Tejaswi Surya: ಇಂದು ಕಾಂಗ್ರೆಸ್ ಉಚಿತ ಆಮಿಷ; ನಾಳೆ ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯಲ್ಲ-ಸಂಸದ ತೇಜಸ್ವಿ ಸೂರ್ಯ
Tejaswi Surya: ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ವಿರುದ್ಧ ವಾಗ್ದಳಿ ಮಾಡಿದ್ದಾರೆ. ʼಕಾಂಗ್ರೆಸ್‌ನ ಉಚಿತ ಆಮಿಷಗಳಿಗೆ ಬಲಿಯಾದರೆ ಮುಂದೆ ದೇವಸ್ಥಾನ, ಮಠಗಳೂ ಉಳಿಯುವುದಿಲ್ಲʼ ಎಂದು ಹೇಳಿದ್ದಾರೆ.
ಈಗ ಉಚಿತ ಬಸ್ ಸೌಲಭ್ಯ ನೀಡಿದ ಕಾಂಗ್ರೆಸ್‌ನಿಂದ ನೀವು ಧರ್ಮಸ್ಥಳ, ಶೃಂಗೇರಿ ಅಂತ ಓಡಾಡುತ್ತಿದ್ದೀರಿ. ಹೀಗೆ ಉಚಿತ ಕೊಡ್ತಾರೆ ಎಂದು ಕಾಂಗ್ರೆಸ್‌ಗೆ ಮತ ನೀಡಿದರೆ ಮುಂದಿನ ದಿನಗಳಲ್ಲಿ ಉಚಿತ ಬಸ್ಸೂ ಇರಲ್ಲ. ನೋಡಲು ಶೃಂಗೇರಿ, ಧರ್ಮಸ್ಥಳವೂ ಇರುವುದಿಲ್ಲ. ಅದು ವಕ್ಫ್‌ನದ್ದು ಎಂದು ಹೇಳುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.
ವಕ್ಫ್ ಸಭೆ ನಡಾವಳಿಯಲ್ಲಿ ಸಿಎಂ ಸೂಚನೆ ಎಂದು ಹೇಳಲಾಗಿದ್ದು, ವಕ್ಫ್ ಅದಾಲತ್ ಕಲ್ಪನೆ ಸಂವಿಧಾನದಲ್ಲಿ ಹೇಳಿದೆಯೇ? ವಕ್ಫ್ ಕಾಯಿದೆ, ಕಂದಾಯ ಕಾಯಿದೆಯಡಿ ವಕ್ಫ್ ಅದಾಲತ್ ಮಾಡಲು ಆಗುವುದಿಲ್ಲ. ವಕ್ಫ್ ಅದಾಲತ್ ಎನ್ನುವುದು ಸಿದ್ದರಾಮಯ್ಯ ಸರಕಾರದ ಸಂಶೋಧನೆ, ಇದಕ್ಕೆ ಕಾನೂನಿಲ್ಲಿ ಅವಕಾಶ ಇಲ್ಲ ಎಂದು ಹೇಳಿದರು.