Arecanut Rate: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ – ಮತ್ತಷ್ಟು ಏರಿಕೆ ಕಂಡ ಅಡಿಕೆ ದರ !!

Arecanut Rate: ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ (arecanut rate) ಮತ್ತಷ್ಟು ಚೇತರಿಕೆ ಕಂಡಿದೆ. ನಾಲ್ಕೈದು ದಿನದಿಂದ ಚೇತರಿಕೆ ಕಾಣುತ್ತಿದೆ. ಇಂದು (ನ.20) ಸಹ 150 ರೂ.ಯಷ್ಟು ಏರಿಕೆ ಕಂಡಿದೆ. ಈ ಮೂಲಕ ಸಾವಿರ ಗಡಿದಾಟಿದ್ದು, ರೈತರಿಗೆ ಖುಷಿ ನೀಡಿದೆ.

 

ಜೂನ್ ಮೊದಲ ವಾರ 54 ಸಾವಿರ ಗಡಿ ದಾಟಿದ್ದ ಬೆಲೆ, ಜೂ.20ರಿಂದ ದಿನದಿಂದ ದಿನಕ್ಕೆ ಕುಸಿಯುತ್ತ ಬಂದಿದ್ದು, ಸೆಪ್ಟೆಂಬರ್ ನಲ್ಲಿ ಹೊಸ ಅಡಿಕೆ 46 ಸಾವಿರ ಗಡಿ ತಲುಪಿತ್ತು. ಈಗ ಅಕ್ಟೋಬರ್ ಪ್ರಾರಂಭದಲ್ಲಿ ಚೇತರಿಕೆ ಕಂಡು 50 ಸಾವಿರ ಗಡಿ ಸಮೀಪ ಬಂದಿತ್ತು. ತಿಂಗಳ ಕೊನೆಯಲ್ಲಿ 51 ಸಾವಿರ ಗಡಿ ತಲುಪಿತ್ತು. ಆದರೆ, ಈಗ ನವೆಂಬರ್ ಮೊದಲ ವಾರ ಕುಸಿತ ಕಂಡು, ಮತ್ತೆ ಚೇತರಿಕೆ ಕಂಡಿದೆ.

ಇಷ್ಟೇ ಅಲ್ಲದೆ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಮತ್ತೆ ಏರಿಕೆ ಕಡೆ ಮುಖ ಮಾಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರುಮುಖದತ್ತ ಸಾಗುತ್ತಿದ್ದು ಡಬ್ಬಲ್‌ ಚೋಲ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಒಂದು ವಾರದ ಧಾರಣೆ ಗಮನಿಸಿದರೆ ಹೊಸ ಅಡಿಕೆ, ಸಿಂಗಲ್‌ ಚೋಲ್‌ ಧಾರಣೆಯಲ್ಲಿಯೂ ಹೆಚ್ಚಳ ದಾಖಲಾಗಿದೆ.

ನ. 19 ರಂದು ಹೊರ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ 510ರಿಂದ 512 ರೂ. ತನಕವೂ ಇತ್ತು. ಕೆಲವೆಡೆ 505ರಿಂದ 510 ರೂ. ಇತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 500 ರೂ. ಇತ್ತು. ನ. 15 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 330 ರೂ., ಸಿಂಗಲ್‌ ಚೋಲ್‌ ಧಾರಣೆ 420 ರೂ. ತನಕ ಇತ್ತು. ಕಳೆದ ಮೂರು ದಿನಗಳಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ., ಸಿಂಗಲ್‌ ಚೋಲ್‌ ಧಾರಣೆ 10 ರೂ.ನಷ್ಟು ಏರಿಕೆ ಕಂಡಿದೆ. ಅಂದರೆ ಹೊಸ ಅಡಿಕೆ ಕೆ.ಜಿ.ಗೆ 335 ರೂ., ಸಿಂಗಲ್‌ ಚೋಲ್‌ ಧಾರಣೆ ಕೆ.ಜಿ.ಗೆ 430 ರೂ.ದಾಖಲಾಗಿತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 350 -355 ರೂ., ಸಿಂಗಲ್‌ ಚೋಲ್‌ ಧಾರಣೆ 435-438 ರೂ. ತನಕ ಇತ್ತು.

1 Comment
  1. Büyükçekmece su kaçağı tespiti Ekibin bilgisi ve tecrübesi gerçekten etkileyici. https://trngamers.co.uk/ustaelektrikci

Leave A Reply

Your email address will not be published.