MUDA Scam: ಮುಡಾದಲ್ಲಿ ಮತ್ತೊಂದು ದೊಡ್ಡ ಹಗರಣ; ಕೋಟ್ಯಾಂತರ ರೂಪಾಯಿ ಗುಳುಂ
MUDA: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮತ್ತೊಂದು ಭಾರೀ ದೊಡ್ಡ ಹಗರಣವೊಂದು ಬೆಳಕಿಗೆ ಬಂದಿದೆ. ಮುಡಾದ ಖಾತೆಗೆ ಹಣ ಜಮಾ ಮಾಡದೆ, ಸುಳ್ಳು ದಾಖಲೆ ಸೃಷ್ಟಿ ಮಾಡಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಇದರಲ್ಲಿ ಹೊರಗುತ್ತಿಗೆ ನೌಕರರು, ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿದ್ದಾರೆ. ಎಂದು ಮೂಡ ಉಳಿಸಿ ಹೋರಾಟಗಾರರ ವೇದಿಕೆ ಆರೋಪ ಮಾಡಿದೆ.
ಪ್ರಾಧಿಕಾರದ ಕೆಲವು ಅಧಿಕಾರಿಗಳು ಹಾಗೂ ಬ್ಯಾಂಕ್ ಆಫ್ ಬರೋಡ ಶಾಖೆಯ ಸಿಬ್ಬಂದಿಗಳು ಮುಡಾ ಕಂದಾಯ ಇಲಾಖೆಯ ವಿವಿಧ ಸೇವೆಗೆ 93 ಗ್ರಾಹಕರಿಂದ ಹಣ ಪಡೆದು ಪ್ರಾಧಿಕಾರದ ಖಾತೆಗೆ ಹಣ ಜಮೆ ಮಾಡಿಲ್ಲ. ಬ್ಯಾಂಕ್‌ನ ನಕಲಿ ಚಲನ್‌ಗಳನ್ನು ಸೃಷ್ಟಿ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಹಣ ಕಟ್ಟಲಾಗಿದೆ ಎನ್ನುವ ಬ್ಯಾಂಕ್ ಸೀಲ್ ಇದ್ದರೂ, ಹಣ ಮಾತ್ರ ಗುಳುಂ ಆಗಿದೆ. ಇದರಿಂದ ಹಣಕಾಸು ವಿಭಾಗದ ಅಧಿಕಾರಿಗಳು ಕಂಗಾಲಾಗಿದ್ದಾರೆ. ನಂತರ ಪ್ರಾಥಮಿಕ ತನಿಖೆ ಮಾಡಿದ ಈ ವಂಚನೆ ಪ್ರಕರಣ ಗೊತ್ತಾಗಿದೆ. ಇದರಿಂದ ಮುಡಾ ಮತ್ತು ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ಚಲನ್ ಮತ್ತು ಸೀಲು ದುರ್ಬಳಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.