Holiday: ಇಂದು ಶಾಲಾ-ಕಾಲೇಜುಗಳಿಗೆ ಅರ್ಧ ದಿನ ರಜೆ ಘೋಷಣೆ, ರಾಜ್ಯ ಸರ್ಕಾರ ಆದೇಶ!!

Holiday: ದೀಪಾವಳಿ ಹಬಕ್ಕೆ ಈಗಾಗಲೇ ಸಾಲು ಸಾಲು ಸರ್ಕಾರಿ ರಜೆಗಳು ಘೋಷಣೆಯಾಗಿವೆ. ಆದರೀಗ ಈ ಬೆನ್ನಲ್ಲೇ ರಾಜ್ಯ ಸರ್ಕಾರವು ಇಂದು (ಅ.30) ರಾಜ್ಯದ ಶಾಲಾ-ಕಾಲೇಜುಗಳಿಗೆ ಅರ್ಧ ದಿನ ರಜೆ ಘೋಷಿಸಿದೆ. ಹಾಗಂತ ಇದು ನಮ್ಮ ಕರ್ನಾಟಕ ರಾಜ್ಯದಲ್ಲಿ ಆದ ಘೋಷಣೆಯಲ್ಲ ಬದಲಿಗೆ ತಮಿಳುನಾಡು ಸರ್ಕಾರ(Tamilunadu Government) ತನ್ನ ರಾಜ್ಯದ ಶಾಲಾ-ಕಾಲೇಜುಗಳಿಗೆ ಮಾಡಿದ ಘೋಷಣೆ.

ಹೌದು, ದೀಪಾವಳಿಗೆ(Diwali) ಸಾಲು ಸಾಲು ರಜೆ ಇರುವ ಪ್ರಯುಕ್ತ ಜನರೆಲ್ಲರೂ ತಮ್ಮ ಊರುಗಳಿಗೆ ತೆರಳಲು ಮುಂದಾಗುತ್ತಾರೆ. ಈ ವೇಳೆ ಜನಸಂದಣಿ ಹೆಚ್ಚಾಗಿರುತ್ತದೆ. ಅಂತೆಯೇ ಹೊರಗಿರುವ ಜನರು ತಮ್ಮ ಊರಿಗೆ ಹೋಗಲು ಅನುಕೂಲವಾಗುವಂತೆ ಹಾಗೂ ಸಂಜೆ ವೇಳೆ ಪ್ರಮುಖ ನಗರಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ತಮಿಳುನಾಡು ಸರ್ಕಾರ ಈ ಆದೇಶ ಹೊರಡಿಸಿದೆ. ಇಂದು ಸರ್ಕಾರ ರಜೆ ಘೋಷಣೆ ಮಾಡಿರುವುದು ಸಂಜೆ ಹೊಸ ಬಟ್ಟೆ, ಪಟಾಕಿ ಖರೀದಿಸಲು ಮುಂದಾಗಿದ್ದ ಮಕ್ಕಳಿಗೆ ಸರಕಾರದ ಈ ಘೋಷಣೆ ಸಂತಸ ನೀಡಿದೆ.

ಆದೇಶದಲ್ಲಿ ಏನಿದೆ?
ಈ ಸಂಬಂಧ ತಮಿಳುನಾಡು ಸರಕಾರ ಆದೇಶ ಹೊರಡಿಸಿದ್ದು, ”ಅಕ್ಟೋಬರ್ 30ರ ಬುಧವಾರ ಬೆಳಗ್ಗೆ ಮಾತ್ರ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ಮಧ್ಯಾಹ್ನ ಅಂದರೆ ಅರ್ಧ ದಿನ ರಜೆ ನೀಡಿ ತಮಿಳುನಾಡು ಸರಕಾರ ಆದೇಶ ಹೊರಡಿಸಿದೆ. ನವೆಂಬರ್ 4 ರಂದು ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

Leave A Reply

Your email address will not be published.