Save Biodiversity: ಜೀವವೈವಿಧ್ಯದ ಪ್ರದೇಶಗಳ ಸಂರಕ್ಷಣೆಗೆ ಬದ್ಧತೆ ಘೋಷಿಸಿದ ಭಾರತ: 2030ರ ವೇಳೆಗೆ ಕನಿಷ್ಠ ಶೇ.30ರಷ್ಟು ಸಂರಕ್ಷಣೆ

Share the Article

Save Biodiversity: ನವೀಕೃತ ಜೀವವೈವಿಧ್ಯ ಕ್ರಿಯಾ ಯೋಜನೆಗೆ ಭಾರತ(India) ಚಾಲನೆ ಕೊಟ್ಟಿದೆ. ಯೋಜನೆಯು ಜಾಗತಿಕ ಜೀವವೈವಿಧ್ಯ ಉಳಿಸುವ ಗುರಿಗಳಿಗೆ ಅನುಗುಣವಾಗಿ 2030ರ ವೇಳೆಗೆ ದೇಶದಲ್ಲಿಯ ಕನಿಷ್ಠ ಶೇ.30ರಷ್ಟು ಜೀವವೈವಿಧ್ಯ ಪ್ರದೇಶಗಳನ್ನು ಸಂರಕ್ಷಿಸುವ(Save)ಗುರಿಯನ್ನು ಹೊಂದಿದೆ. ಇವುಗಳಲ್ಲಿ ಭೂಪ್ರದೇಶ(Land), ಒಳನಾಡು ಜಲ ಪ್ರದೇಶ(Water), ಕರಾವಳಿ(Coastal) ಮತ್ತು ಸಾಗರ(sea) ಪ್ರದೇಶಗಳು ಸೇರಿವೆಕೊಂಡಿದೆ.

16ನೇ ವಿಶ್ವಸಂಸ್ಥೆ ಜೀವವೈವಿಧ್ಯ ಸಮ್ಮೇಳನ ಕೊಲಂಬಿಯಾದ ಕ್ಯಾಲಿಯಲ್ಲಿ ನಡೆಯಿತು. ಈ ವೇಳೆ ಭಾರತ ತನ್ನ ಪರಿಷ್ಕೃತ ರಾಷ್ಟ್ರೀಯ ಜೀವವೈವಿಧ್ಯ ಕಾರ್ಯತಂತ್ರ ಮತ್ತು ಕ್ರಿಯಾ ಯೋಜನೆ(ಎನ್‌ಬಿಎಸ್‌ಎಪಿ)ಯನ್ನು ಅನಾವರಣಗೊಳಿಸಿತು. ಇದರಲ್ಲಿ 2022ರಲ್ಲಿ ಕೆನಡಾದಲ್ಲಿ ನಡೆದಿದ್ದ 15ನೇ ವಿಶ್ವಸಂಸ್ಥೆ ಜೀವವೈವಿಧ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾಗಿದ್ದ ಕನ್ನಿಂಗ್-ಮಾಂಟ್ರಿಯಲ್ ಜೀವವೈವಿಧ್ಯ ಚೌಕಟ್ಟು(KM- GBF) ಅಡಿ ನಿಗದಿಗೊಳಿಸಲಾಗಿದ್ದ 23 ಜಾಗತಿಕ ಗುರಿಗಳಿಗೆ ಅನುಗುಣವಾಗಿ 23 ರಾಷ್ಟ್ರೀಯ ಗುರಿಗಳನ್ನು ನಮೂದಿಸಲಾಗಿದೆ.

ಕನಿಷ್ಠ ಶೇ.30ರಷ್ಟು ಜಾಗತಿಕ ಭೂ ಪ್ರದೇಶ ಮತ್ತು ಸಾಗರ ಪ್ರದೇಶಗಳ ಸಂರಕ್ಷಣೆ 2030ರ ವೇಳೆಗೆ ಮುಗಿಸುವುದು ಕೆಎಂ-ಜಿಬಿಎಫ್‌ನ ಮುಖ್ಯ ಧ್ಯೇಯವಾಗಿದೆ. ಅರಣ್ಯ, ಜವುಗು ಭೂಮಿ ಹಾಗೂ ನದಿಗಳಿಂದ ಸಿಗುವ ಸ್ವಚ್ಛ ನೀರು ಮತ್ತು ಗಾಳಿಯಂತಹ ಅಗತ್ಯ ಸಂಪನ್ಮೂಲಗಳು ಹಾನಿಗೀಡಾಗಿವೆ. ಇವುಗಳು ಮತ್ತೆ ಉತ್ತಮ ಪರಿಸರ ವ್ಯವಸ್ಥೆಗಳನ್ನು ಒದಗಿಸುವುದನ್ನು ಮುಂದುವರೆಸಲು ಅವುಗಳ ಪುನರುಜ್ಜಿವನದ ಅಗತ್ಯವಿದೆ ಎಂಬ ಉದ್ದೇಶವನ್ನು ಹೊಂದಲಾಗಿದೆ.

ಭಾರತವು 17 ಬೃಹತ್ ಜೀವವೈವಿಧ್ಯ ದೇಶಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
ವಿಶ್ವ ಸಂಸ್ಥೆ ಸಮಾವೇಶದ ಸದಸ್ಯತ್ವವನ್ನು 1994ರಲ್ಲಿ ಜೈವಿಕ ವೈವಿಧ್ಯತೆ ಕುರಿತು ಭಾರತ ಪಡೆದುಕೊಂಡಿದೆ. ಅಲ್ಲದೆ ನಮ್ಮ ದೇಶ, ಜಾಗತಿಕ ಭೂಪ್ರದೇಶದ ಕೇವಲ ಶೇ.2.4 ವಿಸ್ತೀರ್ಣದಲ್ಲಿ ಶೇ.7-8ರಷ್ಟು ವಿಶ್ವದಲ್ಲಿ ದಾಖಲಿತ ಜೀವಿವರ್ಗಗಳನ್ನು ಪಡೆದುಕೊಂಡಿದೆ.

Leave A Reply