Manasa : ಬಿಗ್ ಬಾಸ್ ನಿಂದ ಔಟ್ ಆದ ಮಾನಸ ಗೆ ಸಿಕ್ಕ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಮನಸ

Share the Article

Manasa: ಕನ್ನಡದ ಬಿಗ್ ಬಾಸ್ ಸೀಸನ್ 11(Bigg Boss)ಗಲಾಟೆ, ಕೀಟಲೆ, ತಲೆಹರಟೆಗಳೊಂದಿಗೆ ಭರ್ಜರಿಯಾಗಿ ರೆಸ್ಪಾನ್ಸ್ ಪಡೆದು ಮುನ್ನಡೆಯುತ್ತಿದೆ. ಈ ನಡುವೆ 5ನೇ ವಾರಕ್ಕೆ ಗಿಚ್ಚ ಗಿಲಿ ಗಿಲಿ ಖ್ಯಾತಿಯ ಮಾನಸ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಅವರು ಸಂದರ್ಶನಗಳಲ್ಲಿ ತಮ್ಮ ಪೇಮೆಂಟ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಹೌದು, ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಮಾನಸಾ(Manasa) ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಯಾವುದೇ ಕಂಟೆಸ್ಟೆಂಟ್ ಹೊರಗಡೆ ಬಂದರೂ ಕೂಡ ಅವರನ್ನು ಸಂದರ್ಶನ ಮಾಡುವುದು ಎಂದು ಕಾಮನ್ನಾಗಿಬಿಟ್ಟಿದೆ. ಹೀಗಾಗಿ ಮಾನಸ ಅವರನ್ನು ಕೂಡ ಸಂದರ್ಶನ ಮಾಡಲಾಗಿದೆ. ಈ ಸಂದರ್ಶನದಲ್ಲಿ ತುಕಾಲಿ ಸಂತೋಷ ಕೂಡ ಭಾಗಿಯಾಗಿದ್ದಾರೆ.

ಈ ವೇಳೆ ಸಂದರ್ಶಕರು ಮಾನಸ ಅವರಿಗೆ ಪೇಮೆಂಟ್ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಮಾನಸಾ ಅವರು ತಮಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ತುಕಾಲಿ ಸಂತೋಷ್ ‘ಆ ಬಗ್ಗೆ ಕೇಳಬೇಡಿ’ ಎಂದು ಹೇಳಿದರೆ, ಮಾನಸಾ ಅವರು ‘ಇನ್ನೂ ಪೇಮೆಂಟ್ ಆಗಿಲ್ಲ’ ಎಂದಿದ್ದಾರೆ. ಆದರೆ ಎಷ್ಟು ಪೇಮೆಂಟ್ ಸಿಗಬಹುದು, ಯಾವಾಗ ಸಿಗುತ್ತೆ ಎಂಬುದರ ಬಗ್ಗೆ ಮಾನಸ ಏನು ಹೇಳಿಲ್ಲ.

Leave A Reply

Your email address will not be published.