Udupi: ಸ್ಲೋ ಪಾಯಿಸನ್ ನೀಡಿ ಗಂಡನ ಹತ್ಯೆ ಪ್ರಕರಣ – ತನಿಖೆ ವೇಳೆ ಹೆಂಡತಿ ಪ್ರತಿಮಾಳ ಹೇಳಿಕೆ ಕೇಳಿ ಬೆಚ್ಚಿಬಿದ್ದ ಉಡುಪಿ ಪೊಲೀಸರು – ಹಾಗಿದ್ರೆ ರೀಲ್ಸ್ ರಾಣಿ ಹೇಳಿದ್ದೇನು?
Udupi: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಪ್ರಿಯಕರನ ಜೊತೆ ಸೇರಿ ಪತಿಗೆ ಸ್ಲೋ ಪಾಯಿಸನ್ ನೀಡಿ ಪತ್ನಿ ಕೊಲೆ (kill) ಮಾಡಿರುವಂತಹ ಘಟನೆ ಇದೀಗ ಕರಾವಳಿಯಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಆ ಪಾಪಿ ಹೆಂಡ್ತಿ ಪ್ರತಿಮಾಳ ಸ್ಫೋಟಕ ಆಡಿಯೋ ಕೂಡ ವೈರಲ್ ಆಗಿತ್ತು. ಅಲ್ಲದೆ ಆಕೆಯನ್ನು ಹಾಗೂ ಆಕೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪ್ರತಿಮಾ ಹೇಳಿದ ಆ ಒಂದು ಸ್ಟೇಟ್ಮೆಂಟ್ ಕೇಳಿ ಪೊಲೀಸರೆ ಶಾಕ್ ಆಗಿದ್ದರೆ ಎನ್ನಲಾಗಿದೆ.
ಹೌದು, ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ(Dr Arun K) ಅವರು ಮೃತ ಬಾಲಕೃಷ್ಣ(Balakrishna) ಕೊಲೆ ಕುರಿತಂತೆ ಆರೋಪಿಗಳಾದ ಅವರ ಪತ್ನಿ ಪ್ರತಿಮಾ ಹಾಗೂ ಆಕೆಯ ಗೆಳೆಯ ದಿಲೀಪ್ ಹೆಗ್ಡೆ ಅವರು ಸೇರಿ ಕೃತ್ಯ ಮಾಡಿದ್ದಾರೆ. ಇಬ್ಬರನ್ನೂ ಬಂಧನ ಮಾಡಿದ್ದು, ಪ್ರತಿಮಾಗೆ(Pratima) 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿ ದಿಲೀಪ್ ಹೆಗ್ಡೆಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದೀಗ ಈ ಬೆನ್ನಲ್ಲೇ ಗಂಡನ ಹತ್ಯೆಯನ್ನು ಸಹೋದರನ ಬಳಿ ಪತ್ನಿ ಒಪ್ಪಿಕೊಂಡಿದ್ದು, ಅವರದ್ದು ಎನ್ನಲಾದ ಆಡಿಯೋ ಕೂಡ ವೈರಲ್ ಆಗಿದೆ. ಅಲ್ಲದೆ ಕಂಬಿ ಹಿಂದೆ ಸೇರುವ ಮೊದಲೇ ಪತ್ನಿ ಪ್ರತಿಮಾ ಎಲ್ಲಾ ದುಷ್ಟಕೃತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.
ಪ್ರತಿಮಾ ಹೇಳಿದ್ದೇನು?
ಪತ್ನಿ ಪ್ರತಿಮಾ ಪತಿ ಬಾಲಕೃಷ್ಣ ಪೂಜಾರಿಯನ್ನ ಕೊಲ್ಲಲು ಖತರ್ನಾಕ್ ಪ್ಲಾನ್ ಮಾಡಿಕೊಂಡಿದ್ದಳು. ನಿತ್ಯವೂ ಸ್ಲೋ ಪಾಯ್ಸನ್ ಕೊಟ್ಟು ಸಾಯಿಸೋಣ ಅಂತ ಡಿಸೈಡ್ ಮಾಡಿದವಳಿಗೆ ಪಾಯ್ಸನ್ ಸಪ್ಲೈ ಮಾಡಿದವನು ಬಾಯ್‌ಫ್ರೆಂಡ್ ದಿಲೀಪ್ ಹೆಗ್ಡೆ. ಒಂದೇ ಬಾರಿ ಕೊಂದರೇ ಡೌಟ್ ಬರುತ್ತೆ ಅಂತ ಹಂತ ಹಂತವಾಗಿ ವಿಷವುಣಿಸಿದರೆ ಅಂಗಾಂಗಳಿಗೆ ಡ್ಯಾಮೇಜ್ ಆಗಿ, ಗಂಡ ಸಾಯುತ್ತಾನೆ. ನಂತರ ನ್ಯಾಚುರಲ್ ಡೆತ್ ಅಂತ ಬಿಂಬಿಸೋಣ ಅಂತಾ ಪತ್ನಿ ಪ್ರತಿಮಾ ದುರಾಲೋಚನೆ ಮಾಡಿದ್ದಳು. ಆಕೆ ಅಂದುಕೊಂಡಂತೆ ವಿಷದಿಂದ ಪತಿ ಬಾಲಕೃಷ್ಣ ಪೂಜಾರ್ ಕಿಡ್ನಿ ಮತ್ತು ಲಿವರ್ ಡ್ಯಾಮೇಜ್ ಆಗಿತ್ತು. ದೇಹದ ನರಗಳು ಸಂವೇದನೆ ಕಳೆದುಕೊಂಡಿದ್ದವು. ಬಾಲಕೃಷ್ಣ ಪೂಜಾರಿ ಕಳೆದ 25 ದಿನಗಳಿಂದ ಜ್ವರ, ವಾಂತಿ ಅಂತ ಬಳಲುತ್ತಿದ್ರು. ಗಂಡನಿಗೆ ಕಾಮಾಲೆ ರೋಗ ಬಂದಿದೆ ಅಂತ ಇದೇ ಪ್ರತಿಮಾ ಹಲವು ಆಸ್ಪತ್ರೆಗಳಿಗೆ ತಿರುಗಾಡಿದ್ಲು.
ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೂಡ ನೀಡಲಾಗಿತ್ತು. ಒಟ್ಟು 6 ಆಸ್ಪತ್ರೆಗಳಲ್ಲಿ ಗಂಡನಿಗೆ ಈಕೆ ಚಿಕಿತ್ಸೆ ಕೊಡಿಸಿದ್ದಳು. ಆದ್ರೆ, ಆಕೆಯ ಪ್ಲಾನ್ ವರ್ಕ್ ಆಗ್ತಿರಲಿಲ್ಲ. ಹೀಗಾಗಿ ತನ್ನ ಪ್ರೀತಿಗೆ ಅಡ್ಡಿಯಾಗುತಿದ್ದ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಲೆಗೈಯಲು ಅ.20 ರಾತ್ರಿ 2 ಘಂಟೆಯ ವೇಳೆಯಲ್ಲಿ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಮನೆಗೆ ಕರೆಸಿ ಪತಿಗೆ ತಿಳಿಯಬಾರದೆಂದು ಬಾತ್ ರೂಂನಲ್ಲಿ ಬಚ್ಚಿಟ್ಟಿದ್ದಳು. ಗಾಢ ನಿದ್ರೆಯಲ್ಲಿದ್ದ ಬಾಲಕೃಷ್ಣ 2.30 ರ ವೇಳೆ ಅವರನ್ನು ದಿಲೀಪ್ ಹೆಗ್ಡೆ ಬೆಡ್ಶೀಟ್ ನಲ್ಲಿ ಉಸಿರು ಗಟ್ಟಿಸಿ , ಪತ್ನಿ ಪ್ರತಿಮಾ ತನ್ನ ಗಂಡನ ಎದೆಮೇಲೆ ಹಾಗೂ ಕಾಲನ್ನು ಒದ್ದಾಡದಂತೆ ಅದುಮಿಟ್ಟು ಕೊಲೆ ಮಾಡಿದ್ದಳು. ನಂತರ ಕೊಲೆ ಮಾಡಿ ದಿಲೀಪ್ ಹೆಗ್ಡೆ ಮನೆಯಿಂದ ಕಾಲ್ಕಿತ್ತಿದ್ದನು.
ಮೃತ ಬಾಲಕೃಷ್ಣ ಅವರ ಶವದ ಮೇಲೆ ತುಟಿಯ ಭಾಗ ಹಾಗು ಗಲ್ಲದ ಭಾಗಗಳಲ್ಲಿ ಉಗುರಿನ ಗುರುತುಗಳಿದ್ದು ಮೂಗಿನ ಭಾಗ ಕೆಂಪಗಾಗಿತ್ತು. ಇದರಿಂದ ಅನುಮಾನಗೊಂಡ ಪ್ರತಿಮಳ ಅಣ್ಣ ಸಂದೀಪ್ ಅನುಮಾನ ವ್ಯಕ್ತಪಡಿಸಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಪೋಸ್ಟ್ ಮಾರ್ಟಂ ಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು . ಪೋಸ್ಟ್ ಮಾರ್ಟಂ ರಿಪೋರ್ಟ್ ಇನ್ನೂ ತಲುಪಿಲ್ಲ. ಅದಕ್ಕಾಗಿ ಪೋಲೀಸರು ಕಾಯುತಿದ್ದಾರೆ . ಪೋಸ್ಟ್ ಮಾರ್ಟಂ ರಿಪೋರ್ಟ್ ಸಿಗುವ ಮೊದಲೇ ಪತಿ ಬಾಲಕೃಷ್ಣ ರ ಕೊಲೆ ಮಾಡಿದ್ದು ನಾನೆ, ದಿಲೀಪ್ ಕೂಡ ಸಾಥ್ ಕೊಲೆಗೆ ಸಾಥ್ ನೀಡಿದ್ದು ಎಂದು ಪತ್ನಿ ಪ್ರತಿಮಾ ಅಣ್ಣನ ಸಂದೀಪ್ ಬಳಿ ತಪ್ಪೊಪ್ಪಿ ಕೊಂಡಿದ್ದಾಳೆ. ಈ ಬಗ್ಗೆ ಅಣ್ಣ ಸಂದೀಪ್ ತಂಗಿ ಪ್ರತಿಮಾಳ ಧ್ವನಿಯನ್ನು ರೆಕಾರ್ಡ್ ಮಾಡಿ ಪೋಲೀಸರಿಗೆ ಒದಗಿಸಿ ಮೃತ ಬಾಲಕೃಷ್ಣರ ಸಾವಿನ ನ್ಯಾಯಕ್ಕಾಗಿ ಕೈಜೋಡಿಸಿದ್ದನು.
ನಾಟಕವಾಡಿದ ಪ್ರತಿಮಾ :
ಮೃತ ಬಾಲಕೃಷ್ಣ ಅನಾರೋಗ್ಯ ಪೀಡಿತ ನಾಗಿದ್ದ ಸಂದರ್ಭದಲ್ಲಿ ಪತ್ನಿ ಪ್ರತಿಮಾ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆ ಖರ್ಚು ವೆಚ್ಚಗಳಿಗಾಗಿ ಸಾರ್ವಜನಿಕರಿಂದ ಸಹಾಯ ಕೋರಿದ್ದಳು. ಸ್ಥಳೀಯರು ಸೇರಿದಂತೆ ಒಟ್ಟು ನಾಲ್ಕು ಲಕ್ಷಕ್ಕೂ ಹೆಚ್ಚು ಹಣವನ್ನು ಒಟ್ಟು ಗೂಡಿಸಿದ್ದಳು.
ಆಡಿಯೋದಲ್ಲಿ ಏನಿದೆ?
ವೈರಲ್ ಆದ ಆಡಿಯೋದಲ್ಲಿ ಏನಿದೆ?
ಸಂದೀಪ್- ಹೌದಾ.. ಅವರು ರಾತ್ರಿ ಬಂದದ್ದು ಹೌದಾ?
ಪ್ರತಿಮಾ- ಬಾಗಿಲು ಹಾಕು ನಾನು ಸಾಯುತ್ತೇನೆ ನನಗೆ ಆಗುವುದಿಲ್ಲ.
ಸಂದೀಪ್- ನೀನು ಸಾಯಿ ನನಗೆ ಬೇಜಾರಿಲ್ಲ ಯಾಕಂದ್ರೆ ನನಗೆ ನನ್ನ ದೇವರೇ ಹೋದರು ಆದರೆ ನೀನು ಅವನನ್ನು ಯಾಕೆ ಕರೆದದ್ದು?
ಪ್ರತಿಮಾ- ನನ್ನದು ತಪ್ಪಾಯ್ತು ನಿಧಾನ ಮಾತನಾಡು.
ಸಂದೀಪ್- ಜೀವನೇ ಹೋಯಿತಲ್ಲ ಅಂತಹ ದೇವರನ್ನ ಯಾಕೆ ಕೊಂದದ್ದು? ನಿನಗೆ ಅವರು ಏನು ಕಷ್ಟ ಕೊಟ್ಟಿದ್ದಾರೆ. ಅವರಿಗೆ ಯಾವುದಾದರೂ ಒಂದು ಹೆಣ್ಣಿನ ಜೊತೆ ಸಂಪರ್ಕ ಇತ್ತಾ? ಮೇಲೆ ಹೋದವರಿಗೊಂದು ನ್ಯಾಯ ಸಿಗಬೇಕಲ್ಲ.
ಪ್ರತಿಮಾ- ನಾನು ಸಾಯುತ್ತೇನೆ ನಾನು ಸಾಯುತ್ತೇನೆ.
ಸಂದೀಪ್- ಕೊಂದದ್ದು ಯಾಕೆ ಹೇಳು?
ಪ್ರತಿಮಾ- ನನ್ನದು ತಪ್ಪಾಯಿತಣ್ಣ.
ಸಂದೀಪ್- ನಾನು ಮನೆಯಿಂದ ಹೋದ ಮೇಲೆ ಅವನನ್ನು ಕರೆಸಿದ್ದಾ? ನಿಜ ಹೇಳು ನಿನಗೆ ಆಗುವ ಶಿಕ್ಷೆ ಕಡಿಮೆ ಮಾಡಿಸುತ್ತೇನೆ. ನಿನ್ನ ಇನ್ನೊಂದು ಮೊಬೈಲ್ ಇದೆಯಲ್ಲ ಎಲ್ಲಿದೆ?
ಪ್ರತಿಮಾ- ನಾನು ಫೋನ್ ಮಾಡಿ ಕರೆಸಿದೆ.
ಸಂದೀಪ್- ಅವನ ಬಳಿ ಹಣ ಇದೆ ಎಂದು ನೀನು ಗಂಡನನ್ನು ಕೊಲ್ಲಿಸಿದೆಯಾ? ಐದಾರು ತಿಂಗಳಿಂದ ನಿಮ್ಮ ನಡುವಿನ ಸಂಬಂಧ ನನಗೆ ಗೊತ್ತಿದೆ.
ಪ್ರತಿಮಾ- ತಪ್ಪಾಯ್ತು ನನ್ನನ್ನು ಕ್ಷಮಿಸು. ಅವರದ್ದು ಒಂದು ಕೆಲಸ ಆಗಲಿ ಆಮೇಲೆ ನಾನು ಸಾಯುತ್ತೇನೆ.
ಸಂದೀಪ್- ನೀನು ಸತ್ತರೂ ಬೇಸರ ಪಡುವುದಿಲ್ಲ. ನಿನ್ನ ಯಾವುದೇ ಮರಣೋತ್ತರದ ಕ್ರಿಯೆ ಕೆಲಸಗಳನ್ನು ಮಾಡುವುದಿಲ್ಲ. ನಿನ್ನ ಹೆಣವನ್ನು ನದಿಗೆ ಬಿಸಾಡುತ್ತೇನೆ. ದೇವರಂತ ಬಾವನನ್ನು ಕೊಂದೆಯಲ್ಲ. ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ. ಅದರ ತಲೆಬಿಸಿ ಬೇಡ. ಆ ಬೆವರ್ಸಿಯನ್ನು ಕರೆಸಿ ಕೊಲ್ಲಿಸಿದೆಯಲ್ಲ ನಾನು ನಿನಗೆ 18 ವರ್ಷದಲ್ಲಿ ಮದುವೆ ಮಾಡಿಸಿದ್ದೇನೆ. ನಾನು ಜವಾಬ್ದಾರಿ ನಿರ್ವಹಿಸಿದ್ದೇನೆ.
ಪ್ರತಿಮಾ- ಹೊರಗೆ ಎಲ್ಲರಿಗೆ ಕೇಳಿಸುತ್ತಿದೆ ಮೆಲ್ಲ ಮಾತನಾಡು
ಸಂದೀಪ್- ಇಡೀ ಊರಿಗೆ ಗೊತ್ತಾಗಿ ಆಗಿದೆ ಮನೆಯವರಿಗೆ ಗೊತ್ತಾದರೆ ಏನು? ಹಿಂದೆ ಒಮ್ಮೆ ಕೇಸಾದಾಗ ನಾನು ಎಲ್ಲವೂ ಸರಿ ಮಾಡಿದ್ದೆ. ಆ ಮೇಲೆ ನೀವು ಸರಿಯಾಗಬೇಕಾಗಿತ್ತಲ್ಲ? ಅವನೊಬ್ಬನೇ ಬಂದದ್ದಾ? ಬೇರೆ ಯಾರಾದರು ಇದ್ರಾ? ಅಥವಾ ನೀನು ಒಬ್ಬಳೇ ಕೊಂದೆಯಾ?
ಪ್ರತಿಮಾ- ಒಬ್ಬನೇ ಬಂದದ್ದು.
ಸಂದೀಪ್- ನಿನಗೆ ಶಿಕ್ಷೆಯಾಗಬೇಕು. ಬಾವನಿಗೆ ಮೋಕ್ಷ ಸಿಗಬೇಕು. ಅವನ ಬಳಿ ದುಡ್ಡಿದೆ ಎಂದು ನೀನು ಹೋದದ್ದಲ್ವಾ? ನಿನಗೆ ಶಿಕ್ಷೆ ಆಗಬೇಕು. ಪೊಲೀಸನ್ನು ಕರೆಸಬೇಕಾ? ಬೇರೆ ಮೊಬೈಲ್ ಇದೆಯಾ? ನೀನು ಮಕ್ಕಳನ್ನೂ ಕೊಲ್ಲುತ್ತಿದ್ದೆ, ಅವರನ್ನು ಕರೆದುಕೊಂಡು ಹೋದದ್ದಕ್ಕೆ ಅವರು ಬಚಾವ್ ಆದರು. ಹಣದ ಹಿಂದೆ ಹೋದೆ.
ಪ್ರತಿಮಾ- ನಾನು ಡಿಸೈಡ್ ಮಾಡಿದ್ದೇನೆ ನಾನು ಸಾಯುತ್ತೇನೆ.
ಸಂದೀಪ್- ನಾನು ಮರ್ಯಾದೆ ಮರ್ಯಾದೆ ಅಂತ ಸೊರಗಿ ಹೋದೆ. ನಾನು ಮೂರು ತಿಂಗಳಿಂದ ಅನುಭವಿಸಿದ್ದೇನೆ.
ಅಂದಹಾಗೆ ಬಾಲಕೃಷ್ಣ ಮತ್ತು ಪ್ರತಿಮಾ 17 ವರ್ಷದ ಹಿಂದೆ ಇಬ್ಬರೂ ಮದುವೆ ಆಗಿದ್ದರು. ದಂಪತಿಗೆ ಎರಡು ಮಕ್ಕಳ್ಳಿದ್ದಾರೆ. 2020ರಲ್ಲಿ ಕೊರೋನಾ ಆವರಿಸಿಕೊಂಡ ನಂತರ ಕುಟುಂಬ ಮುಂಬೈನಿಂದ ಅಜೆಕಾರಿಗೆ ಶಿಫ್ಟ್ ಆಗಿತ್ತು. ಹೊಸ ಮನೆ ಕೂಡ ಕಟ್ಟಿಸಿದ್ದರು. ಅಜೆಕಾರು ಜಂಕ್ಷನ್ನಲ್ಲಿ ಬ್ಯೂಟಿ ಪಾರ್ಲರ್ ಮಾಡಿಕೊಂಡಿದ್ದ ಪ್ರತಿಮಾ ಮತ್ತು ಕಾರ್ಕಳದಲ್ಲಿ ಬಿಸಿನೆಸ್ ಮ್ಯಾನ್ ಆಗಿರುವ ದಿಲೀಪ್ ಹೆಗ್ಡೆ ಪರಿಚಯ ಆಗಿದೆ. ಪರಿಚಯ ಪ್ರೀತಿಗೆ ತಿರುಗಿ ಬಹಳ ಸಮಯದಿಂದ ಇಬ್ಬರು ಜೊತೆಗೆ ಓಡಾಡಿಕೊಂಡಿದ್ದರು.
Ümraniye süpürge servisi garantisi Süpürgemin parça değişimi hızlıca yapıldı. https://interactor.pro/read-blog/7831
Ümraniye süpürge tamir uzmanı Ürün teslimi tam zamanında yapıldı. https://bicobi.org/ustaelektrikci