Uppinangady: ಕಬ್ಬಿಣದ ರಾಡ್‌ನಿಂದ ವ್ಯಕ್ತಿಗೆ ಹಲ್ಲೆ, ಜೀವಬೆದರಿಕೆ; ದೂರು ದಾಖಲು

Share the Article

Uppinangady: ಕಬ್ಬಿಣದ ರಾಡಿನಿಂದ ನೆಲ್ಯಾಡಿ ಪೇಟೆಯಲ್ಲಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆದಿರುವ ಕುರಿತು ವರದಿಯಾಗಿದೆ.

ರೆಜಿ ಮೋನ್‌ ಜೋಸೆಫ್‌ (59) ಎಂಬುವವರ ಮೇಲೆ ಜೋಲಿ ತೋಮಸ್‌ ಎಂಬಾತ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಮಧ್ಯರಾತ್ರಿ ಮನೆ ಕಡೆಗೆ ಹೋಗುತ್ತಿದ್ದ ನನ್ನನ್ನು ನೆಲ್ಯಾಡಿ ಪೇಟೆಯಲ್ಲಿ ತಡೆಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಲ್ಲದೇ, ಬೊಬ್ಬೆ ಹೊಡೆದಾಗ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆಯೊಡ್ಡಿದ ಕುರಿತು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply