Rishab Shetty First Look From Jai Hanuman: ‘ಜೈ ಹನುಮಾನ್’ ಚಿತ್ರದ ರಿಷಬ್ ಶೆಟ್ಟಿ ಅವರ ಫಸ್ಟ್ ಲುಕ್ ಔಟ್ ; ಬಜರಂಗ ಬಲಿ ಅವತಾರ ನೋಡಿ ಅಭಿಮಾನಿಗಳು ಖುಷ್‌

Share the Article

Rishab Shetty First Look From Jai Hanuman: ಪ್ರಶಾಂತ್ ವರ್ಮಾ ಅವರ ಬಹು ನಿರೀಕ್ಷಿತ ಸೀಕ್ವೆಲ್ ‘ಜೈ ಹನುಮಾನ್’ ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

ದೀಪಾವಳಿಗೆ ಒಂದು ದಿನ ಮುಂಚಿತವಾಗಿ, ‘ಜೈ ಹನುಮಾನ್’ ನಿಂದ ರಿಷಬ್ ಶೆಟ್ಟಿಯ ಮೊದಲ ಲುಕ್‌ ಅನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. ಚಿತ್ರದ ನಿರ್ಮಾಣ ಸಂಸ್ಥೆ Mythri Official ಚಿತ್ರದ ಅದ್ಭುತ ಪೋಸ್ಟರ್ ಅನ್ನು Instagram ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ರಿಷಬ್ ಶೆಟ್ಟಿ ಕೇಸರಿ ಬಟ್ಟೆ ಧರಿಸಿ ರಾಮನ ಮೂರ್ತಿಯನ್ನು ಎದೆಯ ಮೇಲೆ ಹಿಡಿದು ಕುಳಿತಿದ್ದಾರೆ. ಬಜರಂಗಿ ಬಲಿ ಅವತಾರದಲ್ಲಿ ರಿಷಬ್ ಶೆಟ್ಟಿಯನ್ನು ನೋಡಿದ ಅಭಿಮಾನಿಗಳು ಅವರನ್ನು ಸಾಕಷ್ಟು ಹೊಗಳುತ್ತಿದ್ದಾರೆ.

‘ಜೈ ಹನುಮಾನ್’ ಚಿತ್ರದ ರಿಷಬ್ ಶೆಟ್ಟಿಯ ಫಸ್ಟ್ ಲುಕ್ ಹಂಚಿ, ” ವಚನಪಾಲನಂ ಧರ್ಮಸ್ಯ ಮೂಲಮ್” ಎಂದು ಬರೆಯಲಾಗಿದೆ. ತ್ರೇತಾಯುಗದ ಭರವಸೆ, ಇದು ಕಲಿಯುಗದಲ್ಲಿ ಖಂಡಿತವಾಗಿಯೂ ಈಡೇರುತ್ತದೆ ಎಂಬುವುದು ಇದರ ಅರ್ಥ.

‘ಜೈ ಹನುಮಾನ್’ ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU) ನ ಪ್ರಮುಖ ಯೋಜನೆಯಾಗಿದೆ.

 

View this post on Instagram

 

A post shared by Mythri Movie Makers (@mythriofficial)

Leave A Reply