Police: 20 ಲಕ್ಷ ಕದ್ದು ಸೆಗಣಿಯಲ್ಲಿ ಬಚ್ಚಿಟ್ಟ ಖದೀಮ! ಕೊನೆಗೂ ಬಯಲಾಯ್ತು ಸತ್ಯ!

 

 

Police: ವ್ಯಕ್ತಿಯೊಬ್ಬ 20 ಲಕ್ಷ ರೂ. ಕಳವು ಮಾಡಿ ಸಿಕ್ಕಿಬೀಳಬಹುದು ಎನ್ನುವ ಭಯದಲ್ಲಿ ಅತೀ ಬುದ್ಧಿವಂತಿಕೆ ತೋರಿಸಿ ಹಸುವಿನ ಸಗಣಿಯೊಳಗೆ ಮುಚ್ಚಿಟ್ಟಿದ್ದ, ಆದರೂ ಪೊಲೀಸರ (Police) ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಹೌದು, ಒಡಿಶಾದ ಬಾಲಾಸೋರ್​ನಲ್ಲಿ ಘಟನೆ ನಡೆದಿದೆ. ಕಮರ್ದ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಬಡಮಂಡರುಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೀಗ ಪೊಲೀಸರ ಹುಡುಕಾಟದಿಂದ ಹಸುವಿನ ಸಗಣಿಯ ರಾಶಿಯಲ್ಲಿ ಭಾರಿ ಮೊತ್ತದ ಹಣ ಪತ್ತೆಯಾಗಿದೆ.

ಮಾಹಿತಿ ಪ್ರಕಾರ ಹೈದರಾಬಾದ್‌ನ ಕೃಷಿ ಆಧಾರಿತ ಕಂಪನಿಯ ಮಾಲೀಕನಿಂದ 20 ಲಕ್ಷಕ್ಕೂ ಹೆಚ್ಚು ಕಳ್ಳತನ ಮಾಡಿದ್ದಾನೆ. ಆದರೆ ಆರೋಪಿ ಕದ್ದ ಹಣವನ್ನು ಜೋಪಾನ ಮಾಡಲು ತನ್ನ ಸೋದರ ಮಾವ ರವೀಂದ್ರ ಬೆಹೆರಾ ಮೂಲಕ ತನ್ನ ಗ್ರಾಮಕ್ಕೆ ವರ್ಗಾಯಿಸಲು ಯೋಜಿಸಿದ್ದ. ಇದೀಗ ಕಮರ್ದಾ ಪೊಲೀಸರೊಂದಿಗೆ ರವೀಂದ್ರ ಅವರ ನಿವಾಸದಲ್ಲಿ ಶೋಧ ನಡೆಸಿದಾಗ ಹಸುವಿನ ಸಗಣಿಯಲ್ಲಿ ಬಚ್ಚಿಟ್ಟಿದ್ದ ಹಣವನ್ನು ಕೊನೆಗೂ ಪತ್ತೆ ಆಗಿದೆ.

ಆದರೆ ಗೋಪಾಲ್ ಮತ್ತು ರವೀಂದ್ರ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಕಮರ್ದಾ ಪೊಲೀಸ್ ಠಾಣೆಯ ಐಐಸಿ ಪ್ರೇಮದ ನಾಯಕ್ ಹೇಳಿದ್ದಾರೆ. ಆರೋಪಿಯ ಕುಟುಂಬದ ಸದಸ್ಯರನ್ನು ಗ್ರಾಮದಿಂದ ಬಂಧಿಸಲಾಗಿದ್ದು, ಸಕ್ರಿಯ ತನಿಖೆ ಮುಂದುವರೆದಿದ್ದು, ಗೋಪಾಲ್‌ಗಾಗಿ ಹುಡುಕಾಟ ಮುಂದುವರೆದಿದೆ.

Leave A Reply

Your email address will not be published.