Muslim women: ಮುಸ್ಲಿಂ ಮಹಿಳೆಯರಿಗೆ ಹೊಸ ಕಾನೂನು ಜಾರಿ: ಇನ್ಮುಂದೆ ಬುರ್ಖಾ ಧರಿಸಿ ಓಡಾಡುವಂತಿಲ್ಲ!

Muslim women: ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವ ಸಂಪ್ರದಾಯ ಇದೆ. ಆದ್ರೆ ಸ್ವಿಟ್ಜರ್ಲ್ಯಾಂಡ್‌ ದೇಶವು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಹೌದು, ಮಹಿಳೆಯರು (Muslim women) ಕಣ್ಣು, ಬಾಯಿ, ಮೂಗನ್ನು ಮುಚ್ಚುವ ಬುರ್ಖಾ ಧರಿಸುವುದಕ್ಕೆ ಹಾಗೂ ಮುಖ ಗವಸನ್ನು ಧರಿಸುವುದಕ್ಕೆ ನಿಷೇಧ ಹೇರಿದೆ.

ಜನವರಿ 1, 2024 ರಿಂದ ಈ ಕಠಿಣ ನಿಯಮ ಜಾರಿಯಾಗಲಿದ್ದು, ನಿಯಮವನ್ನು ಉಲ್ಲಂಘಿಸಿದವರಿಗೆ 1,000 ಸ್ವಿಸ್‌ ಫ್ರಾಂಕ್‌ ಅಂದರೆ ಅಂದಾಜು 96,280 ರೂ. ಭಾರೀ ದಂಡವನ್ನು ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈಗಾಗಲೇ ಫ್ರಾನ್ಸ್‌, ಚೀನಾ, ಡೆನ್ಮಾರ್ಕ್‌, ಬಲ್ಗೇರಿಯಾ, ಆಸ್ಟ್ರೀಯಾ, ಬೆಲ್ಜಿಯಮ್‌ ಇತ್ಯಾದಿ ದೇಶಗಳು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವುದಕ್ಕೆ ನಿಷೇಧವನ್ನು ಹೇರಿವೆ. ಇದೀಗ ಈ ಪಟ್ಟಿಗೆ ಸ್ವಿಟ್ಜರ್ಲ್ಯಾಂಡ್‌ ದೇಶವೂ ಕೂಡಾ ಸೇರ್ಪಡೆಯಾಗಿದೆ.

ಹಾಗಿದ್ರೆ ಎಲ್ಲಿ ಬುರ್ಖಾ ಧರಿಸಬೇಕು!? ವಿಮಾನ, ಪವಿತ್ರ ಸ್ಥಳಗಳು, ಪೂಜಾ ಆವರಣಗಳಲ್ಲಿ ಬುರ್ಖಾಗಳನ್ನು ಧರಿಸಬಹುದು. ಅಥವಾ ವೈದ್ಯಕೀಯ ಕಾರಣಗಳು ಹಾಗೂ ವಿಪರೀತ ಚಳಿಯ ಸಂದರ್ಭದಲ್ಲಿ ಮುಖ ಮುಚ್ಚುವಂತೆ ಹೊದಿಕೆಗಳನ್ನು ಧರಿಸುವಂತೆ ಸರ್ಕಾರದಿಂದ ವಿನಾಯಿತಿ ಇದೆ.

Leave A Reply

Your email address will not be published.