Madhyapradesh: ಪೂಜಾ ಸ್ಥಳದಲ್ಲಿ ಗುಟ್ಕಾ ಉಗುಳಿದ ಕಾರ್ಮಿಕ; ಸಗಣಿ ತಿನ್ನಿಸಿದ ಯುವಕರು, ವೀಡಿಯೋ ವೈರಲ್‌

Share the Article

Madhyapradesh: ಮಧ್ಯಪ್ರದೇಶದ ಧಾರ್‌ನಲ್ಲಿ ಗೋವರ್ಧನ ಪೂಜೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಕೆಲ ಯುವಕರು ಥಳಿಸಿದ್ದು, ನಂತರ ಆತನಿಗೆ ಬಲವಂತವಾಗಿ ಹಸುವಿನ ಸಗಣಿ ತಿನ್ನಿಸಿದ್ದಾರೆ.

ಪೂಜೆ ಮಾಡುವ ಜಾಗದಲ್ಲಿ ತಂಬಾಕು ಉಗುಳಿದ್ದಾನೆ ಎಂದು ಈ ಕೆಲಸ ಮಾಡಿರುವುದಾಗಿ ಯುವಕರು ಹೇಳಿದ್ದಾರೆ.

ಇಮ್ರಾನ್‌ ಖಾನ್‌ (20) ಎಂಬ ವ್ಯಕ್ತಿಯನ್ನು ಸಿಆರ್‌ಪಿಸಿ 151 ರ ಅಡಿಯಲ್ಲಿ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗಿದೆ. ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಇಲ್ಲಿ ಕಾಣಬಹುದು.

ಧಾರ್‌ನ ಸಾಗೌರ್‌ ಪ್ರದೇಶದಲ್ಲಿ ಗೋವರ್ಧನ ಪೂಜೆಯ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇಮ್ರಾನ್‌ ತಂಬಾಕು ಜಗಿಯುತ್ತಾ, ರಸ್ತೆ ಬದಿಯಲ್ಲಿ ಹೋಗುತ್ತಿದ್ದು, ಅವನು ಉಗುಳಿದಾಗ ಕೆಲವು ಹನಿಗಳು ಪಕ್ಕದ ವೇದಿಕೆಯ ಪೂಜಾ ಸ್ಥಳದ ಮೇಲೆ ಬಿದ್ದಿದೆ.

ಇದನ್ನು ಕಂಡ ಅಲ್ಲಿನ ಜನರಿಗೆ ಕೋಪ ಬಂದಿದ್ದು, ನಿಂದನೆ ಮಾಡಿದ್ದಾರೆ. ಕೆಲವು ಯುವಕರಂತೂ ಅವನ ಕೊರಳಪಟ್ಟಿ ಹಿಡಿದು ಪೂಜಾ ಸ್ಥಳದಿಂದ ಉಗುಳುವ ಹನಿಗಳನ್ನು ನೆಕ್ಕುವಂತೆ ಒತ್ತಾಯಿಸಿದ್ದು ಮಾತ್ರವಲ್ಲದೆ ಶಿಕ್ಷೆಯಾಗಿ ಹಸುವಿನ ಸಗಣಿಯನ್ನು ಬಾಯಿಗೆ ಮೆತ್ತಿದ್ದಾರೆ.

Leave A Reply