Udupi: ಪತ್ನಿಯಿಂದ ಪತಿಗೆ ಸ್ಲೋ ಪಾಯ್ಸನ್‌; ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಸ್ಫೋಟಕ ಹೇಳಿಕೆ

Share the Article

Udupi: ಅಜೆಕಾರಿನಲ್ಲಿ ನಡೆದ ಬಾಲಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ ಮಾಹಿತಿ ಹೇಳಿದ್ದಾರೆ. ಮೃತ ಬಾಲಕೃಷ್ಣ ಕೊಲೆ ಕುರಿತಂತೆ ಆರೋಪಿಗಳಾದ ಅವರ ಪತ್ನಿ ಪ್ರತಿಮಾ ಹಾಗೂ ಆಕೆಯ ಗೆಳೆಯ ದಿಲೀಪ್‌ ಹೆಗ್ಡೆ ಅವರು ಸೇರಿ ಕೃತ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಾಲಕೃಷ್ಣ ಅವರನ್ನು ಸಾಯಿಸಲೇಬೇಕೆಂದು ಸಂಚು ಮಾಡಿದ್ದರು ಪ್ರತಿಮಾ ಹಾಗೂ ದಿಲೀಪ್‌ ಹೆಗ್ಡೆ. ಹೀಗಾಗಿ ಪ್ರತಿಮಾ ಪ್ರತಿ ದಿನ ಬಾಲಕೃಷ್ಣ ಅವರ ಊಟದಲ್ಲಿ ವಿಷಪದಾರ್ಥ ಮಿಶ್ರಣ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಬಾಲಕೃಷ್ಣ ಅವರು ತೀರಾ ಅಸ್ವಸ್ಥರಾಗುತ್ತಿದ್ದರು. ಹಾಗೂ ಇವರು ವಿವಿಧ ಆಸ್ಪತ್ರೆಗಳಲ್ಲಿ ಕೂಡಾ ಇದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಆರೋಪಿಗಳಿಬ್ಬರೂ ತೀರಾ ಅಸ್ವಸ್ಥರಾಗಿದ್ದ ಬಾಲಕೃಷ್ಣ ಅವರ ಮುಖಕ್ಕೆ ಬೆಡ್‌ಶೀಟ್‌ ಒತ್ತಿ ಕೊಲೆ ಮಾಡಿದ್ದಾರೆ.

ಪೊಲೀಸರು ಇಬ್ಬರನ್ನೂ ಬಂಧನ ಮಾಡಿದ್ದು, ಪ್ರತಿಮಾಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿ ದಿಲೀಪ್‌ ಹೆಗ್ಡೆಯನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ತಿಳಿಸಿದ್ದಾರೆ.

Leave A Reply