Udupi: ಊಟ ಮಾಡುತ್ತಾ ಮನೆಯಿಂದ ಹೊರ ಬಂದ ಯುವತಿ ದಿಢೀರ್ ನಾಪತ್ತೆ !! ಬೆಚ್ಚಿಬಿದ್ದ ಮನೆ ಮಂದಿ
Udupi: ರಾತ್ರಿ ಮನೆಯಲ್ಲಿ ಊಟ ಮಾಡಿ ಮನೆಯಿಂದ ಹೊರಗೆ ಬಂದ ಯುವತಿ ದಿಢೀರ್ ಎಂದು ನಾಪತ್ತೆಯಾದ ಘಟನೆ ಉಡುಪಿ(Udupi) ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.
ಹೌದು, ಕಾಪು(Kaapu) ತಾಲ್ಲೂಕಿಪ ಕಟಪಾಡಿ ಮೂಡಬೆಟ್ಟು ಗ್ರಾಮದ ಅಚ್ಚಡದಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ. ಉಡುಪಿ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿರುವ ಶಶಿಕಲಾ(Shashikala) ಅ. 24ರಂದು ರಾತ್ರಿ ತನ್ನ ತಾಯಿ ಜೊತೆ ಊಟ ಮಾಡುತ್ತಿದ್ದಾಗ ಅರ್ಧಕ್ಕೆ ಎದ್ದು ಮನೆ ಹೊರಗೆ ಬಂದಿದ್ದಾಳೇ. ಈ ವೇಳೆ ಇದ್ದಕ್ಕಿದ್ದಂತೆ ಆಕೆ ನಾಪತ್ತೆಯಾಗಿದ್ದಾಳೆ.
ಮಗಳು ದಿಢೀರ್ ಕಾಣೆಯಾದದ್ದನ್ನು ಕಂಡು ಬೆಚ್ಚಿಬಿದ್ದ ತಾಯಿ ಅಕ್ಕ ಪಕ್ಕದ ಮನೆಯವರೊಂದಿಗೆ ಮನೆ ಪಕ್ಕದಲ್ಲಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದು, ಬಳಿಕ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.