Song Jae-rim passes away: ದಕ್ಷಿಣ ಕೊರಿಯಾದ ಖ್ಯಾತ ಯುವ ನಟ ಸಾಂಗ್ ಜೇ-ರಿಮ್ ಸಾವು – ಕೊರಿಯನ್‌ ಸಿನಿ ಪ್ರೇಮಿಗಳಿಗೆ ದೊಡ್ಡ ಅಘಾತ !!

Share the Article

Song Jae-rim passes away: ದಕ್ಷಿಣ ಕೊರಿಯಾದ ಜನಪ್ರಿಯ ನಟ ಸಾಂಗ್ ಜೇ-ರಿಮ್ ಮಂಗಳವಾರ ನಿಧನರಾಗಿದ್ದಾರೆ(Song Jae-rim passes away). 39 ವರ್ಷ ವಯಸ್ಸಿನ ಜೇ-ರಿಮ್, ಸಿಯೋಲ್ ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನಾ ಸ್ಥಳದಲ್ಲಿ ಎರಡು ಪುಟದ ಡೆತ್ ನೋಟ್ ಪತ್ತೆಯಾಗಿದೆ ಎನ್ನಲಾಗಿದೆ. ನಟನ ಅಂತ್ಯಕ್ರಿಯೆ ನವೆಂಬರ್ 14 ರಂದು ನಡೆಯಲಿದೆ. ಸಾಂಗ್ ಜೇ-ರಿಮ್ ನಿಧನ ಸುದ್ದಿ ತಿಳಿದು ಕೊರಿಯನ್ ಸಿನಿ ಪ್ರೇಕ್ಷಕರಿಗೆ ಆಘಾತವಾಗಿದ್ದು ಅಪಾರ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

ಅಂದಹಾಗೆ ಸಾಂಗ್‌ ಜೆ ರಿಮ್‌ 2009ರ “ಆಕ್ಟ್ರೇಸ್‌” ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ದಿ ಮೂನ್ ಎಂಬ್ರೇಸಿಂಗ್ ದಿ ಸನ್ ಚಿತ್ರದಲ್ಲಿ ನಟಿಸಿದ ಬಳಿಕ ಅವರು ಮನೆಮಾತಾಗಿದ್ದರು. ಲಾರ್ಡ್ ಕಿಮ್ ಜೇ-ವೂನ್ ಎಂಬ ನಿಷ್ಠಾವಂತ ಅಂಗರಕ್ಷಕನ ಪಾತ್ರವನ್ನು ನಿರ್ವಹಿಸಿದ್ದರು.

ಟು ವೀಕ್ಸ್ (2013) ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಇದರಲ್ಲಿ ಕೊಲೆಗಡುಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಅನ್‌ಕೈಂಡ್ ಲೇಡೀಸ್ (2015), ಸೀಕ್ರೆಟ್ ಮದರ್ (2018), ಐ ವಾನ್ನಾ ಹಿಯರ್ ಯುವರ್ ಸಾಂಗ್ (2019), ಕೆಫೆ ಮಿನಾಮ್‌ಡಾಂಗ್ (2022) ಮತ್ತು ಇತ್ತೀಚೆಗೆ ಮೈ ಮಿಲಿಟರಿ ವ್ಯಾಲೆಂಟೈನ್ (2024)ನಂತಹ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. 2024ರಲ್ಲಿ ಇವರು ಕ್ವೀನ್ ವೂನಲ್ಲಿ ಕಾಣಿಸಿಕೊಂಡರು.

Leave A Reply