Udupi: ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ ಪ್ರಕರಣ; ಪೊಲೀಸರಿಂದ ಸಾಕ್ಷ್ಯಗಳ ಹುಡುಕಾಟ

Share the Article

Udupi: ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ಬಾಲಕೃಷ್ಣ ಪೂಜಾರಿ (44) ಇವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸಾಕ್ಷ್ಯಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಪತಿಯ ಊಟದಲ್ಲಿ ವಿಷ ಬೆರೆಸಿ, ಮಧ್ಯರಾತ್ರಿ ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪಿ ಪ್ರತಿಮಾ, ಈಕೆಯ ಪ್ರಿಯಕರ ಆರೋಪಿ ದಿಲೀಪ್‌ ಹೆಗ್ಡೆ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಆರೋಪಿ ದಿಲೀಪ್‌ ಹೆಗ್ಡೆ ರಾತ್ರಿ ಸಮಯದಲ್ಲಿ ಅಜೆಕಾರಿನ ದೆಪ್ಪುತ್ತೆಗೆ ವಾಹನದಲ್ಲಿ ಬಂದಿದ್ದು, ಆತ ಬಂದು ಹೋಗಿರುವ ರಸ್ತೆಬದಿಗಳ ಸಿಸಿ ಕೆಮರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಪ್ರತಿಮಾಳಿಗೆ ವಿಷ ವಸ್ತು ನೀಡಿದ ಸ್ಥಳಗಳಲ್ಲಿನ ಸಿಸಿ ಕೆಮರಾಗಳ ಪರಿಶೀಲನೆ ಕೂಡಾ ನಡೆಸಲಿದ್ದಾರೆ.

ಬಾಲಕೃಷ್ಣ ಅವರ ಅಂತ್ಯಸಂಸ್ಕಾರ ನಡೆದು ಹೋಗಿರುವ ಕಾರಣ ವಿಷ ಪತ್ತೆಗಾಗಿ ಅ.28 ರಂದು ಎಲುಬಿನ ತುಂಡುಗಳನ್ನು ಮನೆಯವರಿಂದ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ. ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಪೊಲೀಸರ ನಡೆಯಲ್ಲಿ ಕುತೂಹಲ;
ಎ1 ಆರೋಪಿ ಪ್ರತಿಮಾಳನ್ನು ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿಲ್ಲ. ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಉಂಟು ಮಾಡಿದೆ. ವರದಿ ಪ್ರಕಾರ, ಪ್ರಕರಣವನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಪ್ರಾಥಮಿಕ ಸಾಕ್ಷ್ಯಗಳನ್ನು ಕಲೆ ಹಾಕಿ, ನಂತರ ಪ್ರತಿಮಾಳನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಿದ್ದಾರೆ ಎನ್ನಲಾಗಿದೆ.

Leave A Reply