Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಜಾಮೀನಿನ ಮೇಲೆ ಹೊರಗಿರುವ ದರ್ಶನ್ ಗೆ ಬಿಗ್ ಶಾಕ್

Share the Article

Darshan: ರೇಣುಕಾ ಸ್ವಾಮಿ ಹತತ್ಯೆ ಪ್ರಕರಣದಡಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಗೆ ಇದೀಗ ಹೊಸ ಸಂಕಷ್ಟ ಒಂದು ಶುರುವಾಗಿದೆ.

 

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ(Renukaswamy Murder Case) ಸಂಬಂಧಿಸಿದಂತೆ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಕೊಲೆ ನಡೆದ ಸ್ಥಳದ ಫೋಟೋವನ್ನು ಪೊಲೀಸರು ಇದೀಗ ರಿಕವರಿ ಮಾಡಿದ್ದಾರೆ. ಪ್ರತ್ಯಕ್ಷದರ್ಶಿ ಮೊಬೈಲ್ ಫೋನಿನಿಂದ ಎರಡು ಫೋಟೋಗಳನ್ನು ಪೊಲೀಸರು ರಿಕವರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಪುನೀತ್ ಮೊಬೈಲ್ ನಲ್ಲಿದ್ದ ಎರಡು ಫೋಟೋಗಳನ್ನು ಇದೀಗ ಪೊಲೀಸರು ರಿಕವರಿ ಮಾಡಿದ್ದಾರೆ.

 

ರೇಣುಕಾ ಸ್ವಾಮಿ ಕೊಲೆ ನಡೆದ ಶೆಡ್ ನಲ್ಲಿ ದರ್ಶನ್ ನಿಂತಿರುವ ಫೋಟೋ ಇದಾಗಿದ್ದು, ಬ್ಲಾಕ್ ಜೀನ್ಸ್ ಪ್ಯಾಂಟ್ ಹಾಗೂ ಬ್ಲೂ ಟಿ-ಶರ್ಟ್ ಧರಿಸಿ ದರ್ಶನ್ ನಿಂತಿದ್ದರು. ಎಲ್ಲಾ ಆರೋಪಿಗಳ ಜೊತೆಗೆ ದರ್ಶನ್ ನಿಂತಿರುವ ಫೋಟೋವನ್ನು ರಿಕವರಿ ಮಾಡಿದ್ದಾರೆ. ಕೊಲೆ ಬಳಿಕ ತನ್ನ ಮೊಬೈಲ್ ನಲ್ಲಿದ್ದ ಫೋಟೋಗಳನ್ನು ಆರೋಪಿ ಪುನೀತ್ ಡಿಲೀಟ್ ಮಾಡಿದ್ದ. ಪುನೀತ್ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ಎಫ್ ಎಸ್ ಎಲ್ ಗೆ ರವಾನೆ ಮಾಡಿದ್ದರು. ಚಾರ್ಜ್ ಶೀಟ್ ನಲ್ಲಿ ಎರಡು ಫೋಟೋ ಬಗ್ಗೆ ಪೊಲೀಸರು ಉಲ್ಲೇಖಿಸಿದ್ದಾರೆ.

Leave A Reply