Chikkamagaluru: ಚಿಕ್ಕಮಗಳೂರು ನಕ್ಸಲ್ ಬೆಂಬಲಿತ ಶಂಕಿತರು ವಶಕ್ಕೆ
Chikkamagaluru: ಮಲೆನಾಡಿನಲ್ಲಿ ನಕ್ಸಲರ ಸದ್ದು ಮತ್ತೆ ಮುಂದುವರಿದಿದೆ. 2014 ರಲ್ಲಿ ಕಂಡ ನಕ್ಸಲರ ಹೆಜ್ಜೆ ಗುರುತು ಇದೀಗ ದಶಕಗಳ ಬಳಿಕ ಮತ್ತೆ ಗರಿಗೆದರಿದೆ.
ಮಲೆನಾಡಿನಲ್ಲಿ ಒತ್ತುವರಿ ತೆರವು ಗುಮ್ಮ ಕಸ್ತೂರಿ ರಂಗ್ ವರದಿ ಭಯದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಕ್ಸಲರು ಗ್ರಾಮಸ್ಥರ ಸಂಪರ್ಕ ಮಾಡುತ್ತಿರುವ ಕುರಿತು ಪೊಲೀಸರಿಗೆ ತಿಳಿದು ಬಂದಿರುವ ಕುರಿತು ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸರು ಹಾಗೂ ಎ.ಎನ್.ಎಫ್ ಪೊಲೀಸರು ನಕ್ಸಲ್ ಬೆಂಬಲಿಗರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜ್ಯ ಗುಪ್ತಚರ ಮಾಹಿತಿ ಆಧಾರದಲ್ಲಿ ನಕ್ಸಲ್ ಬೆಂಬಲಿಗ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಕುರಿತು ವರದಿಯಾಗಿದೆ.
ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಓರ್ವ ವ್ಯಕ್ತಿಯನ್ನು ಭೇಟಿಯಾಗಲೆಂದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಗಡಿಭಾಗದ ಇಬ್ಬರು ಶಂಕಿತ ವ್ಯಕ್ತಿಗಳು ಬಂದಿರುವ ಕುರಿತು ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಬಂದಿತ್ತು.
ಹಾಗಾಗಿ ಖಚಿತ ಮಾಹಿತಿ ದೊರಕಿದ ಕಾರಣ, ಇಬ್ಬರನ್ನು ಆಧಾರದಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದು, ಶೋಧ ನಡೆಸಿ ನಾಡ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಕಾರ್ಕಳ ಎ.ಎನ್.ಎಫ್ ಎಸ್ಪಿ ಹಾಗೂ ಚಿಕ್ಕಮಗಳೂರು ಎಸ್ಪಿ ನೇತೃತ್ವದ ತಂಡದ ಪೊಲೀಸರು ನಕ್ಸಲರಿಗೆ ಮಾಹಿತಿ ಹಾಗೂ ಸಹಕಾರ ಹಿನ್ನಲೆಯಲ್ಲಿ ಇಬ್ಬರು ಶಂಕಿತರಿಗೆ ಸಂಬಂಧಿಸಿದ ಸ್ಥಳದಲ್ಲಿ ಶೃಂಗೇರಿ ಪೊಲೀಸ್ ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.