Udupi: ʼದಿಶಾಂಕ್‌ʼ ಆಪ್‌ನಲ್ಲಿ ಉಡುಪಿಯಲ್ಲಿ ʼಸುಲ್ತಾನಪುರʼ ಹೆಸರುʼ ! ಹೆಸರು ನೋಡಿ ಗ್ರಾಮಸ್ಥರು ಶಾಕ್‌

Share the Article

Udupi: ಇತ್ತೀಚೆಗೆ ರಾಜ್ಯದಲ್ಲಿ ರೈತರ ಪಹಣಿಯಲ್ಲಿ ʼವಕ್ಫ್‌ ಆಸ್ತಿʼ ಹೆಸರು ನಮೂದಾಗಿರುವ ಕಾರಣ, ರೈತರು ತಮ್ಮ ತಮ್ಮ ಜಮೀನು ಪಹಣಿ, ಸರಕಾರಿ ದಾಖಲೆಗಳನ್ನು ತೆಗೆದು ನೋಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಜನರು ಹೀಗೆ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಉಡುಪಿಯಲ್ಲಿ ʼಸುಲ್ತಾನಪುರʼ ಎಂಬ ಹೆಸರು ಕಂಡು ದಂಗಾಗಿದ್ದಾರೆ.

ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದಲ್ಲಿ ಸುಲ್ತಾನಪುರ ಹೆಸರು ನಮೂದು ಮಾಡಲಾಗಿದೆ. ಯಾವತ್ತೂ ಇಲ್ಲದ ಈ ಹೆಸರು ಯಾವಗ ಬಂದು ಸೇರಿದೆ ಗೊತ್ತಿಲ್ಲ. ಆದರೆ ಕರ್ನಾಟಕ ರಾಜ್ಯ ಸರಕಾರದ ದಿಶಾಂಕ್‌ ಆಪ್‌ನಲ್ಲಿ ಸುಲ್ತಾನಪುರ ಎಂಬ ಹೆಸರು ನಮೂದು ಮಾಡಲಾಗಿದೆ. ವಕ್ಫ್‌ ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಇದೀಗ ಸರಕಾರಿ ದಾಖಲೆ ತಡಕಾಡುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಈ ಹೆಸರಿರುರುವು ಕಂಡು ಬಂದಿದೆ.

ಶಿವಳ್ಳಿ ಸುತ್ತಮುತ್ತಲಿನ ಪರಿಸರದಲ್ಲಿ ಈ ಹೆಸರಿನ ಊರೇ ಇಲ್ಲ. ಆದರೆ ಆಪ್‌ನಲ್ಲಿ ಸುಲ್ತಾನಪುರ ಹೆಸರಿಗೆ. ಊರಿಗೆ ಸಂಬಂಧವಿಲ್ಲದೇ ಸಾಲು ಸಾಲು ಹೆಸರುಗಳಿವೆ. ಮುದ್ದತ್ತನೂರು, ಸೋಟ್ನಟ್ಟಿ, ಪೇಪ್ನೋಲ್ಲಿ, ಮಿಕ್ಕಿರೆ, ಸರ್ಕೂರು ಈ ಹೆಸರುಗಳು, ಎಂದೂ ಕೇಳರಿಯದ ಹೆಸರುಗಳು ಎಲ್ಲಿಂದ ಬಂದವು ಎಂಬ ಚರ್ಚೆ ಇದೀಗ ಹೆಚ್ಚಾಗಿದೆ.

ಆರ್‌ಟಿಸಿ ಆಪ್‌ ಪರಿಶೀಲನೆ ಮಾಡುವ ಆಪ್‌ ದಿಶಾಂಕ್‌ ಆಪ್‌ ಅಲ್ಲ. ಸರ್ವೇ ನಂಬರ್‌ಗಳನ್ನು ಗುರುತು ಮಾಡಲು ಈ ಆಪ್‌ ತಯಾರು ಮಾಡಲಾಗಿದೆ. ಆದರೆ ಸ್ಥಳದ ಹೆಸರು ನಮೂದಿಸುವ ಸಮಯದಲ್ಲಿ ತಪ್ಪಾಗಿದೆ. ಈ ಆಪ್‌ನಲ್ಲಿ ಅನೇಕ ತಪ್ಪುಗಳು ಕಂಡು ಬಂದಿದೆ. ಈ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.

Leave A Reply