Udupi : ಲಂಚ ಪಡೆಯುವ ವೇಳೆ ಇಬ್ಬರು ಅಧಿಕಾರಿಗಳು ಲೋಕಾ ಬಲೆಗೆ!!

Udupi: ನಿವೃತ್ತ ಶಿಕ್ಷಕರ ಬಳಿ ಲಂಚ ಪಡೆಯುತ್ತಿರುವ ವೇಳೆ ಉಡುಪಿಯ(Udupi) ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

 

ಹೌದು, ನಿವೃತ್ತ ಶಿಕ್ಷಕ ಹಿತೇಂದ್ರ ಭಂಡಾರಿ(Hitendra Bhandari) ಎಂಬವರ ಪೆನ್ಶನ್ ಹಣವನ್ನು ಬಿಡುಗಡೆಗೊಳಿಸಲು ಲಂಚ ಪಡೆಯುತ್ತಿದ್ದ ವೇಳೆ ಉಡುಪಿ ಖಜಾನೆಯ ಉಪನಿರ್ದೇಶಕರು ಹಾಗೂ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

 

ಹಿತೇಂದ್ರ ಭಂಡಾರಿ ತಮ್ಮ ಪೆನ್ಶನ್ ಹಣವನ್ನು ಪಡೆಯಲು ಕಳೆದ 5 ತಿಂಗಳಿನಿಂದ ಖಜಾನೆಯ ಉಪನಿರ್ದೇಶಕರಾದ ರವಿಕುಮಾರ್ ಮತ್ತು ಸಹಾಯಕ ರಾಘವೇಂದ್ರ ಎಂಬವರು ಸತಾಯಿಸುತ್ತಿದ್ದು ರೂ 5000 ಲಂಚ ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಹಿತೇಂದ್ರ ಭಂಡಾರಿಯವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

 

ಹಿತೇಂದ್ರ ಭಂಡಾರಿಯವರ ದೂರಿನಂತೆ ಶನಿವಾರ ಮಂಗಳೂರು ಲೋಕಾಯುಕ್ತ ಎಸ್ಪಿ ನಟರಾಜ್ ಅವರ ಮಾರ್ಗದರ್ಶನದಲ್ಲಿ ಉಡುಪಿ ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ಅವರ ತಂಡ ಹಾಗೂ ಮಂಗಳೂರು ಲೋಕಾಯುಕ್ತ ಪಿಐ ಪಿ ಸುರೇಶ್ ಹಾಗೂ ಕೆ ಎನ್ ಚಂದ್ರ ಶೇಖರ್ ಅವರನ್ನೊಳಗೊಂಡ ತಂಡ ಲಂಚ ಸ್ವೀಕರಿಸುತ್ತಿದ್ದ ವೇಳೆ ಖಜಾನೆಯ ಉಪನಿರ್ದೇಶಕರಾದ ರವಿಕುಮಾರ್ ಮತ್ತು ಸಹಾಯಕ ರಾಘವೇಂದ್ರ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ

Leave A Reply

Your email address will not be published.