D.K.Suresh: ಡಿ.ಕೆ.ಸುರೇಶ್‌ ಅಂಬ್ಯುಲೆನ್ಸ್‌ ಹೇಳಿಕೆ; ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಂದ ಚನ್ನಪಟ್ಟಣ ಇಂದು ಪ್ರಚಾರ

Share the Article

D.K.Suresh: ಕೆಲವು ದಿನಗಳ ಹಿಂದೆ ಚನ್ನಪಟ್ಟಣ ಕೋಡಂಬಳ್ಳಿಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ನಾಳೆ ಅಂಬ್ಯುಲೆನ್ಸ್‌ನಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ದೇವೇಗೌಡ ಅವರು ಕುರಿತು ವ್ಯಂಗ್ಯವಾಡಿದ್ದು, ಇದು ಇದೀಗ ಜೆಡಿಎಸ್‌ ʼಕೈʼ ನಾಯಕರ ವಿರುದ್ಧ ವಾಗ್ದಾಳಿಗೆ ಕಾರಣವಾಗಿದೆ.

ಹಾಗೆನೇ ಜೆಡಿಎಸ್‌, ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಮತಯಾಚನೆ ಮಾಡಲು ಜೆಡಿಎಸ್‌ ವರಿಷ್ಠ ಹೆಚ್‌.ಡಿ.ದೇವೇಗೌಡ ಅವರನ್ನು ಪ್ರಚಾರಕ್ಕೆ ಇಳಿಸುವ ಮೂಲಕ ಕಾಂಗ್ರೆಸ್‌ಗೆ ಕೌಂಟರ್‌ ಕೊಡುವುದಕ್ಕೆ ಮುಂದಾಗಿದೆ. ನೀರಾವರಿ ಭಗೀರಥ ಹೇಳಿಕೆಗೂ ಕೌಂಟರ್‌ ಕೊಡಲು ಜೆಡಿಎಸ್‌ನಿಂದ ಸಕಲ ಸಿದ್ಧತೆ ನಡೆದಿದೆ.

ಇಂದು ಬೆಳಗ್ಗೆ 11 ಗಂಟೆಯಿಂದ ವಿರೂಪಾಕ್ಷಿಪುರದಿಂದ ಮತಯಾಚನೆಯನ್ನು ದೇವೇಗೌಡರು ಮಾಡಲಿದ್ದಾರೆ.

Leave A Reply