Bantwal: ಮಂಗಳೂರು: ಬಂಟ್ವಾಳದಲ್ಲಿ ನಡುರಾತ್ರಿ ರೌಡಿಶೀಟರ್​ಗಳ ತಲ್ವಾರ್ ನಿಂದ ದಾಳಿ!

Bantwal: ದ‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ಯುವಕರು ಮಧ್ಯರಾತ್ರಿ ತಲ್ವಾರ್​ನಿಂದ ಹೊಡೆದಾಡಿಕೊಂಡಿದ್ದು, ಯುವಕರ ಹೊಡೆದಾಟ ವಿಡಿಯೋ ವೈರಲ್​ ಆಗಿದೆ.

ಹೌದು, ದ‌ಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ಎರಡು ಗುಂಪಿನ ಯುವಕರು ತಲ್ವಾರ್​ನಿಂದ ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ತಲವಾರು ದಾಳಿಯಲ್ಲಿ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್​ ಎಂಬುವರಿಗೆ ಗಂಭೀರ ಗಾಯವಾಗಿದೆ.

ತಸ್ಲೀಮ್ ಹಾಗೂ ಆತನ ಸ್ನೇಹಿತರು ಮಾತನಾಡುತ್ತ ನಿಂತಿದ್ದರು. ತಸ್ಲೀಮ್​ಗೆ ಫೋನ್​ನಲ್ಲಿ ​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮ್ಮೆಮಾರ್ ಶಾಲೆ ಬಳಿ ಬರುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ತಸ್ಲೀಮ್ ಹಾಗೂ ತಂಡ ಅಮ್ಮೆಮಾರ್ ಶಾಲೆ ಬಳಿಗೆ ಹೋದಾಗ ಆರೋಪಿ ಮನ್ಸೂರ್ ಹಾಗೂ ಇತರರು ತಲ್ವಾರ್​ನಿಂದ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಸ್ಲೀಮ್​ ಬಲಗಾಲು, ಬಲಗೈಗೆ ಗಾಯಗವಾಗಿದೆ. ಇದೇ ವೇಳೆ ಮಹಮ್ಮದ್ ಶಾಕೀರ್​ಗೂ ತಲವಾರಿನಿಂದ ಹಲ್ಲೆ ಮಾಡಲಾಗಿದೆ.

ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ದಾಳಿ ನಡೆದಿದ್ದು, ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ದಾಳಿ ಮಾಡಿದ ಆರೋಪಿಗಳು. ಸದ್ಯ ಈ ಪ್ರಕರಣ ಬಗ್ಗೆ ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 Comments
  1. Jinx Manga says

    Jinx Manga There is definately a lot to find out about this subject. I like all the points you made

  2. Euro 2024 says

    Кто ты есть на самом деле? В чем твое предназначение?

    В каком направлении лежит твой путь и как тебе по нему идти?

    Дизайн Человека расскажет об этом!

    – Позволяет выстроить эффективную стратегию жизни и карьеры
    – Приносит чувство согласия с собой – Помогает понять
    свои природные таланты и способности
    – Даёт право быть собой – Даёт опору на природные
    механизмы – Позволяет жить в согласии со своей природой
    – Снимает давление социальных стереотипов –
    Позволяет жить в согласии со своей природой – Укрепляет доверие к себе

    Существует двенадцать профилей.

    Профиль делает вас уникальным.
    Зная профиль человека, можно как минимум описать его характер и особенности.

Leave A Reply

Your email address will not be published.