Belthangady: ಅನ್ಯಕೋಮಿನ ಜೋಡಿ ಸೌತಡ್ಕದಲ್ಲಿ ಪತ್ತೆ; ಪೊಲೀಸರ ವಿಚಾರಣೆ

Share the Article

ಬೆಳ್ತಂಗಡಿ: ಕೊಪ್ಪಳ ಮೂಲದ ಮುಸ್ಲಿಂ ಯುವಕನೋರ್ವ ಹಿಂದೂ ಯುವತಿ ಜೊತೆ ಸೌತಡ್ಕ ದೇವಸ್ಥಾನಕ್ಕೆ ಬಂದಿದ್ದು, ಅನಂತರ ಹಿಂದೂ ಸಂಘಟನೆಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆಯೊಂದು ನಡೆದಿದೆ.

ಸಲೀಮ್‌ ಎಂಬ ಯುವಕ, ಬೆಂಗಳೂರು ಮೂಲದ ಹಿಂದೂ ಯುವತಿ ಜೊತೆ ಕೊಕ್ಕಡದಿಂದ ರಿಕ್ಷಾದ ಮೂಲಕ ಸೌತಡ್ಕ ದೇವಸ್ಥಾನಕ್ಕೆ ರಿಕ್ಷಾದಿಂದ ಬಂದಿದ್ದು, ನಂತರ ಫೋನ್‌ ಪೇ ಮಾಡುವ ಸಂದರ್ಭದಲ್ಲಿ ಹುಡುಗನ ಹೆಸರು ಸಲೀಮ್‌ ಎಂದು ತಿಳಿದು ಬಂದಿದೆ. ಕೂಡಲೇ ಚಾಲಕ ಹಿಂದೂ ಸಂಘಟನೆಗಳ ಗಮನಕ್ಕೆ ಈ ವಿಷಯವನ್ನು ತಂದಿದ್ದು, ಇದೀಗ ಅನ್ಯಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಯುವಕ ಮತ್ತು ಯುವತಿಯನ್ನು ಅವರ ಮನೆಯವರನ್ನು ಇಲ್ಲಿಗೆ ಕರೆಸಿದ ನಂತರವೇ ಬಿಟ್ಟು ಕಳುಹಿಸಬೇಕು ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಒತ್ತಾಯ ಮಾಡಿದ್ದಾರೆ. ಧರ್ಮಸ್ಥಳ ಠಾಣೆಯ ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ.

Leave A Reply