School-Collage holiday : ರಾಜ್ಯದ ಶಾಲಾ – ಕಾಲೇಜುಗಳಿಗೆ 6 ದಿನ ರಜೆ ಘೋಷಣೆ!!
School-Collage Holiday : ರಾಜ್ಯದ ಶಾಲಾ ಕಾಲೇಜು ವಿದ್ಯಾರ್ಥಿಗಳು ದಸರಾ ರಜೆಯನ್ನು ಆಚರಿಸಿ ದೀಪಾವಳಿಯನ್ನು ಸಂಭ್ರಮಿಸಿ ಇದೀಗ ಶಾಲಾ-ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಆದರೆ ಈಗ ಈ ಬೆನ್ನಲ್ಲೇ ಮತ್ತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆರು ದಿನ ರಜೆಯನ್ನು ನೀಡಲಾಗಿದೆ.
ಹೌದು, ದಸರಾ ರಜೆ ಎಂದು ಅಕ್ಟೋಬರ್‌ನಲ್ಲಿ ಸರಿಸುಮಾರ್ 20 ದಿನಗಳ ಕಾಲ ಶಾಲಾ- ಕಾಲೇಜುಗಳು ಬಂದ್(School-Collage Holiday ) ಆಗಿದ್ದವು. ಇದೀಗ ದೀಪಾವಳಿ ಹಬ್ಬದ ರಜೆಯನ್ನೂ ವಿದ್ಯಾರ್ಥಿಗಳು ಮುಗಿಸಿ ಮತ್ತೆ ಶಾಲೆಗಳಿಗೆ ತೆರಳುತ್ತಿದ್ದಾರೆ. ಈ ಬೆನ್ನಲ್ಲೇ ಮತ್ತೆ ರಜೆ ಎಂಬ ಕೂಗು ಕೇಳಿ ಬರುತ್ತಿದೆ. ಹಾಗಿದ್ದರೆ ಯಾಕೆ ರಜೆ? ಎಷ್ಟು ದಿನ ರಜೆ? ಎಂದು ನೋಡೋಣ ಬನ್ನಿ.
ಯಸ್, ನವೆಂಬರ್‌ನಲ್ಲಿ ಮತ್ತೆ 6 ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ಲಾಂಗ್ ರಜೆ ಸಿಗಲಿದೆ. ನವೆಂಬರ್ 13ರಿಂದ ನವೆಂಬರ್ 18ರ ವರೆಗೆ ಒಟ್ಟು 6 ದಿನಗಳ ಕಾಲ ರಜೆ ಇರಲಿದೆ. ಏಕೆಂದರೆ ಈ ವರ್ಷದ ಕ್ಯಾಲೆಂಡರ್ ಪ್ರಕಾರ ನವೆಂಬರ್ 13ರಂದು ತುಳಸಿ ಪೂಜೆ ಇದೆ. ಇದಾದ ಬಳಿಕ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಸರ್ಕಾರಿ ರಜೆ ಇರಲಿದೆ. ನಂತರ ನವೆಂಬರ್ 15ರಂದು ಗುರುನಾನಕ್ ಜಯಂತಿ ಇರಲಿದೆ. ಇದಾದ ನಂತರ ನವೆಂಬರ್ 16ರಂದು ಶನಿವಾರ ಕೇವಲ ಅರ್ಧ ದಿನ ಮಾತ್ರ ಶಾಲೆ ನಂತರ ನವೆಂಬರ್ 17ರಂದು ರವಿವಾರ ರಜೆ ಇರಲಿದೆ.
ಇಷ್ಟೇ ಅಲ್ಲದೆ ನವೆಂಬರ್ 18ರಂದು ಕನಕದಾಸ ಜಯಂತಿ ಆಚರಿಸಲಾಗುತ್ತಿದೆ. ಹೀಗಾಗಿ ಕರ್ನಾಟಕದ ಅನೇಕ ಶಾಲೆಗಳಲ್ಲಿ ಈ ದಿನಂದು ರಜೆ ಇರಲಿದೆ. ಈ ಮೂಲಕ ಒಟ್ಟಾರೆಯಾಗಿ ನವೆಂಬರ್ 13ರಿಂದ ನವೆಂಬರ್ 18ರ ವರೆಗೆ ಒಟ್ಟು 6 ದಿನಗಳ ಕಾಲ ರಜೆ ಇರಲಿದೆ. ಆದರೆ ಈ ರಜೆ ನೀಡುವುದು ಶಿಕ್ಷಣ ಸಂಸ್ಥೆಗಳ ಪರಿಗಣನೆಗೆ ಬಿಟ್ಟಿರುವುದಾಗಿದೆ.
ಅಂದ ಹಾಗೆ ನಾವು ಇಲ್ಲಿ ನೀಡಿರುವುದು ಕ್ಯಾಲೆಂಡರ್ ಗಳಲ್ಲಿ ನೀಡಿರುವಂತಹ ರಜೆಯ ದಿನಾಂಕವನ್ನು. ಇದನ್ನು ಆಯಾ ಶಾಲಾ ಕಾಲೇಜು ಸಂಸ್ಥೆಗಳು ಖಚಿತಪಡಿಸಿದಾಗ ಮಾತ್ರ ಆಯಾಸ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ರಜೆ ಸಿಗಲಿದೆ. ಅಲ್ಲದೆ ಸರ್ಕಾರದಿಂದ ಅಧಿಕೃತ ಸುತ್ತೋಲೆಗಳು ಬಂದಾಗಲೂ ಕೂಡ ಈ ರಜೆಗಳು ಮಾನ್ಯವಾಗುತ್ತದೆ.
It’s not collage it’s college