Mangaluru: ಪುತ್ತೂರು ಸಮೀಪದ ಕಾಡಿನಲ್ಲಿ ಮಹಿಳೆಯ ತಲೆ ಬುರುಡೆ ಹಾಗೂ ಎಲುಬುಗಳು ಪತ್ತೆ
Mangaluru: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಕುಂಬ್ರದ ಒಳಮೊಗ್ರು ಗ್ರಾಮದ ಕಾಡಿನಲ್ಲಿ ಮಹಿಳೆಯ ತಲೆಬುರುಡೆ ಮತ್ತು ಎಲುಬುಗಳು ಪತ್ತೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಮಹಿಳೆಯ ತಲೆಗೂದಲು ನೇಣುಕುಣಿಕೆಯಲ್ಲಿ ಜೋತಾಡುತ್ತಿದ್ದು, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಮಾಹಿತಿ ಪ್ರಕಾರ, ನಳಿನಿ ಎಂಬಾಕೆ ಒಂದು ತಿಂಗಳಿಂದ ನಾಪತ್ತೆಯಾಗಿದ್ದರು. ಇದೀಗ, ನೇಣು ಬಿಗಿದ ಸ್ಥೀತಿಯಲ್ಲಿ ನಳಿನ ದೇಹದ ಅವೇಶಗಳು ಪತ್ತೆಯಾಗಿವೆ.
ನಳಿನಿಯವರು ಉರ್ವ ನಿವಾಸಿ ಸಂಜೀವ ಎಂಬವರನ್ನು ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ನಳಿನಿ ಕಳೆದ ಒಂದು ತಿಂಗಳಿಂದ ಮನೆಯಿಂದ ನಾಪತ್ತೆಯಾಗಿದ್ದರು. ಪತ್ನಿ ನಾಪತ್ತೆ ಕುರಿತು ಸಂಜೀವ ಅಕ್ಟೋಬರ್ 8ರಂದು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಪತ್ತೆ ವಿಷಯ ತಿಳಿದ ನಳಿನಿ ತವರು ಮನೆಯವರೂ ಹುಡುಕಾಟ ನಡೆಸಿದ್ದಾರೆ. ಉರ್ವದ ಸಂಜೀವರವರ ಮನೆಯ ಸುತ್ತಮುತ್ತ ಹುಡುಕಾಡಿದ್ದಾರೆ.
ಈ ವೇಳೆ ಮನೆಯ ಎದುರಿನ ಗುಡ್ಡದ ತುದಿಯಲ್ಲಿ ನಳಿನಿ ಮೃತದೇಹದ ಅವಶೇಷ ಪತ್ತೆಯಾಗಿವೆ. ಮರವೊಂದಕ್ಕೆ ನೇಣಿನ ಹಗ್ಗದಲ್ಲಿ ತಲೆ ಕೂದಲು ಜೋತಾಡುತ್ತಿತ್ತು. ಹಗ್ಗದ ಕೆಳಗೆ ತಲೆ ಬುರುಡೆ ಹಾಗೂ ಕೈ ಮತ್ತು ಕಾಲಿನ ಎಲುಬುಗಳು ಪತ್ತೆಯಾಗಿವೆ.