Mangalore: ಮಂಗಳೂರಿನಲ್ಲಿ ನ.10 ರಂದು ಬೃಹತ್‌ ಮ್ಯಾರಥಾನ್‌; ವಾಹನ ಸಂಚಾರದಲ್ಲಿ ಬದಲಾವಣೆ

Share the Article

Mangalore: ನ.10 ರಂದು ಮಂಗಳೂರಿನಲ್ಲಿ ” ನೀವಿಯಸ್‌ ಮಂಗಳೂರು ಮ್ಯಾರಥಾನ್‌ -2024′ ನಡೆಯಲಿದದ್ದು ಆ ಕಾರಣದಿಂದ ಬೆಳಗ್ಗೆ 4 ರಿಂದ ಬೆಳಗ್ಗೆ 10 ಗಂಟೆಯವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪನ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಲಾಲ್‌ಬಾಗ್‌ ಮಂಗಳಾ ಕ್ರೀಡಾಂಗಣದಿಂದ ಹೊರಟು ನಾರಾಯಣಗುರು ವೃತ್ತ (ಲೇಡಿಹಿಲ್‌), ಚಿಲಿಂಬಿ, ಉರ್ವಸ್ಟೋರ್‌, ಕೊಟ್ಟಾರ ಚೌಕಿ, ಕೋಡಿಕಲ್‌ ಕ್ರಾಸ್‌, ಕೂಳೂರು, ಕೆಐಒಸಿಎಳ್‌ ಜಂಕ್ಷನ್‌ ಮೂಲಕ ಎನ್‌ಎಂಪಿಎ ಸರ್ವಿಸ್‌ ರಸ್ತೆಯಲ್ಲಿ ಸಾಗುತ್ತದೆ. ನಂತರ ಡಿಕ್ಸಿ ಕ್ರಾಸ್‌ ಪಣಂಬೂರು ಬೀಚ್‌ ರಸ್ತೆಗೆ ತಿರುಗಿ ವಾಪಾಸ್ಸು ಡಿಕ್ಸಿ ಕ್ರಾಸ್‌ ಕೆಐಒಸಿಎಲ್‌ ಜಂಕ್ಷನ್‌ ಗೆ ಬರಲಿದ್ದು, ನಂತರ ತಣ್ಣೀರು ಬಾವಿ ಬೀಚ್‌ವರೆಗೆ ಹೋಗಿ ವಾಪಸ್ಸು ಕೊಟ್ಟಾರ ಚೌಕಿ, ಲೇಡಿಹಿಲ್‌ ಮೂಲಕ ಮಂಗಳಾ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ.

ವಾಹನ ಸಂಚಾರ ನಿಲುಗಡೆ ನಿಷೇಧ;
ಮಣ್ಣಗುಡ್ಡೆಯಿಂದ ನಾರಾಯಣ ಗುರು ವೃತ್ತದ ಕಡೆಗೆ ಎಲ್ಲಾ ವಾಹನ ಸಂಚಾರ, ನಿಲುಗಡೆ ನಿಷೇಧ
ಉರ್ವ ಮಾರ್ಕೆಟ್‌ನಿಂದ ನಾರಾಯಣ ಗುರು ವೃತ್ತದ ಕಡೆಗೆ ಬರುವ ವಾಹನ ಸಂಚಾರ, ನಿಲುಗಡೆ ನಿಷೇಧ
ಕೆಎಸ್‌ಆರ್‌ಟಿಸಿ ಯಿಂದ ಲಾಲ್‌ಬಾಗ್‌ ಮುಖಾಂತರ ನಾರಾಯಣ ಗುರು ವೃತ್ತರ ಕಡೆಗೆ ಎಲ್ಲಾ ತರಹದ ವಾಹನ ಸಂಚಾರ ನಿಷೇಧ
ನಾರಾಯಣ ಗುರು ವೃತ್ತದಿಂದ ಕೊಟ್ಟಾರಚೌಕಿ ವರೆಗಿನ ರಸ್ತೆಯ ವಾಹನ ಸಂಚಾರ, ನಿಲುಗಡೆ ನಿಷೇಧ
ಕೊಟ್ಟಾರ ಚೌಕಿಯಿಂದ ಕೋಡಿಕಲ್‌ ಕ್ರಾಸ್‌ ಕಡೆಗೆ ಸಾಗುವ ಸರ್ವಿಸ್‌ ರಸ್ತೆಯಲ್ಲಿ ವಾಹನ ಸಂಚಾರ, ನಿಲುಗಡೆ ನಿಷೇಧ
ಕೋಡಿಕಲ್‌ ಕ್ರಾಸ್‌ನಿಂದ ಕೂಳೂರು ಹೊಸ ಸೇತುವೆವರೆಗೆ ಎಲ್ಲಾ ತರಹದ ವಾಹನ ಸಂಚಾರ, ನಿಲುಗಡೆ ನಿಷೇಧ
ತಣ್ಣೀರುಬಾವಿ ಬೀಚ್‌ ರಸ್ತೆ, ತಣ್ಣೀರು ಬಾವಿ ಬೀಚ್‌ ವರೆಗೆ ಎಲ್ಲಾ ತರಹದ ವಾಹನ ಸಂಚಾರ, ನಿಲುಗಡೆ ನಿಷೇಧ

ಓಟ ಮಾಡುವ ಮಾರ್ಗದ ಎಡಭಾಗದಲ್ಲಿರುವ ಎಲ್ಲಾ ಅಡ್ಡ ರಸ್ತೆಗಳಿಂದ ವಾಹನಗಳನ್ನು ಮುಖ್ಯ ರಸ್ತೆಗೆ ಬರುವುದನ್ನು ನಿಷೇಧ ಮಾಡಲಾಗಿದೆ.

ಬದಲಿ ಮಾರ್ಗಗಳು
ಪಿ.ವಿ.ಎಸ್‌ ಕಡೆಯಿಂದ ನಾರಾಯಣ ಗುರುವೃತ್ತ ಕಡೆಗೆ ಹೋಗುವ ವಾಹನಗಳು ಲಾಲ್‌ಬಾಗ್‌-ಕೆ.ಎಸ್‌.ಆರ್‌.ಟಿ.ಸಿ. ಮೂಲಕ ಸಂಚಾರ ಮಾಡಬೇಕು
ಕುದ್ರೋಳಿ ಮಣ್ಣಗುಡ್ಡೆ ಮತ್ತು ಉರ್ವ ಮಾರ್ಕೆಟ್‌ನಿಂದ ನಾರಾಯಣ ಗುರು ವೃತ್ತ ಕಡೆಗೆ ಸಂಚರಿಸುವ ವಾಹನಗಳು ಮಣ್ಣಗುಡ್ಡೆ, ಬಲ್ಲಾಳ್‌ ಬಾಗ್‌/ನೆಹರೂ ಅವಿನ್ಯೂ ರಸ್ತೆ-ಲಾಲ್‌ಬಾಗ್‌-ಕೆಎಸ್‌ಆರ್‌ಟಿಸಿ ಮೂಲಕ ಸಂಚರಿಸಬೇಕು
ಕೆಎಸ್‌ಆರ್‌ಟಿಸಿ ಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಬಿಜೈ ಕಾಪಿಕಾಡ್‌ ಕಡೆಯಿಂದ ಕುಂಟಿಕಾನ ಮೂಲಕ ಸಂಚರಿಸಬೇಕು
ಕೆಪಿಟಿ/ ಕುಂಟಿಕಾನ ಕಡೆಯಿಂದ ಉಡುಪಿ ಕಡೆಗೆ ಸಾಗುವ ವಾಹನಗಳು ಕೋಡಿಕಲ್‌ ಕ್ರಾಸ್‌ ಫ್ಲೈ ಓವರ್‌ ಬಳಿ ಬಲಕ್ಕೆ ತಿರುಗಿ ಕೂಳೂರು ಕೊಟ್ಟಾರ ಕ್ರಾಸ್‌ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಬೇಕು.
ಕೂಳೂರು ಹಳೇ ಸೇತುವೆ ಬಳಿಯ ಫ್ಲೈ ಓವರ್‌ನ ಮುಕ್ತಾಯದಲ್ಲಿ ಎಡಕ್ಕೆ ತಿರುಗಿ ಕೂಳೂರು ಹೊಸ ಸೇತುವೆ ಮೂಲಕ ಕೆಐಓಸಿಎಲ್‌ ಮುಖಾಂತರ ಹೋಗಬೇಕು
ಕಾವೂರು-ಪಂಜಿಮೊಗಲು ಕಡೆಯಿಂದ ಬರುವ ವಾಹನಗಳು ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಪಂಪ್‌ ಸರ್ವಿಸಸ್‌ ರಸ್ತೆಯ ಮುಖಾಂತರ ಉಡುಪಿ ಕಡೆ ಹೋಗಬೇಕು.
ಅಶೋಕ ನಗರ, ಶೇಡಿಗುರಿ, ದಂಬೇಲ್‌, ಸುಲ್ತಾನ್‌ ಬತ್ತೇರಿ ಕಡೆಯಿಂದ ಬರುವ ವಾಹನಗಳು ಉರ್ವ ಮಾರ್ಕೆಟ್‌, ಮಣ್ಣಗುಡ್ಡೆ ಮೂಲಕ ಸಂಚರಿಸಬೇಕು.

ಭಾರೀ ಸಂಖ್ಯೆಯಲ್ಲಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಭಾಗವಹಿಸುವ ಈ ಮ್ಯಾರಥಾನ್‌ ಓಟದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

Your email address will not be published.