Kite Flying: ʼಗಾಳಿಪಟʼ ಹಾರಿಸಲು ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರಕಾರ

Share the Article

Kite Flying: ರಾಜ್ಯ ಸರಕಾರ ಗಾಳಿಪಟ ಹಾರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಅದರ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.

ಗಾಳಿ ಪಟ ಹಾರಿಸಲು ಹತ್ತಿಯಿಂದ ಮಾಡಿದ ದಾರವನ್ನು ಮಾತ್ರ ಬಳಸಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.
ನೈಲಾನ್‌ ಮತ್ತು ಗಾಜು ಇತರ ಅಪಾಯಕಾರಿ ವಸ್ತುಗಳನ್ನು ಬಳಸಿ ತಯಾರು ಮಾಡಲಾದ ಚೀನಿ ಮಾಂಜಾ, ಚೀನಿ ದಾರಗಳನ್ನು ಬಳಸಿ ಗಾಳಿಪಟ ಬಳಕೆ ಮಾಡಬಾರದು. ಇದನ್ನು ಬಳಕೆ ಮಾಡಿ ಪ್ರಾಣಾಪಾಯ ನಡೆದ ಘಟನೆಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಮಾಡಲಾಗಿದೆ.

ಅಪಾಯಕಾರಿ ವಸ್ತುಗಳಿಂದ ತಯಾರು ಮಾಡಲಾದ ದಾರ ದಾಸ್ತಾನು, ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದೆ. ಹತ್ತಿಯಿಂದ ಮಾಡಿದ ದಾರಗಳಿಗೂ ಸಹ ಹರಿತ ಲೋಹ ಅಥವಾ ಗಾಝಿನ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

Leave A Reply

Your email address will not be published.