Lakshmi Hebbalkar: ರುದ್ರಣ್ಣ ಆತ್ಮಹತ್ಯೆ! ಲಕ್ಷ್ಮಿ ಹೆಬ್ಬಾಳ್ಕರ್‌ ಪಿಎ, ತಹಶೀಲ್ದಾರ್‌ ಮೇಲೆ ಕೇಸ್: ಆರೋಪಿಗಳು ಪರಾರಿ!

Share the Article

Lakshmi Hebbalkar: ಎಸ್‌ಡಿಎ ರುದ್ರಣ್ಣ (SDA Rudresh) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಮಲ್ಲವ್ವ ನೀಡಿದ ದೂರಿನನ್ವಯ ತಹಶೀಲ್ದಾರ್‌ ಬಸವರಾಜ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಮತ್ತು ಸಹೋದ್ಯೋಗಿ ಅಶೋಕ ಕಬ್ಬಲಿಗೇರ್ ಮೇಲೆ ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ.

ವಾಟ್ಸಪ್‌ನಲ್ಲಿ ನನ್ನ ಸಾವಿಗೆ ತಹಶೀಲ್ದಾರ್‌ ಬಸವರಾಜ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar)ಪಿಎ ಸೋಮು ಮತ್ತು ಸಹೋದ್ಯೋಗಿ ಅಶೋಕ ಕಬ್ಬಲಿಗೇರ  ಎಂಬವರು ಕಾರಣ ಅಂತಾ ಬರೆದು ಇಂದು ಬೆಳಗ್ಗೆ ತಹಶಿಲ್ದಾರ್‌ ಕಚೇರಿಯಲ್ಲೇ ರುದ್ರಣ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಆದ್ರೆ ಇದೀಗ ತಹಶೀಲ್ದಾರ್‌ ಬಸವರಾಜ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar)ಪಿಎ ಸೋಮು ಮತ್ತು ಸಹೋದ್ಯೋಗಿ ಅಶೋಕ ಕಬ್ಬಲಿಗೇರ್ ಅವರುಗಳು ಪ್ರಕರಣ ‌ದಾಖಲಾಗ್ತಿದ್ದಂತೆ‌‌ ಈ ಮೂವರು ಆರೋಪಿಗಳು ನಾಪತ್ತೆ ಆಗಿದ್ದು ಆರೋಪಿಗಳ ಬಂಧನಕ್ಕೆ‌ ವಿಶೇಷ ‌ತಂಡ‌ವನ್ನ ನಗರ ಪೊಲೀಸ್ ‌ಆಯುಕ್ತ‌ ಯಡಾ ಮಾರ್ಟಿನ್ ರಚಿಸಿದ್ದಾರೆ.

Leave A Reply