆಕ್ ಮಾಡಲು ಕರೆಂಟ್ ಗೆ ಹಾಕಿ ಸ್ವಿಚ್ ಒನ್ ಮಾಡಿದ್ದಾಳೆ, ಕೂಡಲೇ ಹೇರ್ ಡ್ರೈಯರ್ ನ ಒಳಗಿದ್ದ ಡಿಟನೇಟರ್ ಬ್ಲಾಸ್ಟ್ ಆಗಿದ್ದು, ಪರಿಣಾಮ ಬಸಮ್ಮ ಅವರ ಎರಡು ಕೈಗಳ ಬೆರಳುಗಳು ಛಿದ್ರಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಶಶಿಕಲಾ ನಾನು ಯಾವುದೇ ಹೇರ್ ಡ್ರೈಯರ್ ಆನ್ಲೈನ್ ನಲ್ಲಿ ಆರ್ಡರ್ ಮಾಡಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಒಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇಳಕಲ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಾಗ ಶಶಿಕಲಾ ಹಡಪದ ಅವರ ಕೊಲೆಗೆ ಸಿದ್ದಪ್ಪ ಎನ್ನುವ ವ್ಯಕ್ತಿ ಹಾಕಿದ್ದ ಎನ್ನುವುದು ಬಯಲಾಗಿದೆ. ಇದೀಗ ಇಳಕಲ್ ಠಾಣೆ ಪೊಲೀಸರು ಸಿದ್ದಪ್ಪನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಬಂಧ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆಗೆ ಇಳಿದಾಗ ಕೋರಿಯರ್ ಕಳುಹಿಸಿದ್ದು ಆರೋಪಿ ಸಿದ್ದಪ್ಪ ಶೀಲವಂತ ಎಂಬುದನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆ ಬಳಿಕ ಪೊಲೀಸರ ವರಸೆಯಲ್ಲಿ ವಿಚಾರಣೆ ನಡೆಸಿದಾಗ ಹೇರ್ ಡ್ರೈಯರ್ ನಲ್ಲಿ ಡಿಟೋನೇಟರ್ ಇರಿಸಿ ಕಳುಹಿಸಿದ್ದಂತ ವಿಷಯ ಬೆಳಕಿಗೆ ಬಂದಿದೆ.