Mangaluru : ಪತ್ನಿ, ಮಗುವನ್ನು ಕೊಂದು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಒಂದೊಂದೇ ಬೆಳಕಿಗೆ ಬರುತ್ತಿದೆ ಕಾರ್ತಿಕ್ ಭಟ್ ನ ಅವ್ಯವಹಾರಗಳು.!!
Mnagalur : ಮಂಗಳೂರಿನ(Mamgaluru) ಕಿನ್ನಿಗೋಳಿ ವ್ಯಾಪ್ತಿಯ ಪಕ್ಷಿಕೆರೆಯ ಮನೆಯೊಂದರಲ್ಲಿ ಪತ್ನಿ ಹಾಗೂ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿ ಬಳಿಕ ತಾನು ರೈಲಿಗೆ ತಲೆ ಕೊಟ್ಟು ಹೋಟೆಲ್ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಕರಾವಳಿಯ ಸುತ್ತ ಮುತ್ತ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನೆಲು ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು, ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಮುಲ್ಕಿಯ ಪಕ್ಷಿಕೆರೆ ಗ್ರಾಮದಲ್ಲಿ ಹೋಟೆಲ್ ಉದ್ಯಮಿ ಕಾರ್ತಿಕ್ ಭಟ್(Karthik Bhat) ಅವರು ತನ್ನ ಪತ್ನಿ ಹಾಗೂ ಮಗುವನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಭಟ್ ಹಾಗೂ ಸಹೋದರಿ ಕಣ್ಮಣಿಯನ್ನು ಬಂಧಿಸಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸುವ ವೇಳೆ ಅವರಿಗೆ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ ನ ಪ್ರಕಾರ ತಾಯಿ ಮತ್ತು ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೋಲಿಸರ ಮಾಹಿತಿ ಪ್ರಕಾರ ಮೃತ ಕಾರ್ತಿಕ್ ನಾಲ್ಕು ಪುಟಗಳ ಡೆತ್ ನೋಟ್ ನಲ್ಲಿ ತಾಯಿ ಶ್ಯಾಮಲಾ ಹಾಗೂ ಅಕ್ಕ ಕಣ್ಮಣಿಯನ್ನು ಪ್ರಸ್ತಾಪ ಮಾಡಿ ತಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ.
ಅಲ್ಲದೆ ಹೆಂಡತಿ ಮತ್ತು ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದ ಪಕ್ಷಿಕೆರೆಯ ಕಾರ್ತಿಕ್ ಭಟ್ ಹಣೆ ಬರಹ ಇದೀಗ ಒಂದೊಂದಾಗಿ ಬಯಲಾಗುತ್ತಿದೆ. ಐಷರಾಮಿ ಜೀವನಕ್ಕೆ ಹಣಕ್ಕಾಗಿ ತನ್ನ ಗೆಳೆಯನ ಚಿನ್ನದ ಮೇಲೂ ಕಾರ್ತಿಕ್ ಕಣ್ಣಿಟ್ಟು, ಚಿನ್ನವನ್ನು ಲಪಟಾಯಿಸಿದ್ದಾನೆ. ಅನ್ಲೈನ್ ಆಟದ ಗೀಳು ಹೊಂದಿದ ಕಾರ್ತಿಕ್ ಸಾಕಷ್ಟು ಹಣ ಕಳೆದುಕೊಂಡಿರಬೇಕು ಈ ಕಾರಣದಿಂದ ಹಲವರ ಬಳಿ ಸಾಲ ಪಡೆದಿದ್ದು ಹಿಂದಿರುಗಿಸಲಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಸ್ಥಳೀಯ ವ್ಯಕ್ತಿಯೋರ್ವರು ಕಾರ್ತಿಕ್ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಚಿನ್ನದ ಒಡವೆ ಇಟ್ಟಿದ್ದು, ಈ ಮೂಲಕ 3 ಲಕ್ಷ ರೂ ಸಾಲ ಪಡೆದಿದ್ದರು. ಇದೀಗ ಅದನ್ನು ಪರಿಶೀಲನೆ ಮಾಡುವಾದ ಆ ಚಿನ್ನದ ಒಡವೆ, ಅಡವಿಟ್ಟು ನಾಲ್ಕು ತಿಂಗಳಲ್ಲೇ ಅಲ್ಲಿಂದ ನಾಪತ್ತೆಯಾಗಿದೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ.
ಪಕ್ಷಿಕೆರೆ ಹೊಸಕಾಡು ನಿವಾಸಿ, ಸ್ಥಳೀಯ ಉದ್ಯಮಿ ಮಹಮ್ಮದ್ ಎನ್ನುವವರು ಪಕ್ಷಿಕೆರೆಯ ಬ್ಯಾಂಕ್ ನಲ್ಲಿ ತನ್ನ 10 ಪವನ್ ಚಿನ್ನ ಅಡವಿಟ್ಟಿದ್ದರು, ಅದರಿಂದ 1.60 ಲಕ್ಷ ಸಾಲ ಪಡೆದಿದ್ದರು. ಈ ಮಾಹಿತಿ ಪಡೆದ ಕಾರ್ತಿಕ್ ಭಟ್ ತಾನೂ ಕೆಲಸ ಮಾಡುತ್ತಿದ್ದ ಸಹಕಾರಿ ಸಂಘದಲ್ಲಿ ನಿಮ್ಮ ಚಿನ್ನಾಭರಣವನ್ನು ಅಡವಿಟ್ಟರೆ ಹೆಚ್ಚಿನ ಸಾಲ ನೀಡುದಾಗಿ ಭರವಸೆ ಕೊಟ್ಟಿದ್ದ. ಅದರಂತೆ ಮಹಮ್ಮದ್ ಅವರು ಪಕ್ಷಿಕೆರೆ ಬ್ಯಾಂಕ್ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣವನ್ನು ಬಿಡಿಸಿದ್ದರು. ಆ ಚಿನ್ನಾಭರಣವನ್ನು ಕಾರ್ತಿಕ್ ಬ್ರಾಂಚ್ ಮ್ಯಾನೇಜರ್ ಆಗಿದ್ದ ಸೊಸೈಟಿಯಲ್ಲಿ ಅಡವಿರಿಸಿ 3.04 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು.
ಕಾರ್ತಿಕ್ ಭಟ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸಾಲ ಪಡೆದಿದ್ದ ಸೊಸೈಟಿಗೆ ಹೋಗಿ ಮಾಹಿತಿ ಕೇಳಿದಾಗ. ಆ ಚಿನ್ನಾಭರಣವನ್ನು ಈಗಾಗಲೇ ಬಿಡಿಸಿಲಾಗಿದೆ ಎಂದು ತಿಳಿದಿದೆ. ಮಹಮ್ಮದ್ ಅಡವಿರಿಸಿದ್ದ 10 ಪವನ್ ಚಿನ್ನಾಭರಣವನ್ನು ಮ್ಯಾನೇಜರ್ ಆಗಿದ್ದ ಕಾರ್ತಿಕ್ ಬಿಡಿಸಿಕೊಂಡಿದ್ದ. ಈ ಚಿನ್ನಾಭರಣವನ್ನು ಕಾರ್ತಿಕ್ ಹೆಚ್ಚಿನ ಬೆಲೆಗೆ ಬೇರೆಡೆ ಮಾರಾಟ ಮಾಡಿರಬಹುದು ಅಥವಾ ಅಡವಿರಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಅಲ್ಲದೆ ಕಾರ್ತಿಕ್ ಭಟ್ ತಾನು ಕೆಲಸ ಮಾಡುತ್ತಿದ್ದ ಸೊಸೈಟಿಯಲ್ಲಿ ಹಣಕ್ಕಾಗಿ ಕೆಲವು ಅವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ಈ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು. ಕಾರ್ತಿಕ್ ಪತ್ನಿ ಪ್ರಿಯಾಂಕ, ಪ್ರತೀ ದಿನ ಸುರತ್ಕಲ್ ಗೆ ಜಿಮ್ ಗೆ ಹೋಗುತ್ತಿದ್ದು, ನಂತರ ಮನೆಯ ಕೋಣೆಯಲ್ಲಿ ಇರುತ್ತಿದ್ದಳು ಇಡೀ ದಿನ ಮನೆಯ ಕೊಣೆಯಲ್ಲಿ ಏನು ಮಾಡುತ್ತಿದ್ದಳು ಎಂಬುದೇ ಪ್ರಶ್ನೆಯಾಗಿದೆ. ಮನೆಯಲ್ಲಿ ಅವರಿದ್ದ ಕೋಣೆಯಲ್ಲಿ ಪತ್ತೆಯಾದ 2 ಚೂರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಕಾರ್ತಿಕ ಮತ್ತು ಪ್ರಿಯಾಂಕ ಮೊಬೈಲ್ ಗಳು ಶೌಚಾಲಯದ ಕೊಮೊಡ್ ನಲ್ಲಿ ಸಿಕ್ಕಿದ್ದು ಈ ರೀತಿ ಯಾಕೆ ಮಾಡಿದ್ದಾರೆ ಎಂಬುವುದು ಇನಷ್ಟು ಸಂಶಯಕ್ಕೆ ಎಡೆ ಮಾಡಿದೆ. ಸದ್ಯ ಮುಲ್ಕಿ ಪೊಲೀಸರು ಇನ್ನಷ್ಟು ಮಾಹಿತಿಗಾಗಿ ತನಿಖೆ ನಡೆಸುತ್ತಿದ್ದಾರೆ.