Holiday: ಕೇಂದ್ರ ಸರ್ಕಾರದಿಂದ 2025ರ ರಜಾದಿನಗಳ ಪಟ್ಟಿ ಬಿಡುಗಡೆ!

Holiday: ಕೇಂದ್ರ ಸರ್ಕಾರ 2025ರ ಸಾಲಿನ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಎರಡು ವಿಧದ ರಜಾದಿನಗಳನ್ನು (Holiday) ವಿಂಗಡಿಸಿದ್ದು, ಗೆಜೆಟೆಡ್/ಕಡ್ಡಾಯ ರಜೆ ಮತ್ತು ನಿರ್ಬಂಧಿತ ರಜೆ ಎಂದು ವಿಂಗಡನೆ ಮಾಡಲಾಗಿದೆ. ಅಂದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, 17 ಗೆಜೆಟೆಡ್ ಮತ್ತು 34 ನಿರ್ಬಂಧಿತ ರಜೆಗಳು ಸೇರಿವೆ. ಈ ಎಲ್ಲಾ ರಜೆಗಳಲ್ಲಿ ಪ್ರಮುಖ ಧಾರ್ಮಿಕ ಹಬ್ಬ ಮತ್ತು ರಾಷ್ಟ್ರೀಯ ದಿನಗಳು ಸಹ ಸೇರಿವೆ. ಗೆಜೆಟೆಡ್ ರಜಾದಿನಗಳು ಕಡ್ಡಾಯವಾಗಿದ್ದು, ನಿರ್ಬಂಧಿತ ರಜೆಗಳು ಉದ್ಯೋಗಿಯ ಇಚ್ಛೆಯ ಮೇಲೆ ನಿರ್ಧರಿತವಾಗುತ್ತದೆ. ಅಂದರೆ ಉದ್ಯೋಗಿಗಳು ತಮ್ಮ ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆಗೆ ಅನುಗುಣವಾಗಿ ಐಚ್ಛಿಕ ರಜೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಗಜೆಟೆಡ್ ರಜಾದಿನಗಳ ಪಟ್ಟಿ:
ಜನವರಿ 26 ಗಣರಾಜ್ಯೋತ್ಸವ ಭಾನುವಾರ
ಫೆಬ್ರವರಿ 26 ಮಹಾ ಶಿವರಾತ್ರಿ ಬುಧವಾರ
ಮಾರ್ಚ್ 14 ಹೋಳಿ ಶುಕ್ರವಾರ
ಮಾರ್ಚ್ 31 ಈದ್-ಉಲ್-ಫಿತರ್ ಸೋಮವಾರ
ಏಪ್ರಿಲ್ 10 ಮಹಾವೀರ ಜಯಂತಿ ಗುರುವಾರ
ಏಪ್ರಿಲ್ 18 ಗುಡ್ ಫ್ರೈಡೆ ಶುಕ್ರವಾರ
ಮೇ 12 ಬುದ್ಧ ಪೂರ್ಣಿಮ ಸೋಮವಾರ
ಜೂನ್ 7 ಬಕ್ರೀದ್ ಶನಿವಾರ
ಜುಲೈ 6 ಮೊಹರಂ ಭಾನುವಾರ
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಶುಕ್ರವಾರ
ಆಗಸ್ಟ್ 16 ಕೃಷ್ಣ ಜನ್ಮಾಷ್ಠಮಿ ಶನಿವಾರ
ಸೆಪ್ಟೆಂಬರ್ 5 ಮಿಲಾದ್-ಉನ್-ನಬಿ ಶುಕ್ರವಾರ
ಅಕ್ಟೋಬರ್ 2 ಗಾಂಧಿ ಜಯಂತಿ, ದಸರಾ ಶುಕ್ರವಾರ
ಅಕ್ಟೋಬರ್ 20 ದೀಪಾವಳಿ ಸೋಮವಾರ
ನವೆಂಬರ್ 5 ಗುರು ನಾನಕ್ ಜಯಂತಿ ಬುಧವಾರ
ಡಿಸೆಂಬರ್ 25 ಕ್ರಿಸ್ಮಸ್ ಗುರುವಾರ
ಐಚ್ಛಿಕ ರಜಾದಿನಗಳ ಪಟ್ಟಿ:
ಜನವರಿ 1 ಹೊಸ ವರ್ಷದ ಆಚರಣೆ ಬುಧವಾರ
ಜನವರಿ 6 ಗುರು ಗೋಬಿಂದ್ ಸಿಂಗ್ ಜಯಂತಿ ಸೋಮವಾರ
ಜನವರಿ 14 ಮಕರ ಸಂಕ್ರಾಂತಿ/ಪೊಂಗಲ್/ಮಾಘ ಬಿಹು ಮಂಗಳವಾರ
ಫೆಬ್ರವರಿ 2 ಬಸಂತ್ ಪಂಚಮಿ ಭಾನುವಾರ
ಫೆಬ್ರವರಿ 12 ಗುರುರವಿ ದಾಸ್ ಜಯಂತಿ ಬುಧವಾರ
ಫೆಬ್ರವರಿ 19 ಶಿವಾಜಿ ಜಯಂತಿ ಬುಧವಾರ
ಫೆಬ್ರವರಿ 23 ಸ್ವಾಮಿ ದಯಾನಂದ ಸರಸ್ವತಿ ಜಯಂತಿ ಭಾನುವಾರ
ಮಾರ್ಚ್ 13 ಹೋಳಿ ದಹನ ದಿನ ಗುರುವಾರ
ಮಾರ್ಚ್ 14 ಡೋಲ್‌ಯಾತ್ರ ಶುಕ್ರವಾರ
ಏಪ್ರಿಲ್ 16 ರಾಮ ನವಮಿ ಭಾನುವಾರ
ಆಗಸ್ಟ್ 15 ಜನ್ಮಾಷ್ಠಮಿ ಶುಕ್ರವಾರ
ಆಗಸ್ಟ್ 27 ಗಣೇಶ ಚತುರ್ಥಿ ಬುಧವಾರ
ಸೆಪ್ಟೆಂಬರ್ 5 ಓಣಂ ಬುಧವಾರ
ಸೆಪ್ಟೆಂಬರ್ 29 ದಸರಾ ಮಂಗಳವಾರ
ಅಕ್ಟೋಬರ್ 1 ದಸರಾ ಮಹಾನವಮಿ ಬುಧವಾರ
ಅಕ್ಟೋಬರ್ 7 ವಾಲ್ಮೀಕಿ ಜಯಂತಿ ಮಂಗಳವಾರ
ಅಕ್ಟೋಬರ್ 10 ಕರ್ವಾ ಚೌಥ್ ಶುಕ್ರವಾರ
ಅಕ್ಟೋಬರ್ 20 ನರಕ ಚತುರರ್ದಶಿ ಸೋಮವಾರ
ಅಕ್ಟೋಬರ್ 22 ಗೋವರ್ಧನ ಪೂಜೆ ಬುಧವಾರ
ಅಕ್ಟೋಬರ್ 23 ಭಾಯಿ ದುಜಾ ಗುರುವಾರ
ಅಕ್ಟೋಬರ್ 28 ಛತ್ ಪೂಜಾ ಮಂಗಳವಾರ
ನವೆಂಬರ್ 24 ಗುರು ತೇಜ್ ಬಹದ್ಧೂರ್ ಜಯಂತಿ ಸೋಮವಾರ
ಡಿಸೆಂಬರ್ 24 ಕ್ರಿಸ್ಮಸ್ ಸಂಜೆ ಬುಧವಾರ