Medicine: ಈ ಕಂಪನಿಯ ಕಣ್ಣಿನ ಡ್ರಾಪ್, ಬಿಪಿ ಸೇರಿ 7 ಔಷಧಿಗಳು ಬ್ಯಾನ್!

Medicine Ban: ಐಡ್ರಾಪ್ಸ್, ರಕ್ತದೊತ್ತಡದ ಔಷಧಿಗಳು ಸೇರಿದಂತೆ ಉತ್ತರಾಖಂಡದಲ್ಲಿ ತಯಾರಿಸಲಾದ ಅನೇಕ ಆಂಟಿಬಯೋಟಿಕ್ ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಈ ಹಿನ್ನಲೆ ರಾಜ್ಯ ಔಷಧ ಆಡಳಿತ ಇಲಾಖೆ ಏಳು ಔಷಧಿಗಳ ಪರವಾನಗಿಯನ್ನು ರದ್ದುಗೊಳಿಸಿದೆ.

ಹೌದು, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಹೊರಡಿಸಿದ ಎಚ್ಚರಿಕೆಯ ಪ್ರಕಾರ, ಉತ್ತರಾಖಂಡದಲ್ಲಿ ತಯಾರಿಸಿದ ಆಂಟಿಬಯೋಟಿಕ್ ಸೆಫುರಾಕ್ಸಿಮ್, ಲೆಪ್ರೊಮೈಡ್, ಬ್ಯಾಕ್ಟೀರಿಯಾದ ಸೋಂಕಿನ ಔಷಧಿ ಫ್ಲೋಕ್ಸಾಗಾಸ್, ಅಧಿಕ ರಕ್ತದೊತ್ತಡ ಔಷಧಿ ವಿಂಟೆಲ್ ಸೇರಿದಂತೆ ಒಟ್ಟು ಏಳು ಔಷಧಗಳು ಪರೀಕ್ಷೆಯಲ್ಲಿ ವಿಫಲವಾಗಿವೆ. ಈ ಔಷಧಿಗಳ ಮಾದರಿಗಳು ವಿಫಲವಾದ ನಂತರ ಈ ಔಷಧಿಗಳ ತಯಾರಿಕೆಯನ್ನು ನಿಲ್ಲಿಸಲಾಗಿದೆ.

ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಎಚ್ಚರಿಕೆಯ ನಂತರ ಎಲ್ಲಾ ಔಷಧೀಯ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರಾಖಂಡದ ಆಹಾರ ಮತ್ತು ಔಷಧ ಇಲಾಖೆಯ ಹೆಚ್ಚುವರಿ ಆಯುಕ್ತ ಮತ್ತು ಔಷಧ ನಿಯಂತ್ರಕ ತಜ್ಬರ್ ಸಿಂಗ್ ಜಗ್ಗಿ ಹೇಳಿದ್ದಾರೆ. ಈ ಕಂಪನಿಗಳು ಇನ್ನು ಮುಂದೆ ಈ ಔಷಧಿಗಳನ್ನು ತಯಾರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಈ ಎಲ್ಲ ಔಷಧಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ.

ಈಗಾಗಲೇ ಸೆಪ್ಟೆಂಬರ್‌ನಲ್ಲಿ ಒಟ್ಟು 49 ಔಷಧಿಗಳು ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು CDSCO ತನ್ನ ಸೆಪ್ಟೆಂಬರ್ ವರದಿಯಲ್ಲಿ ತಿಳಿಸಿದೆ. ಕಳೆದ ತಿಂಗಳು ಸಿಡಿಎಸ್ ಸಿಒ ಒಟ್ಟು 3 ಸಾವಿರ ಔಷಧಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 49 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.

Leave A Reply

Your email address will not be published.