Udupi: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ 63 ಲಕ್ಷದ, 900 ಗ್ರಾಂ ಚಿನ್ನ ಕಳ್ಳತನ!!

Udupi : ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವಂತಹ ಪ್ರಕರಣ ಉಡುಪಿ(Udupi) ಯಲ್ಲಿ ಬೆಳಕಿಗೆ ಬಂದಿದೆ.

ಸಂಬಂಧಿಕ ಮದುವೆ ಕಾರ್ಯಕ್ರಮಕ್ಕಾಗಿ ಮುಂಬೈಯ ಅವಿನಾಶ್ ಎಂಬವರು ತಮ್ಮ ಕುಟುಂಬದವರೊಂದಿಗೆ ನ.15ರಂದು ರೈಲಿನಲ್ಲಿ ಮುಂಬೈಯಿಂದ ಉಡುಪಿಗೆ ಹೊರಟಿದ್ದರು. ಇವರು ಒಡವೆ ಹಾಗೂ ಬಟ್ಟೆಗಳಿದ್ದ 4 ಸೂಟ್ ಕೇಸ್ಗಳನ್ನು ಬೀಗ ಹಾಕದೇ ಜೀಪ್ ಲಾಕ್ ಮಾಡಿ ಸೀಟಿನ ಕೆಳಗೆ ಇಟ್ಟಿದ್ದರು. ಇದರಲ್ಲಿ 63 ಲಕ್ಷ ಮೌಲ್ಯದ ಚಿನ್ನವನ್ನು ಕೂಡ ಇಡಲಾಗಿತ್ತು.

ನಂತರ ನ.16ರಂದು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಕಟಪಾಡಿ ಸಮೀಪದ ಮಣಿಪುರದಲ್ಲಿರುವ ಮನೆಗೆ ಹೋಗಿ ಸಂಜೆ ಬ್ಯಾಗ್ ತೆರೆದು ನೋಡಿದಾಗ 2 ಬ್ಯಾಗಿಗಳಲ್ಲಿಟ್ಟಿದ್ದ 63 ಲಕ್ಷ ರೂ. ಮೌಲ್ಯದ 900 ಗ್ರಾಂ ಚಿನ್ನಾಭರಣಗಳು ಕಳವಾಗಿರುವುದು ಕಂಡು ಬಂದಿದೆ. ಪನ್ವೆಲ್ ನಿಂದ ಕಂಕಾವಲಿ ರೈಲ್ವೆ ನಿಲ್ದಾಣದ ಮಧ್ಯೆ ಯಾರೋ ಕಳ್ಳರು ಕಳವು ಮಾಡಿರಬಹುದೆಂದು ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today
Leave A Reply

Your email address will not be published.