BPL Card: ನಿಮ್ಮ BPL ಕಾರ್ಡ್ ರದ್ದಾದ್ರೆ ತಕ್ಷಣ ಹೀಗೆ ಮಾಡಿ, ಒಂದು ವಾರದಲ್ಲಿ ವಾಪಾಸ್ ಆಗುತ್ತೆ ಕಾರ್ಡ್!!

BPL Card: ರಾಜ್ಯದಲ್ಲಿ ಅನರ್ಹರ ಬಿಪಿಎಲ್ ಕಾರ್ಡ್ಗಳನ್ನು(BPL) ರದ್ದುಪಡಿಸಲು ಸರ್ಕಾರ. ಸರ್ಕಾರದ ಈ ನಡೆ ಬಾರಿ ವಿವಾದಕ್ಕೂ ಕೂಡ ಎಡೆ ಮಾಡಿಕೊಟ್ಟಿದೆ. ಈ ಬೆನ್ನೆಲೆ ಸಿದ್ದರಾಮಯ್ಯ ಅವರು ಯಾರ್ಯಾರ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಇದರ ಹೊರತಾಗಿ ನೀವು ಅರ್ಹರಾಗಿದ್ದರು ಕೂಡ ನಿಮ್ಮ ಕಾರ್ಡ್ ರದ್ದಾದರೆ ತಕ್ಷಣ ಈ ಒಂದು ಕೆಲಸ ಮಾಡಿ, ಒಂದು ವಾರದಲ್ಲಿ ಸರಿಯಾಗಿ ಬಿಡುತ್ತದೆ.

 

ಹೌದು, ಒಂದು ವೇಳೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್(Ration Card) ರದ್ದಾಗಿದ್ದರೇ ತಹಶೀಲ್ದಾರರ ಗಮನಕ್ಕೆ ತಂದರೇ ಒಂದು ವಾರದಲ್ಲೇ ಸಮಸ್ಯೆ ಬಗೆಹರಿಸಿ, ವಾಪಾಸ್ ಸಿಗಲಿದೆ. ಈ ಕುರಿತಾಗಿ ಆಹಾರ ಸಚಿವ ಮುನಿಯಪ್ಪ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು ‘ಒಂದು ವೇಳೆ ಬಿಪಿಎಲ್‌ ಕಾರ್ಡ್‌ ವಿಚಾರದಲ್ಲಿ ಬಡವರಿಗೆ ತೊಂದರೆಯಾದಲ್ಲಿ ತಹಶೀಲ್ದಾರ್‌ ಗಮನಕ್ಕೆ ತಂದರೆ ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು. ಅರ್ಹರಿಗೆ ಬಿಪಿಎಲ್‌ ತಪ್ಪಿ ಹೋಗಬಾರದು. ಆಕಸ್ಮಾತ್‌ ತಪ್ಪಿ ಹೋಗಿದ್ದರೆ ವಾಪಸ್‌ ಕೊಡಲಾಗುವುದು. ಹಾಗೆಯೇ ಪಡಿತರ ಚೀಟಿ ಇಲ್ಲವೆಂದು ಆರೋಗ್ಯ ಸೌಲಭ್ಯ ವಿಚಾರದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ತಿಳಿಸಿದ್ದಾರೆ.

Leave A Reply

Your email address will not be published.