Arecanut Ban: ರಾಜ್ಯಾದ್ಯಂತ ಅಡಿಕೆ ಬೆಳೆ ನಿಷೇಧ? ಅಡಿಕೆ ಕ್ಯಾನ್ಸರ್ ಕಾರಕ ಅನ್ನೋ ವರದಿ ಬಂದ ಬೆನ್ನಲ್ಲೇ ಈ ನಿರ್ಧಾರ?

Share the Article

Arecanut Ban: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯೊಂದು ಅಡಿಕೆಯು ಬಾಯಿ ಕ್ಯಾನ್ಸರ್‌ ಕಾರಕ ಎಂಬ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಬೆಳೆಗಾರರ ಆತಂಕವನ್ನು ಹೆಚ್ಚಿಸಿದೆ. ಇತ್ತ ಅಡಿಕೆ ಮಾರಾಟ ಸಹಕಾರ ಸಂಘ, ಒಕ್ಕೂಟಗಳು ಕೆಂಡವಾಗಿ ವರದಿಯನ್ನು ಒಪ್ಪುವುದಿಲ್ಲ ಎಂದು ಹೇಳಿವೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಅಡಿಕೆ ನಿಷೇಧ(Arecanut Ban)ಆಗುತ್ತೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ.

ಹೌದು ಮಲೆನಾಡು ಮತ್ತು ಕರಾವಳಿ ಭಾಗದ ಸಾಂಪ್ರದಾಯಿಕ ಬೆಳೆಯಾಗಿರುವ ಹಾಗೂ ಮಾರುಕಟ್ಟೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿರುವ ಅಡಿಕೆಗೆ ಇದೀಗ ಸಂಕಷ್ಟವೊಂದು ಬಂದೊದಗಿದೆ. ಅದೇನೆಂದರೆ ಅಡಿಕೆ ನಿಷೇಧ ಆಗುವ ಮಾತು ಕೇಳಿ ಬರುತ್ತಿದೆ. ಈ ವಿಚಾರ ಸಂಚಲನ ಸೃಷ್ಟಿ ಮಾಡುತ್ತಿದೆ. ಯಾಕಂದ್ರೆ, ಅಡಿಕೆ ನಿಷೇಧ ಮಾಡಿದರೆ ಪರಿಸ್ಥಿತಿ ಮುಂದೆ ಭಾರಿ ಘೋರ ಎನ್ನುವಂತೆ ಆಗಲಿದೆ. ಹೀಗಾಗಿ ರೈತರಿಗೆ ಚಿಂತೆ ಶುರುವಾಗಿದೆ. ಹಾಗಾದರೆ, ದಿಢೀರ್ ಅಡಿಕೆ ನಿಷೇಧ ಮಾಡಲು ಕಾರಣ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಇದೀಗ ಅಡಿಕೆ ಬಳಕೆ ಕಾರಣಕ್ಕೆ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂಬ ಆರೋಪ ಹಲವು ಅಂತಾರಾಷ್ಟ್ರೀಯ ಲ್ಯಾಬ್‌ಗಳ ಮೂಲಕ ಗೊತ್ತಾಗಿದೆ. ಹೀಗಾಗಿ ಅಡಿಕೆ ಬೆಳೆ ನಿಷೇಧ ಮಾಡಿ ಕ್ಯಾನ್ಸರ್ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ವದಂತಿ ಹಬ್ಬಿದೆ. ದೇಶ ಅದರಲ್ಲೂ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಅಡಿಕೆ ವ್ಯಾಪ್ತಿ ಸಿಕ್ಕಾಪಟ್ಟೆ ಹೆಚ್ಚುತ್ತಿರುವ ಹೊತ್ತಿನಲ್ಲಿಯೇ ಬಂದಿರುವ ವರದಿ ಈಗ ರಾಜ್ಯದಲ್ಲಿ ತಲ್ಲಣ ಉಂಟು ಮಾಡಿದೆ. ಡಬ್ಲ್ಯೂಎಚ್‌ಒ ಅಂಗ ಸಂಸ್ಥೆಯಾದ ಇಂಟರ್‌ನ್ಯಾಷನಲ್‌ ಏಜೆನ್ಸಿ ಫಾರ್‌ ರಿಸರ್ಚ್ ಆ್ಯಂಡ್‌ ಕ್ಯಾನ್ಸರ್‌ (ಐಎಆರ್‌ಸಿ) ಆ.9, 2024 ರಂದು ಈ ವರದಿ ಬಿಡುಗಡೆ ಮಾಡಿದೆ. ಅಂತಾರಾಷ್ಟ್ರೀಯ ಜರ್ನಲ್‌ ಒಂದರಲ್ಲಿಈ ವರದಿ ಪ್ರಕಟಿಸಲಾಗಿದೆ. ಎಐಆರ್‌ಸಿ ಬಾಯಿ ಕ್ಯಾನ್ಸರ್‌ ಬಗ್ಗೆ ಸಂಶೋಧನೆ ಮಾಡುವ ಸಂಸ್ಥೆಯಾಗಿದ್ದು ಪ್ರತಿ ಐದು ವರ್ಷಕ್ಕೊಮ್ಮೆ ತನ್ನ ವರದಿಯನ್ನು ಬಿಡುಗಡೆ ಮಾಡುತ್ತದೆ.

ಈ ಸಂಸ್ಥೆ ಈ ಹಿಂದೆ ನೀಡಿದ ವರದಿಯಲ್ಲೂಅಡಿಕೆ ಕ್ಯಾನ್ಸರ್‌ಕಾರಕ ಎಂದು ಹೇಳಿದೆ. ಈಗ ಮತ್ತೆ ಅಡಿಕೆ ಬಳಕೆ ಮತ್ತು ಹೊಗೆ ರಹಿತ ತಂಬಾಕು( ತಿಂದು ಉಗುಳುವ) ಬಳಕೆಯನ್ನು ನಿಯಂತ್ರಿಸಿದರೆ ವಿಶ್ವದಲ್ಲಿಮೂರನೇ ಒಂದರಷ್ಟು ಬಾಯಿ ಕ್ಯಾನ್ಸರ್‌ ತಡೆಗಟ್ಟಬಹುದು ಎಂದು ಹೇಳಿದ್ದು, ತಂಬಾಕು ಮಿಶ್ರಿತ ಅಡಿಕೆ ಮಾತ್ರವಲ್ಲಅಡಿಕೆ ಬೆಳೆಯನ್ನೇ ನಿಯಂತ್ರಿಸುವ ಪ್ರಸ್ತಾಪದಿಂದಾಗಿ ಅತಂಕ ಇನ್ನಷ್ಟು ಹೆಚ್ಚಿದೆ. ಅಡಿಕೆಗೆ ಮತ್ತೆ ಕ್ಯಾನ್ಸರ್‌ಕಾರಕ ಪಟ್ಟ ಕಟ್ಟಿರುವುದಕ್ಕೆ ರಾಜ್ಯ ಅಡಿಕೆ ಮಾರಾಟ ಸಹಕಾರ ಸಂಘ, ಒಕ್ಕೂಟಗಳು ಕೆಂಡವಾಗಿ ವರದಿಯನ್ನು ಒಪ್ಪುವುದಿಲ್ಲ ಎನ್ನುತ್ತಿವೆ. ಆದರೆ ಬೆಳೆಗಾರರ ನೆತ್ತಿ ಮೇಲೆ ಮಾತ್ರ ಆತಂಕದ ತೂಗುಕತ್ತಿ ತೂಗುತ್ತಿದೆ.

ಇನ್ನು ಇದೆಲ್ಲದರ ನಡುವೆ ಅಡಿಕೆ ಬ್ಯಾನ್ ಮಾಡುವ ಈ ಸುದ್ದಿ ಸುಳ್ಳೆನ್ನಲಾಗಿದೆ, ಯಾಕಂದ್ರೆ ಅಡಿಕೆ ಮೂಲಕ ಕ್ಯಾನ್ಸರ್ ಬರಬಹುದು ಎಂಬ ವಿಚಾರ ಹಲವಾರು ವರ್ಷಗಳಿಂದಲೂ ಚರ್ಚೆಯಲ್ಲಿದೆ. ಆದರೆ ಈವರೆಗೂ ಅಡಿಕೆ ಬ್ಯಾನ್ ಆಗಿಲ್ಲ. ಈಗ ಇದರ ಬಗ್ಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಇತರ ಕಡೆಗಳಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದೆ.

Leave A Reply