Madhya Pradesh: ನೊಣದ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು; ಹೇಗೆ ಗೊತ್ತಾ?

Share the Article

ಕೊಲೆ ಮಾಡಿರುವವರು ತಾವು ಸಿಕ್ಕಿಬೀಳಬಾರದೆಂಬ ಯೋಚನೆಯಲ್ಲಿ ಭಾರೀ ಜಾಗರೂಕತೆಯಿಂದ ಸಾಕ್ಷ್ಯ ನಾಶ ಮಾಡಿ ಬಿಡುತ್ತಾರೆ. ಆದರೆ ಕೇವಲ ಒಂದು ನೊಣ ಆರೋಪಿಯನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದೆ ಎಂದರೆ ನೀವು ನಂಬ್ತೀರಾ? ಶಂಕಿತ ಯುವಕ ಧರಿಸಿದ್ದ ಬಟ್ಟೆಯ ಮೇಲೆ ಸಿಲುಕಿಕೊಂಡಿದ್ದ ನೊಣದ ಮೂಲಕ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿರುವ ಘಟನೆ ನಡೆದಿದೆ.

ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಪಿಯಾದ ಧರಮ್‌ ಠಾಕೂರ್‌ ತನ್ನ ಚಿಕ್ಕಪ್ಪ ಮನೋಜ್‌ ಠಾಕೂರ್‌ನನ್ನು ಹತ್ಯೆ ಮಾಡಿದ್ದ. ಮನೋಜ್‌ ಠಾಕೂರ್‌ ಕೆಲಸದ ನಿಮಿತ್ತ ಮನೆಯಿಂದ ಹೋದವರು ರಾತ್ರಿಯಾದರೂ ವಾಪಾಸ್‌ ಬಂದಿರಲಿಲ್ಲ. ಅನಂತರ ಅ.31 ರಂದು ದೇವೋರಿ ತಪ್ರಿಯಾ ಗ್ರಾಮದ ಕೃಷಿ ಭೂಮಿಯಲ್ಲಿ ಶವ ಪತ್ತೆಯಾಗಿತ್ತು.

ಆರೋಪಿ ಧರಮ್‌ ಮಾತ್ರ ಮನೋಜ್‌ ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದ. ಆತನ ಕಣ್ಣು ಕೆಂಪಾಗಿತ್ತು. ಎದೆಯ ಮೇಲೆ ಕೆಲವೊಂದು ಗುರುತುಗಳಿತ್ತು. ಆತನ ಬಟ್ಟೆಯ ಮೇಲೆ ನೊಣಗಳು ಇದ್ದಿದ್ದು, ಅನುಮಾನ ಮೂಡಿತ್ತು. ನಂತರ ನೊಣವನ್ನು ಸರಿಯಾಗಿ ಪರಿಶೀಲನೆ ಮಾಡಿದಾಗ ಅದರ ಮೇಲೆ ರಕ್ತದ ಕೆಲಗಳು ಕಂಡು ಬಂದಿತ್ತು. ಅಷ್ಟಲ್ಲೇ ಆರೋಪಿ ಕಪ್ಪು ಬಣ್ಣದ ಶರ್ಟ್‌ ಧರಿಸಿದ್ದರಿಂದ ರಕ್ತದ ಕಲೆಗಳು ಕಾಣಿಸಿಕೊಂಡಿರಲಿಲ್ಲ. ಆರೋಪಿಯ ಬಟ್ಟೆಯನ್ನು ಫೋರೆನ್ಸಿಕ್‌ ತಂಡ ಪರಿಶೀಲನೆ ಮಾಡಿದ್ದು, ರಕ್ತದ ಕಲೆಗಳಿರುವುದು ಖಚಿತವಾಯಿತು.

ಆರಂಭದಲ್ಲಿ ನಿರಪರಾಧಿ ಎಂದು ಆರೋಪಿ ಹೇಳಿದರೂ ನಂತರ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯು ವ್ಯಕ್ತಿಗೆ ಮೊಳೆ ಇರುವ ವಸ್ತುವಿನಿಂದ ಹೊಡೆದ ಕಾರಣದಿಂದ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾನೆ.

Leave A Reply