TRAI New Rule: ಈ ದಿನಾಂಕದಿಂದ ಈ ಕರೆ ನಿಯಮಗಳು ಬದಲಾಗುತ್ತಿವೆ, Jio, Airtel, Vi ಮತ್ತು BSNL ಬಳಕೆದಾರರು ಗಮನಹರಿಸಿ!

TRAI New Rule: ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ವಂಚನೆಗಳನ್ನು ತಡೆಯಲು ಸರ್ಕಾರವೂ ಕಾರ್ಯಪ್ರವೃತ್ತಿಯಲ್ಲಿದೆ. ವಂಚನೆ ತೊಡೆದುಹಾಕಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಹೀಗಾಗಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿಡಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆ ನೀಡಿತ್ತು. ಇದಕ್ಕಾಗಿ ನಿಯಮಗಳ ಬದಲಾವಣೆಗೆ ಸೆಪ್ಟೆಂಬರ್ 1ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ, TRAI ಕೊನೆಯ ದಿನಾಂಕವನ್ನು ವಿಸ್ತರಿಸಲು ನಿರ್ಧರಿಸಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, TRAI ದಿನಾಂಕವನ್ನು ಒಂದು ತಿಂಗಳು ವಿಸ್ತರಿಸಿದೆ, ಅದು ಈಗ ಡಿಸೆಂಬರ್ 1 ಎನ್ನಲಾಗಿದೆ. ಈಗ ಟೆಲಿಕಾಂ ಕಂಪನಿಗಳಿಗೆ ವಾಣಿಜ್ಯ ಸಂದೇಶಗಳಿಗೆ ಹೊಸ ಟ್ರೇಸಬಿಲಿಟಿ ನಿಯಮವನ್ನು ಜಾರಿಗೆ ತರಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ, ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್ ಗ್ರಾಹಕರಿಗೆ ವಂಚಕರನ್ನು ತಪ್ಪಿಸಲು ಸುಲಭವಾಗುತ್ತದೆ. ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳು (1ನೇ ಸೆಪ್ಟೆಂಬರ್) ರಿಂದ ಜಾರಿಗೆ ಬರಬಹುದು.

ಸರ್ಕಾರ ಕೈಗೊಂಡ ಕ್ರಮಗಳು :
ನಕಲಿ ಕರೆಗಳು ಮತ್ತು ಸಂದೇಶಗಳನ್ನು ನಿಲ್ಲಿಸಲು ಸರ್ಕಾರವು ನಿಯಮಗಳನ್ನು ಬದಲಾಯಿಸಿದೆ, TRAI ಪ್ರಕಾರ, ನಕಲಿ ಕರೆಗಳನ್ನು ನಿಲ್ಲಿಸಲು ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ. ವಂಚಕರು ನಕಲಿ ಕರೆಗಳು ಮತ್ತು ಸಂದೇಶಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ ಮತ್ತು ಅವರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುತ್ತಿದ್ದಾರೆ.

ಹೊಸ ನಿಯಮಗಳು ಯಾವುದು?
ಹೊಸ ನಿಯಮದ ಪ್ರಕಾರ, ಫೋನ್‌ನಲ್ಲಿ ಬರುವ ಕರೆಗಳು ಮತ್ತು ಸಂದೇಶಗಳನ್ನು ಟೆಲಿಕಾಂ ಆಪರೇಟರ್‌ಗಳು ಮೊದಲೇ ಪರಿಶೀಲಿಸುತ್ತಾರೆ. ಈ ಸಂಖ್ಯೆಗಳ ಕೆಲವು ಕೀವರ್ಡ್‌ಗಳನ್ನು ಗುರುತಿಸುವ ಮೂಲಕ, ಆ ಸಂದೇಶಗಳು ಮತ್ತು ಕರೆಗಳನ್ನು ತಕ್ಷಣವೇ ನಿರ್ಬಂಧಿಸಲಾಗುತ್ತದೆ. ಇದಲ್ಲದೇ ಸಿಮ್ ಕಾರ್ಡ್ ಬಳಕೆದಾರರು ದೂರು ನೀಡಿದರೂ ಆ ಸಂದೇಶಗಳು ಮತ್ತು ಕರೆ ಸಂಖ್ಯೆಗಳನ್ನು ಬ್ಲಾಕ್ ಮಾಡಲಾಗುತ್ತದೆ. ವಂಚನೆಯನ್ನು ನಿಲ್ಲಿಸಲು ಸಹಾಯ ಮಾಡುವ ಈ ಮಾದರಿಯು ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ವರದಿಯಾಗಿದೆ.

2 Comments
  1. Howardfooke says

    bs2tsite3.io – bs.hn, bs2me.in

  2. Johnnyevodo says

    Поиск в гугле

Leave A Reply

Your email address will not be published.