Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

Share the Article

Mangalore: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಉತ್ತರ ಠಾಣಯೆ ಪೊಲೀಸರು ಬಂಧನ ಮಾಡಿದ್ದಾರೆ.

ಮೂಲತಃ ಬೀದರ್‌ನವನಾಗಿದ್ದ ಮೂಡುಬಿದಿರೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಜ್ವಲ್‌ ಫಿನಾಯಸ್‌ (28) ಮತ್ತು ಬಂಟ್ವಾಳದ ಪದ್ಮಸ್ಮಿತ್‌ ಅಧಿಕಾರಿ (28) ಬಂಧಿತ ಆರೋಪಿಗಳು.

ಬಂದರಿ ಉತ್ತರ ದಕ್ಕೆಯ ಬಳಿ ದ್ವಿಚಕ್ರ ವಾಹನದಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಕುರಿತು ನ.7 ರಂದು ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರ ಬಳಿ ಗಾಂಜಾ, ಮೊಬೈಲ್‌ ಫೋನ್‌, ದ್ವಿಚಕ್ರವಾಹನ ಸಹಿತ ಅಂದಾಜು ರೂ.25000 ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

Leave A Reply