Bengaluru: ಬೆಂಗಳೂರಲ್ಲೊಂದು ಡೇಂಜರ್ ಏರಿಯಾ! ತಪ್ಪಿಯೂ ಇಲ್ಲಿ ಹೋಗದಿರಿ! ಅರೆ ಯಾಕೆ ಅಂತೀರಾ?!

Bengaluru: ಬೆಂಗಳೂರಲ್ಲೊಂದು (Bengaluru) ನಿಮಗೆ ತಿಳಿಯದ ಡೇಂಜರ್ ಏರಿಯಾ ಒಂದು ಇದೆ. ಇಲ್ಲಿ ನೀವು ತಪ್ಪಿಯೂ ಹೋಗದಿರಿ! ಯಾಕೆಂದರೆ ರಾಜ್ಯದಲ್ಲಿ ಇತ್ತಿಚೆಗೆ ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತೆಯೇ ಬೆಂಗಳೂರಿನ ಈ ಏರಿಯಾದಲ್ಲಿ 500ಕ್ಕೂ ಹೆಚ್ಚು ಜನರ ಗುಂಪು ವಾಸವಾಗಿದೆ ಎಂದು ಹೇಳಲಾಗುತ್ತಿದೆ. ಇವರು ಜನರ ಮಧ್ಯೆ ಇದ್ದು ದೋಚುತ್ತಾರೆ. ಇವರ ಕೃತ್ಯಗಳಿಂದ ಸ್ಥಳಿಯರು ರೋಸಿಹೋಗಿದ್ದಾರೆ.

ಹೌದು ಬೆಂಗಳೂರಿನ ಯಲಹಂಕದ ಬಳಿ ನೆಲೆಸಿರುವ ಈ ಜನರು ಕಣ್ಣು ಹಾಕಿದ್ರೆ ಸಾಕು ಎಲ್ಲವೂ ಮಾಯ. ಅಮೃತಹಳ್ಳಿಯ ಈ ಐನೂರು ಜನರ ಬಳಿ ಯಾರೊಬ್ಬರೂ ಸುಳಿಯೋದೆ ಇಲ್ಲ. ಅಷ್ಟರ ಮಟ್ಟಿಗೆ ಈ ಅಕ್ರಮ ವಲಸಿಗರ ಗ್ಯಾಂಗ್ ಭಯ ಹುಟ್ಟುಹಾಕಿದ್ದಾರೆ.

ಅಮೃತಹಳ್ಳಿಯ ಒಂದೂವರೆ ಎಕರೆ ಜಾಗದಲ್ಲಿ ಇರುವ ಇವರು ಪಕ್ಕಾ ಬಾಂಗ್ಲಾದೇಶ ವಲಸಿಗರು ಅಥವಾ ಮಯನ್ಮಾರ್, ಬರ್ಮಾ ದೇಶದಿಂದಲೂ ಬಂದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಇವರನ್ನ ಪ್ರಶ್ನೆ ಮಾಡಿದ್ರೆ, ಫೇಕ್ ಆಧಾರ್ ಕಾರ್ಡ್, ಫೇಕ್ ಓಟರ್ ಕಾರ್ಡ್ ತೋರಿಸಿ, ಇದು ನಮ್ಮ‌ ರಿಯಲ್ ಆಧಾರ್ ಕಾರ್ಡ್ ಎಂದು ಚೂರು ಅನುಮಾನ ಬಾರದಂತೆ ವರ್ತಿಸುತ್ತಾರೆ. ಇವರಿಗೆ ಏನೇ ಆದ್ರೂ ಕೂಡಲೇ ಸ್ಥಳೀಯರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಪದೆ ಪದೆ ಇವರ ಕಾಟ ಹೆಚ್ಚಾಗ್ತಿದೆ ಅಂತ ಸ್ಥಳೀಯರು ದೂರು ಕೊಟ್ರೂ ಪೊಲೀಸರು ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಾರೆ ಎಂದು ಆರೋಪಿಸಲಾಗಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಒಂದು ವೇಳೆ ಕಳವು ಮಾಡಿದ್ದನ್ನ ಪ್ರಶ್ನೆ ಮಾಡಿದ್ರೆ ಸ್ಥಳೀಯರ ಮೇಲೆ ಈ ಡೇಂಜರ್ ಗುಂಪು ಹಲ್ಲೆ ಮಾಡುತ್ತದೆ. ಈಗಾಗಲೇ ಅಕ್ರಮ ವಲಸಿಗರಿಂದ ಮೂರು ನಾಲ್ಕು ಸ್ಥಳೀಯರ‌ ಮೇಲೆ‌ ಹಲ್ಲೆ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ರೂವ ಪೊಲೀಸರು ಕ್ಯಾರೆ ಎನ್ನತ್ತಿಲ್ಲವಂತೆ. ಮುಖ್ಯವಾಗಿ ಈ ವಲಸಿಗರು ರಾತ್ರೋರಾತ್ರಿ ಕಳ್ಳತನಕ್ಕೆ ಇಳಿಯುತ್ತಾರೆ. ರಾತ್ರಿ ವೇಳೆ ಬೋರ್ವೆಲ್ ಕೇಬಲ್ ಕಳ್ಳತನ ಮಾಡುತ್ತಾರೆ. ನೋಡೋಕೆ ಕಸ ಬೇರ್ಪಡಿಸೋ ವೃತ್ತಿ ಮಾಡುವುದಾಗಿ ಹೇಳುತ್ತಾರೆ ಆದರೆ ಮಾಡೋದು ಐನಾತಿ ಕಳ್ಳತನ ಕೆಲಸವಂತೆ. ಹೌದು ಹಗಲೊತ್ತಲ್ಲೇ ಮನೆಗಳಲ್ಲಿ ಕಳವು ಮಾಡುತ್ತಿರುವುದರಿಂದ ಅಮೃತಹಳ್ಳಿ ಜನರು ನಿತ್ಯವೂ ಸಂಕಷ್ಟ ಎದುರಿಸುತ್ತಿದ್ದಾರೆ.

Leave A Reply

Your email address will not be published.