Cancer: ತನ್ನದೇ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಶಮನ ಮಾಡಿದ ಮಹಿಳೆ! ಹೇಗೆ ಅಂತಿರಾ?!

Cancer: ಕ್ಯಾನ್ಸರ್‌ ಅನ್ನೋದೇ ಒಂದು ಮಹಾ ಖಾಯಿಲೆ. ಹಾಗಿರುವಾಗ ಸ್ತನ ಕ್ಯಾನ್ಸರ್‌ ಮಹಿಳೆಯ ದೇಹಕ್ಕೆ ಅವರಿಸಿದರೆ ಮತ್ತೇ ಬದುಕುಳಿಯುವುದು ಅಥವಾ ಗುಣ ಪಡಿಸುವುದು ಅಷ್ಟು ಸುಲಭವಲ್ಲ. ಆದ್ರೆ ಇಲ್ಲೊಬ್ಬಳು ಮಹಿಳೆ
ಕೊನೆಯ ಹಂತದ ಸ್ತನ ಕ್ಯಾನ್ಸರನ್ನು (Cancer) ಗುಣಪಡಿ­ಸಿ­­­­ಕೊಂ­ಡಿದ್ದಾರೆ. ಅದು ಹೇಗೆ ಇಲ್ಲಿದೆ ನೋಡಿ.

ಮುಖ್ಯವಾಗಿ ಕೀಮೋಥೆರಪಿ ಇಲ್ಲದೇ, ಕೇವಲ ಲ್ಯಾಬ್‌ನಲ್ಲಿ ಬೆಳೆಸಲಾದ ವೈರಸ್‌ಗಳನ್ನು ಬಳಸಿ ಕೊನೆಯ ಹಂತದ ಸ್ತನ ಕ್ಯಾನ್ಸರನ್ನು ವಿಜ್ಞಾನಿಯೊಬ್ಬರು ಗುಣಪಡಿ­ಸಿ­­­­ಕೊಂ­ಡಿದ್ದಾರೆ. ಹೌದು, ಬಿಯಾಟ ಹ್ಯಾಲ್ಸಿ (49) ಎಂಬ ವಿಜ್ಞಾನಿ ಈ ಸ್ವಯಂ ಪ್ರಯೋಗಕ್ಕೆ ಒಳಗಾಗಿ ಯಶಸ್ಸು ಸಾಧಿಸಿದ್ದಾರೆ ಎಂದು ವರದಿ ಆಗಿದೆ.

ಬಿಯಾಟ ಹ್ಯಾಲ್ಸಿ 2020ರಲ್ಲಿ ಸ್ತನ ಕ್ಯಾನ್ಸರ್‌ಗೆ ಕೀಮೋಥೆರಪಿ ಪಡೆದು ಗುಣವಾಗಿ­ದ್ದರು. ನಂತರ ಮತ್ತೂಮ್ಮೆ ಕ್ಯಾನ್ಸರ್‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿ, ಲ್ಯಾಬ್‌ನಲ್ಲಿ ಬೆಳೆಸಿದ ವೈರಸ್‌ಗಳನ್ನು ಇಂಜೆಕ್ಟ್ ಮಾಡಿಕೊಂಡು ಗುಣಮುಖ­ರಾ­­ಗಿದ್ದಾರೆ.

ಸಾಮಾನ್ಯವಾಗಿ ಕ್ಯಾನ್ಸರ್‌ ಚಿಕಿತ್ಸೆಗಾಗಿ ಲ್ಯಾಬ್‌ನಲ್ಲಿ ಬೆಳೆಸಿದ ವೈರಸ್‌ ಬಳಕೆ ಮಾಡುವುದನ್ನು ವೈದ್ಯರು ಅನುಸರಿಸುತ್ತಾರೆ. ಈ ವೈರಸ್‌ಗಳು ಕ್ಯಾನ್ಸರ್‌ಕಾರಕ ವೈರಸ್‌ಗಳನ್ನು ಕೊಲ್ಲುವ ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿರುತ್ತವೆ. ಆದ್ರೆ ಕ್ಯಾನ್ಸರ್‌ನ ಮೊದಲ ಹಂತದಲ್ಲಿ ಮಾತ್ರ ಈ ಮಾದರಿ ಚಿಕಿತ್ಸೆಯನ್ನು ಬಳಸಲಾ­ಗುತ್ತಿತ್ತು. ಅದರಲ್ಲೂ ವಿಶೇಷ ಅಂದ್ರೆ ಈಗ ಕೊನೇ ಹಂತದ ಕ್ಯಾನ್ಸರ್‌ ಸಹ ಗುಣವಾಗಿದೆ ಎನ್ನುವುದು ವಿಜ್ಞಾನಿಗಳಿಗೂ ಶಾಕ್ ನೀಡಿದೆ.

Leave A Reply

Your email address will not be published.