Uttarpradesh: ರೀಲ್ಸ್‌ನಲ್ಲಿ ಮುಳುಗಿದ ತಾಯಿ; ಗಂಗಾನದಿಯಲ್ಲಿ 4 ವರ್ಷದ ಮಗು ಮುಳುಗಿ ಸಾವು
Uttarpradesh: ಉತ್ತರ ಪ್ರದೇಶದ ಗಾಜಿಪುರದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ತಂದೆ-ತಾಯಿಯ ಕಣ್ಣೆದುರೇ ತಮ್ಮ ಸ್ವಂತ ಮಗಳು ನೀರಿನಲ್ಲಿ ಮುಳುಗಿ ಸತ್ತಿರುವ ಘಟನೆಯೊಂದು ನಡೆದಿದೆ. ತಾಯಿ ರೀಲ್ಸ್‌ನಲ್ಲಿ ಮುಳುಗಿದ್ದು, ಪಕ್ಕದಲ್ಲಿ ಮಗು ನೀರಿನಲ್ಲಿ ಮುಳುಗಿ ಹೋಗುತ್ತಿರುವುದು ಕಣ್ಣಿಗೇ ಕಾಣದ ಪರಿಣಾಮ, ಮಗು ಸಾವಿಗೀಡಾಗಿದೆ.
ಗಂಗಾ ನದಿಯಲ್ಲಿ 4 ವರ್ಷದ ಬಾಲಕಿ ಮುಳುಗಿ ಸಾವನ್ನಪ್ಪಿದ್ದು, ಆಕೆಯೊಂದಿಗೆ ಗಂಗಾಸ್ನಾನಕ್ಕೆ ತೆರಳುತ್ತಿದ್ದ ಪೋಷಕರಿಗೂ ಈ ವಿಚಾರ ತಿಳಿದಿರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇದೇ ರೀತಿಯ ಸಂಗತಿ ಕಂಡುಬಂದಿದೆ.
ಗಾಜಿಪುರದ ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ನಾಲ್ಕು ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಈ ಘಟನೆಯ ಲೈವ್ ವಿಡಿಯೋ ಹೊರಬಿದ್ದಿದೆ. ಅಕ್ಕಪಕ್ಕದಲ್ಲಿ ಸ್ನಾನ ಮಾಡುತ್ತಿದ್ದವರೂ ಇದನ್ನು ಗಮನಿಸಿರಲಿಲ್ಲ, ಬಾಲಕಿಯ ಚಿಕ್ಕಮ್ಮ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದು, ಬಾಲಕಿ ನೀರಿನಲ್ಲಿ ಮುಳುಗಿರುವುದು ಆಕೆಯ ಗಮನಕ್ಕೆ ಬಂದಿಲ್ಲ.
ನವೆಂಬರ್ 4, ಸೋಮವಾರದಂದು ಸೈದ್‌ಪುರ ನಗರದ ಪಕ್ಕಾ ಘಾಟ್‌ನಲ್ಲಿ ನಾಲ್ಕು ವರ್ಷದ ಬಾಲಕಿ ತನ್ನ ಕುಟುಂಬದೊಂದಿಗೆ ಸ್ನಾನ ಮಾಡುತ್ತಿದ್ದಾಗ ಗಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ. ಬಾಲಕಿ ಮುಳುಗುತ್ತಿದ್ದ ಸಮಯದಲ್ಲಿ ಆಕೆಯ ಚಿಕ್ಕಮ್ಮ ತನ್ನ ಕುಟುಂಬ ಸದಸ್ಯರು ಗಂಗಾ ಸ್ನಾನ ಮಾಡುತ್ತಿರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ ಮಾಡುತ್ತಿದ್ದಳು. ಕುಟುಂಬ ರೀಲ್ಸ್‌ನಲ್ಲಿ ಮುಳುಗಿದ್ದು, ಮಗು ನೀರಿನಲ್ಲಿ ಮುಳುಗುವುದು ಯಾರಿಗೂ ಗೊತ್ತಾಗದೇ, ಬಾಲಕಿ ಸಾವಿಗೀಡಾಗಿದ್ದಾಳೆ.
https://twitter.com/Atullive01/status/1853407714182885467