Bore Water: ಸದಾ ಬೋರ್ ನೀರು ಕುಡಿಯುತ್ತೀರಾ? ಹಾಗಿದ್ರೆ ಈ ಮರಣಾಂತಿಕ ಖಾಯಿಲೆ ಬರಬಹುದು ಹುಷಾರ್ !!
Bore Water: ಕುಡಿಯುವ ನೀರಿಗೆ ಬಾವಿ, ನದಿ, ಕೆರೆ, ತೊರೆಗಳೇ ಆಸರೆ. ಇವೆಲ್ಲದರ ನೀರು ಅಮೃತಕ್ಕೆ ಸಮ ಎನ್ನಲಾಗುತ್ತಿತ್ತು. ಆದರೀಗ ಇವುಗಳ ಸ್ಥಾನಮಾನವನ್ನು ಬೋರ್ವೆಲ್ ನೀರು, ಫಿಲ್ಟರ್ ನೀರು ಆವರಿಸಿಕೊಂಡಿವೆ. ಅದರಲ್ಲೂ ನೀವು ಸದಾ ಬೋರ್ವೆಲ್ ನೀರು(Bore Water) ಕುಡಿಯುತ್ತಿದ್ದರೆ ಜೀವವನ್ನೇ ತೆಗೆಯುವಂತ ಈ ಮಾರಣಾಂತಿಕ ಖಾಯಿಲೆ ಬರಬಹದು ಹುಷಾರ್!!
ಹೌದು, ಮಿತಿಗಿಂತ ಹೆಚ್ಚು ಆಳವಾಗಿ ಕೊರೆದ ಕೊಳವೆ ಬಾವಿಗಳ ನೀರನ್ನು ಬಳಸುವುದು ಅನೇಕ ರೋಗಗಳಿಗೆ ಕಾರಣವಾಗಬಹುದು ಎಂದು ವರದಿಗಳು ಹೇಳುತ್ತವೆ. ಹಾಗಾದರೆ ಬೋರ್ ವೆಲ್ ನೀರಿನ ಅಡ್ಡಪರಿಣಾಮಗಳೇನು? ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಯಾವ ರೀತಿಯ ಕಾಯಿಲೆಗಳು ಬರುತ್ತವೆ? ತಜ್ಞರು ಈ ಬಗ್ಗೆ ಏನು ಹೇಳ್ತಾರೆ? ನೋಡೋಣ ಬನ್ನಿ.
ನೀರು ಇಲ್ಲದಾಗ ಜನರು ಆಳವಾದ ಕೊಳವೆ ಬಾವಿಗಳನ್ನು ಕೊರೆಸುತ್ತಾರೆ. ಹೀಗೆ ಬಾವಿಯನ್ನು ಒಂದು ಮಿತಿಗಿಂತ ಆಳ ಮಾಡಿದರೆ ಆಗ ರಾಸಾಯನಿಕ ತ್ಯಾಜ್ಯಗಳನ್ನು ಹೊಂದಿರುವ ನೀರು ಲಭ್ಯವಾಗುತ್ತದೆ. ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸಿ ಕೊಟ್ಟಿವೆ. ಬೋರ್ ವೆಲ್ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್ ಮತ್ತು ಪಾದರಸದ ಅಂಶ ಹೆಚ್ಚಾಗಿರುತ್ತದೆ. ಅವುಗಳನ್ನು ಎಷ್ಟೇ ಶುದ್ಧೀಕರಿಸಿದರೂ, ಅವುಗಳನ್ನು ನೀರಿನಿಂದ ಬೇರ್ಪಡಿಸಲು ಸಾಧ್ಯವಿಲ್ಲ.
ಅದೂ ಅಲ್ಲದೆ ಬೋರ್ ವೆಲ್ ನೀರಿನಲ್ಲಿ ಯುರೇನಿಯಂ ಮಟ್ಟ ಹೆಚ್ಚಾಗಿದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಸಾಮಾನ್ಯವಾಗಿ ಕುಡಿಯುವ ನೀರಿನಲ್ಲಿ ಯುರೇನಿಯಂ ಮಟ್ಟ ಹೆಚ್ಚಾಗಿದ್ದರೆ ಕ್ಯಾನ್ಸರ್, ಶ್ವಾಸಕೋಶ, ಮೂತ್ರಪಿಂಡ ಮತ್ತು ಚರ್ಮದ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ತಜ್ಞರು ಕೊಳವೆಬಾವಿಗಳ ನೀರನ್ನು ಕುಡಿಯುವುದನ್ನು ತಪ್ಪಿಸಿ ಎನ್ನುತ್ತಾರೆ ತಜ್ಞರು.