Udupi : ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ – ವಿಕ್ರಂ ಗೌಡ ತಂಗಿಯಿಂದ ಶಾಕಿಂಗ್ ಸ್ಟೇಟ್ಮೆಂಟ್!!

Udupi : ಕರ್ನಾಟಕದ ಪಶ್ಚಿಮ ಘಟ್ಟ ತಪ್ಪಲಿನ ಅರಣ್ಯದಂಚಿನ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿದ್ದು, ಉಡುಪಿ(Udupi) ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎಂಬಾತನನ್ನು ನಕ್ಸಲ್ ನಿಗ್ರಹ ಪಡೆ ಹತ್ಯೆ ಮಾಡಿದೆ. ಈ ಬೆನ್ನಲ್ಲೇ ವಿಕ್ರಂ ಗೌಡನ(Vikram Gouda) ತಂಗಿಯವರು ಶಾಕಿಂಗ್ ಸ್ಟೇಟ್ಮೆಂಟ್ ಒಂದನ್ನು ನೀಡಿದ್ದಾರೆ.

ಹೌದು, ನನ್ನ ಅಣ್ಣನ ಸಾವಿನ ಸುದ್ದಿಯನ್ನು ನಮಗೆ ಯಾರೂ ಹೇಳಿಲ್ಲ. ಬೆಳಗ್ಗೆ 7 ಗಂಟೆಗೆ ಟಿವಿ, ಸಾಮಾಜಿಕ ಜಾಲತಾಣದಲ್ಲಿ ನೋಡಿಯೇ ನಮಗೆ ಗೊತ್ತಾಗಿದ್ದು ಎಂದು ವಿಕ್ರಂ ಗೌಡನ ತಂಗಿ ಸುಗುಣಾ ಅಚ್ಚರಿ ಹೇಳಿಕೆ ನೀಡಿ ಕಣ್ಣೀರು ಹಾಕುತ್ತ ಅಣ್ಣನ ಸಾವಿಗೆ ಮರುಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಎಎನ್‌ಎಫ್ ಪಡೆಯ ಯೋಧರ ಗುಂಡೇಟಿಗೆ ನ. 18ರ ರಾತ್ರಿ ಬಲಿಯಾದ ವಿಕ್ರಂ ಗೌಡನ ತಂಗಿ ಮನೆ ಕೂಡ್ಲುವಿನ ನಾಡ್ಪಾಲುವಿನಲ್ಲಿದೆ. ಈ ವೇಳೆ ಅವರು ಅಣ್ಣನ ಸಾವಿನ ದುಃಖದಲ್ಲೂ ಆತ ತಪ್ಪು ಮಾಡಿದ್ದಾನೆ, ಏನು ಮಾಡುವುದು ಹೇಳಿ ಎನ್ನುವ ಹತಾಶೆಯ ಮಾತುಗಳನ್ನಾಡಿದ್ದಾರೆ.
ಬಳಿಕ ಮಾತನಾಡಿದ ಅವರು ಗುಲಾಬಿ-ವೆಂಕಯ್ಯ ಅವರ ನಾಲ್ವರು ಮಕ್ಕಳಲ್ಲಿ ವಿಕ್ರಂ ಗೌಡ ಹಿರಿಯವ. ಬಳಿಕ ತಂಗಿ, ಆಕೆ ಬಾಲ್ಯದಲ್ಲೇ ಮೃತಪಟ್ಟಿದ್ದಾಳೆ. ಇನ್ನೊಬ್ಬ ಸಹೋ ದರ ಸುರೇಶ್ ಹೆಬ್ರಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿ ಕೊಂಡಿ ದ್ದಾನೆ. ನಾನು ಕೊನೆಯವಳು. ಮದುವೆ ಆಗುವ ವರೆಗೆ ತಮ್ಮ ವಿಕ್ರಂ ಗೌಡನ ಜತೆ ಒಡನಾಟದಲ್ಲಿದ್ದೆ. ಬಳಿಕ ಆತನ ಸಂಪರ್ಕ ಕಡಿಮೆ ಎಂದು ಸುಗುಣಾ ಹೇಳಿದ್ದಾರೆ.