Yuvaraj Kumar: ಡೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಬಂಧನ.! ಮೈ ಎಲ್ಲಾ ರಕ್ತವಾಗಿದ್ದ ಯುವನನ್ನು ಎಳೆದೊಯ್ದ ಪೊಲೀಸರು!!

Share the Article

Yuvraj Kumar: ದೊಡ್ಮನೆ ಕುಡಿ ಯುವರಾಜ್ ಕುಮಾರ್(Yuvrj kumar) ಅನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅಲ್ಲದೆ ಯುವ ಅವರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು ಅಭಿಮಾನಿಗಳು ಏನಾಯ್ತು ಎಂದು ಭಯಗೊಂಡಿದ್ದಾರೆ.

ಯುವ ಅವರನ್ನು ಪೊಲೀಸರು ಬಂಧಿಸಿದ್ದು ನಿಜ. ಆದರೆ ಇದು ಸಿನಿಮಾದಲ್ಲಿ. ಹೌದು ‘ಯುವ`(Yuva) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ದೊಡ್ಮನೆ ಕುಡಿ ಯುವರಾಜ್‌ ಕುಮಾರ್‌ ತಮ್ಮ ಮೊದಲನೇ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು.. ಇದೀಗ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ನಟನಿಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅಂದಹಾಗೆ ಈ ವೈರಲ್‌ ವಿಡಿಯೋ ಯುವ-2 ಚಿತ್ರದ ಶೂಟಿಂಗ್‌ ವೇಳೆ ತೆಗೆದಿರುವುದಾಗಿ ಎನ್ನುವ ಮಾಹಿತಿ ಲಭ್ಯವಾಗಿದೆ. ಪಿಆರ್‌​​ಕೆ ಪ್ರೊಡಕ್ಷನ್‌​​ನಲ್ಲಿ ಯುವ ಅವರ ಎರಡನೇ ಚಿತ್ರ ಮೂಡಿ ಬರುತ್ತಿದೆ. ಆಯುಧ ಪೂಜೆಯ ವೇಳೆ ಯುವ ರಾಜ್‌ಕುಮಾರ್ ಎರಡನೇ ಸಿನಿಮಾದ ಅಪ್ಡೇಟ್‌ ಇದಾಗಿದೆ ಎಂದು ಹೇಳಲಾಗುತ್ತಿದೆ. ಈ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಯುವ ಅವರ ಮೈ ಎಲ್ಲಾ ರಕ್ತವಾಗಿದ್ದು, ಅವರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾರೆ. ಸುತ್ತಲೂ ಜನ ಜಮಾಯಿಸಿದ್ದಾರೆ. ಇದೇ ವಿಡಿಯೋ ಕಂಡು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು ಎಂದು ತಿಳಿದುಬಂದೆ.

Leave A Reply

Your email address will not be published.