Waqf Ammendment Bill: ವಕ್ಫ್‌ ತಿದ್ದುಪಡಿ ಮಸೂದೆ ವಿರೋಧ; ಮುಸ್ಲಿಮರಿಂದ 3.66 ಕೋಟಿ ಇಮೇಲ್!

Waqf Ammendment Bill: ಮುಸ್ಲಿಮರು ಮಸೂದೆಯಲ್ಲಿ ತಿದ್ದುಪಡಿ ಬಯಸದಿದ್ದರೆ ಅದನ್ನು ಬದಿಗಿರಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಶನಿವಾರ ಹೇಳಿದೆ ಎಂದು ವರದಿಯಾಗಿದೆ.

13 ದಿನಗಳಲ್ಲಿ 3.66 ಕೋಟಿಗೂ ಹೆಚ್ಚು ಮುಸ್ಲಿಮರು ಇಮೇಲ್‌ ಮೂಲಕ ವಕ್ಫ್‌ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದು, ಯಾವಾಗ ಮುಸ್ಲಿಮರು ಈ ಮಸೂದೆಯನ್ನು ಬಯಸುವುದಿಲ್ಲವೋ ಆಗ ಸರಕಾರ ಇದನ್ನು ನಿರ್ಲಕ್ಷ್ಯಿಸಬೇಕು ಎಂದು ಎಐಎಂಪಿಬಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಮೊಹಮ್ಮದ್‌ ಫಜಲುರಹೀಂ ಮುಜಾದಿದಿ ಹೇಳಿದ್ದಾರೆ.

ನವೆಂಬರ್‌ 23-24 ರಂದು ಬೆಂಗಳೂರಿನಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ 29 ನೇ ಸಮ್ಮೇಳನವು ಬೆಂಗಳೂರಿನಲ್ಲಿ ನಡೆಯಲಿದೆ. ಇಲ್ಲಿ ವಕ್ಫ್‌ಬೋರ್ಡ್‌ ತಿದ್ದುಪಡಿ ಮಸೂದೆ ಕುರಿತು ಚರ್ಚೆ ಜೊತೆಗೆ ಹಲವು ವಿಷಯಗಳ ಚರ್ಚೆ ನಡೆಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

Leave A Reply

Your email address will not be published.