Yogi Adityanath: ಯೋಗಿ ಆದಿತ್ಯನಾಥ್ 10 ದಿನಗಳಲ್ಲಿ ರಾಜೀನಾಮೆ ಕೊಡದಿದ್ರೆ ಬಾಬಾ ಸಿದ್ದಿಕಿ ರೀತಿ ಸಾಯ್ತಾರೆ! ಅಷ್ಟಕ್ಕೂ ಈ ಕೊಲೆ ಬೆದರಿಕೆ ಯಾರದ್ದು?

Share the Article

Yogi Adityanath: ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಶನಿವಾರ ಸಂಜೆ ಅಪರಿಚಿತ ಸಂಖ್ಯೆಯಿಂದ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು 10 ದಿನಗಳಲ್ಲಿ ರಾಜೀನಾಮೆ ನೀಡದಿದ್ದರೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರಂತೆಯೇ ಹತ್ಯೆ ಮಾಡಲಾಗುವುದು ಎಂದು ಸಂದೇಶವೊಂದು ಬಂದಿದೆ. ಆದರೆ ಬೆದರಿಕೆ ಸಂದೇಶವನ್ನು ಯಾರು ಕಳುಹಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಕೊಲೆ ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಯೋಗಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಒಂದು ಕಡೆ, ಮುಂಬೈ ಪೊಲೀಸರು ಈ ಕರೆಯನ್ನು ತನಿಖೆ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಸಂದೇಶವನ್ನು ಕಳುಹಿಸಿದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ. ಮತ್ತೊಂದೆಡೆ, ಈ ಬಗ್ಗೆ ವಿವರಗಳನ್ನು ಯುಪಿ ಪೊಲೀಸರಿಗೆ ಕಳುಹಿಸಲಾಗಿದೆ. ಇದೀಗ, ಯುಪಿ ಪೊಲೀಸರು ಕೂಡ ತನಿಖೆ ಆರಂಭಿಸಿದ್ದಾರೆ.

ಮಾಹಿತಿ ಪ್ರಕಾರ, ಸಿಎಂ ಯೋಗಿಗೆ ಹಲವು ಬಾರಿ ಬೆದರಿಕೆಗಳು ಬಂದಿವೆ ಈ ವರ್ಷ ಸಿಎಂ ಯೋಗಿಗೆ ಹಲವು ಬಾರಿ ಕೊಲೆ ಬೆದರಿಕೆಗಳು ಬಂದಿದ್ದವು. ಬೆದರಿಕೆ ಹಾಕಿದವರನ್ನು ಯುಪಿ ಪೊಲೀಸರು ವಿವಿಧ ಸ್ಥಳಗಳಿಂದ ಬಂಧಿಸಿದ್ದಾರೆ.

Leave A Reply