Madhyapradesh: ಸ್ನೇಹಿತರೊಂದಿಗೆ ಹರಟುತ್ತಾ ಕುಳಿತ ಯುವಕನಿಗೆ ಹೃದಯಾಘಾತ – ಸ್ಥಳದಲ್ಲೇ ಸಾವು !! ವಿಡಿಯೋ ವೈರಲ್

Share the Article

Madhyapradesh: ಸಾವು ಯಾವಾಗ, ಹೇಗೆ ಬರುತ್ತದೆ ಗೊತ್ತಿಲ್ಲ. ಅದು ಯಾರಿಗೂ ಹೇಳಿ ಕೇಳಿ ಬರುವುದಿಲ್ಲ. ಅಂತೆಯೇ ಇದೀಗ ಮಧ್ಯಪ್ರದೇಶದ ರೇವಾದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಮಧ್ಯಪ್ರದೇಶದ(Madyapradesh) ರೇವಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಕ್ಟೋಬರ್ 20ರಂದು ಸಿರ್ಮೌರ್ ಚೌರಾಹಾದಲ್ಲಿರುವ ಅಂಗಡಿಯೊಂದರಲ್ಲಿ ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಕುಳಿತು ಹರಟುತ್ತಿದ್ದಾಗ ಹೃದಯಾಘಾತವಾಗಿ(Hart Attack) ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್​ ಆಗಿರುವ ವಿಡಿಯೋ (Viral Video) ನೋಡುವುದಾದರೆ, ಪ್ರಕಾಶ್ ಸಿಂಗ್​ ತನ್ನ ಸಹೋದರ ವಿನಯ್​ ಅಂಗಡಿಯಲ್ಲಿ ಕುಳಿತುಕೊಂಡು ಆತನ ಸ್ನೇಹಿತರೊಂದಿಗೆ ನಗುತ್ತಾ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಮಾತನಾಡುತ್ತಿರುವಾಗಲೇ ತಲೆಯನ್ನು ಕೆಳಗೆ ಹಾಕುವ ಪ್ರಕಾಶ್​ ಏಕಾಏಕಿ ನೆಲಕ್ಕುರುಳುತ್ತಾನೆ. ಕೂಡಲೇ ಅಲ್ಲಿದ್ದವರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವುದನ್ನು ನೋಡಬಹುದಾಗಿದೆ. ಆಸ್ಪತ್ರೆಗೆ ಕರೆದೊಯ್ದರೂ ಏನು ಪ್ರಯೋಜನ ಆಗಿಲ್ಲ. ವೈದ್ಯರು ಪ್ರಕಾಶ್ ಸಿಂಗ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

 

Leave A Reply