TRAI: ನವೆಂಬರ್ 1 ಟೆಲಿಕಾಂ ಕ್ಷೇತ್ರದಲ್ಲಿ ಆಗಲಿದೆ ದೊಡ್ಡ ಬದಲಾವಣೆ
TRAI: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸ್ಪ್ಯಾಮ್ ಮತ್ತು ನಕಲಿ ಕರೆಗಳನ್ನು ತಡೆಯಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ನವೆಂಬರ್ 1 ರಿಂದ ಮತ್ತೆ ಹೊಸ ನಿಯಮಗಳು ಜಾರಿಗೆ ಬರಲಿವೆ. ಅದರ ನಂತರ ಅಂತಹ ಕರೆಗಳ ಮೇಲೆ ಹೆಚ್ಚಿನ ಕಟ್ಟುನಿಟ್ಟಿನ ಇರುತ್ತದೆ.
TRAI ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸಂದೇಶ ಪತ್ತೆಹಚ್ಚುವಿಕೆಯನ್ನು ಅಳವಡಿಸಲು ಕೇಳಿದೆ. ಆದರೆ, ಟೆಲಿಕಾಂ ಕಂಪನಿಗಳು ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, ಹೀಗೆ ಮಾಡುವುದರಿಂದ ತಮ್ಮ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಆದರೂ ಆಗಸ್ಟ್ ತಿಂಗಳಿನಲ್ಲಿಯೇ ಎಲ್ಲಾ ಟೆಲಿಕಾಂ ಅಪರೇಟರ್‌ಗಳಿಗೆ ಸೂಚನೆ ನೀಡಿದ್ದು, ಟೆಲಿಮಾರ್ಕೆಟಿಂಗ್ ಅಥವಾ ಯಾವುದೇ ರೀತಿಯ ಪ್ರಚಾರಕ್ಕೆ ಸಂಬಂಧಿಸಿದ ಬ್ಯಾಂಕ್‌ಗಳು, ಇ-ಕಾಮರ್ಸ್ ಮತ್ತು ಹಣಕಾಸು ಸಂಸ್ಥೆಗಳಿಂದ ಬರುವ ಸಂದೇಶವನ್ನು ನಿರ್ಬಂಧಿಸಲು ಹೇಳಿದೆ.
ಸಂದೇಶ ಪತ್ತೆಹಚ್ಚುವಿಕೆ ಎಂದರೆ ಮೊಬೈಲ್ ಫೋನ್‌ಗಳಿಂದ ಎಲ್ಲಾ ನಕಲಿ ಕರೆಗಳು ಮತ್ತು ಸಂದೇಶಗಳನ್ನು ನಿಲ್ಲಿಸಲು ಇದು ಕಾರ್ಯನಿರ್ವಹಿಸುವ ವ್ಯವಸ್ಥೆ. ಹಾಗಾಗಿ ನಿಮ್ಮ ಫೋನ್‌ಗೆ ಬರುವ ಸ್ಲ್ಯಾಮ್ ಕರೆಗಳ ಮೇಲ್ವಿಚಾರಣೆಯನ್ನು ನ.1 ರಿಂದ TRAI ಪತ್ತೆ ಹಚ್ಚಲು ಶುರು ಮಾಡುತ್ತದೆ.
ಆದರೆ ಇದರಲ್ಲಿರುವ ಒಂದು ಸಮಸ್ಯೆ ಏನೆಂದರೆ ಅಗತ್ಯವಾದ ಬ್ಯಾಂಕಿಂಗ್ ಸಂದೇಶ, ಒಟಿಪಿ ಸ್ವೀಕರಿಸಲು ವಿಳಂಬ ನೀತಿಯನ್ನು ಅನುಸರಿಸಬೇಕಾಗಬಹುದು.