Rusk : ಕಾಫಿ, ಟೀ ಜೊತೆ ರಸ್ಕ್ ತಿಂತೀರಾ? ಇದೆಷ್ಟು ಡೇಂಜರ್ ಅಂತ ಗಿತ್ತಾದ್ರೆ ಬೆಚ್ಚಿಬೀಳ್ತೀರಾ!!
Rusk : ಬಿಸಿ ಬಿಸಿ ಚಹಾದೊಂದಿಗೆ ರಸ್ಕ್ ಗಳನ್ನು ಆನಂದಿಸುವುದು ನಮ್ಮಲ್ಲಿಯ ಸಾಮಾನ್ಯ ಅಭ್ಯಾಸ. ಅನೇಕರು ದಿನನಿತ್ಯ ಬೆಳಿಗ್ಗೆ ಚಹಾದೊಂದಿಗೆ ರಸ್ಕ್, ಬಿಸ್ಕತ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅದೇ ತಿಂಡಿ ಸಂಜೆಯೂ ಅನುಕರಣೆಯಾಗುತ್ತದೆ. ಹಲವರು ಇದನ್ನು ಆರೋಗ್ಯಕರ ತಿಂಡಿ ಎಂದು ಪರಿಗಣಿಸುತ್ತಾರೆ. ಆದರೆ ರಸ್ಕ್ ಗಳು ನಮ್ಮ ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ? ದಿನನಿತ್ಯ ತಿಂದರೆ ಏನಾಗುತ್ತದೆ? ತಜ್ಞರು ಹೇಳೋದೇನು? ಇಲ್ಲಿದೆ ನೋಡಿ ಡೀಟೇಲ್ಸ್.
ತಜ್ಞರು ಹೇಳುವ ಪ್ರಕಾರ, ರಸ್ಕ್(Rusk) ಗಳು ಆರೋಗ್ಯಕ್ಕೆ ಹಾನಿಕಾರಕವಾದ ಅನೇಕ ರೀತಿಯ ಅಂಶಗಳನ್ನು ಹೊಂದಿವೆ. ಆಹಾರ ತಜ್ಞೆ ರಿಚಾ ಗಂಗನಿ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಒಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಹೇಳುವ ಪ್ರಕಾರ ರಸ್ಕ್ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು ಎಂದಿದ್ದಾರೆ. ಸರಳವಾಗಿ ಹೇಳುವುದಾದರೆ ಇದು ಒಂದು ರೀತಿಯಲ್ಲಿ, ನಿಧಾನವಾಗಿ ದೇಹಕ್ಕೆ ಸೇರಿಕೊಳ್ಳುವ ವಿಷದಂತೆ ಜೊತೆಗೆ ಇದು ನಿಮ್ಮ ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು. ಇವು ಹೃದ್ರೋಗಗಳಿಗೆ ಕಾರಣವಾಗಬಹುದು ಎಂದು ಹೇಳಬಹುದು.
ರಸ್ಕ್ ಏಕೆ ಅನಾರೋಗ್ಯಕರ?
ಇದರಲ್ಲಿ ಟ್ರಾನ್ಸ್ ಕೊಬ್ಬುಗಳಿವೆ. ಇವು ದೇಹದ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಟ್ರಾನ್ಸ್ ಕೊಬ್ಬಿನ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗಗಳ ಅಪಾಯವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಇದಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಮತ್ತು ಮೈದಾ ಹಿಟ್ಟನ್ನು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಒಂದೇ ಸಲ ಏರಿಕೆಯಾಗುತ್ತದೆ. ಅದಲ್ಲದೆ ಇವುಗಳನ್ನು ಮತ್ತೆ ಮತ್ತೆ ಬೇಯಿಸುವುದರಿಂದ ಅವುಗಳ ಪೌಷ್ಠಿಕಾಂಶದ ಮೌಲ್ಯವೂ ಕೂಡ ಕಡಿಮೆಯಾಗುತ್ತದೆ
ixxun1