Diwali Special Trains: ದೀಪಾವಳಿ ಪ್ರಯುಕ್ತ ಕರ್ನಾಟಕದ ಹಲವು ನಿಲ್ದಾಣಗಳಿಗೆ ವಿಶೇಷ ರೈಲು; ಇಲ್ಲಿದೆ ವಿವರ

Diwali Special Trains: ಇನ್ನೇನು ದೀಪಾವಳಿ ಹಬ್ಬದ ಸಡಗರ ಆರಂಭ ಅಗಲಿದ್ದು ಜನರು ತಮ್ಮ ತಮ್ಮ ಊರುಗಳಿಗೆ ಹಬ್ಬ ಆಚರಿಸಲು ಪ್ರಯಾಣ ಬೆಳೆಸುತ್ತಾರೆ ಹಾಗಿರುವಾಗ ರೈಲಿನಲ್ಲಿ ಪ್ರಯಾಣ ದಟ್ಟನೆ ಹೆಚ್ಚಿರುತ್ತದೆ. ಆದ್ದರಿಂದ ಪ್ರಯಾಣಿಕರ ದಟ್ಟಣೆ ನಿರ್ವಹಣೆಗಾಗಿ ನೈಋತ್ಯ ರೈಲ್ವೆ ಹಲವು ವಿಶೇಷ ರೈಲುಗಳ (Diwali Special Trains) ಘೋಷಣೆ ಮಾಡಿದೆ.

ದೀಪಾವಳಿ/ಛತ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ಹುಬ್ಬಳ್ಳಿ-ಕೊಲ್ಲಂ, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಸಂತ್ರಗಾಚಿ, ಯಶವಂತಪುರ-ಕೊಟ್ಟಾಯಂ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ಮತ್ತು ಹುಬ್ಬಳ್ಳಿ-ಮುಜಾಫರ್‌ಪುರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಹುಬ್ಬಳ್ಳಿ-ಕೊಲ್ಲಂ ವಿಶೇಷ ರೈಲು ವೇಳಾಪಟ್ಟಿ:
ಅಕ್ಟೋಬರ್ 26 ರಂದು ಹುಬ್ಬಳ್ಳಿ-ಕೊಲ್ಲಂ ವಿಶೇಷ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಮಧ್ಯಾಹ್ನ 3:15ಕ್ಕೆ ಹೊರಟು ಮರುದಿನ ಸಂಜೆ 5:10 ಕ್ಕೆ ಕೊಲ್ಲಂ ನಿಲ್ದಾಣವನ್ನು ತಲುಪಲಿದೆ. ರೈಲು ಸಂಖ್ಯೆ 07314 ಅಕ್ಟೋಬರ್ 27 ರಂದು ಕೊಲ್ಲಂನಿಂದ ರಾತ್ರಿ 8:30 ಕ್ಕೆ ಹೊರಟು, ಮರುದಿನ ರಾತ್ರಿ 8:45 ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಕರೂರ್, ದಿಂಡಿಗಲ್, ಮಧುರೈ, ವಿರುಡುನಗರ, ಶಿವಕಾಶಿ, ರಾಜಪಾಳ್ಯಮ್, ಶ್ರೀವಿಲ್ಲಿಪುತ್ತೂರು, ಕಡಯನಲ್ಲೂರು, ತೆಂಕಾಶಿ, ಸೆಂಗೋಟ್ಟೈ, ತೆನಮಲೈ, ಪುನಲೂರು, ಆವನೀಶ್ವರಂ, ಕೊಟ್ಟಾರಕರ ಮತ್ತು ಕುಂದರ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಬೆಂಗಳೂರು-ಸಂತ್ರಗಾಚಿ ವಿಶೇಷ ರೈಲು ವೇಳಾಪಟ್ಟಿ:
ಅಕ್ಟೋಬರ್ 26 ರಂದು ಬೆಳಗ್ಗೆ 10:15 ಗಂಟೆಗೆ ಬೆಂಗಳೂರು-ಸಂತ್ರಗಾಚಿ ವಿಶೇಷ ರೈಲು: ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಸಂಜೆ 7:45 ಗಂಟೆಗೆ ಸಂತ್ರಗಾಚಿ ತಲುಪಲಿದೆ. ಅಕ್ಟೋಬರ್ 27 ರಂದು ಸಂತ್ರಗಾಚಿಯಿಂದ ರಾತ್ರಿ 11:30ಕ್ಕೆ ಹೊರಟು, ಮರುದಿನ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಮಧ್ಯಾಹ್ನ 12:30 ಗಂಟೆಗೆ ಆಗಮಿಸಲಿದೆ. ಈ ರೈಲು ಕೃಷ್ಣರಾಜಪುರಂ, ಕಟ್ಪಾಡಿ, ರೇಣಿಗುಂಟಾ, ಗುಡೂರು, ನೆಲ್ಲೂರು, ಓಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಕ್, ಬಾಲೇಶ್ವರ ಮತ್ತು ಖರಗ್ಪುರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ

ಯಶವಂತಪುರ-ಕೊಟ್ಟಾಯಂ ವಿಶೇಷ ರೈಲು ವೇಳಾಪಟ್ಟಿ:
ಅಕ್ಟೋಬರ್ 29 ರಂದು ಸಂಜೆ 6:30ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 8:10 ಕ್ಕೆ ಕೊಟ್ಟಾಯಂ ನಿಲ್ದಾಣ ತಲುಪಲಿದೆ. ಅಕ್ಟೋಬರ್ 30 ರಂದು ಬೆಳಿಗ್ಗೆ 11:10 ಕ್ಕೆ ಕೊಟ್ಟಾಯಂನಿಂದ ಹೊರಟು, ಮರುದಿನ ಅಂದರೆ ಅಕ್ಟೋಬರ್ 31 ರಂದು 1:15 (AM) ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲು ಕೃಷ್ಣರಾಜಪುರಂ, ವೈಟ್‌ಫೀಲ್ಡ್, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ ಮತ್ತು ಎರ್ನಾಕುಲಂ ಟೌನ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಬೆಂಗಳೂರು-ಕಲಬುರಗಿ ವಿಶೇಷ ರೈಲು ವೇಳಾಪಟ್ಟಿ:
ಅಕ್ಟೋಬರ್ 31 ರಂದು ಬೆಂಗಳೂರು-ಕಲಬುರಗಿ ವಿಶೇಷ ರೈಲು ಎಸ್‌ಎಂವಿಟಿ ಬೆಂಗಳೂರಿನಿಂದ ರಾತ್ರಿ 9:15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 7:40 ಕ್ಕೆ ಕಲಬುರಗಿ ತಲುಪಲಿದೆ. ನವೆಂಬರ್ 1 ರಂದು ಕಲಬುರಗಿಯಿಂದ ಬೆಳಿಗ್ಗೆ 9:35 ಕ್ಕೆ ಹೊರಟು ಅದೇ ದಿನ ರಾತ್ರಿ 8 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಹುಬ್ಬಳ್ಳಿ-ಮುಜಾಫರ್‌ಪುರ ವಿಶೇಷ ರೈಲು ವೇಳಾಪಟ್ಟಿ:
ಹುಬ್ಬಳ್ಳಿ-ಮುಜಾಫರ್‌ಪುರ ವಿಶೇಷ ರೈಲು ನವೆಂಬರ್ 4 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಸಂಜೆ 5:20ಕ್ಕೆ ಹೊರಟು, ನವೆಂಬರ್ 6 ರಂದು ಸಂಜೆ 4 ಗಂಟೆಗೆ ಮುಜಾಫರ್‌ಪುರ ನಿಲ್ದಾಣವನ್ನು ತಲುಪಲಿದೆ. ನವೆಂಬರ್ 9 ರಂದು ಮುಜಾಫರ್‌ಪುರ ನಿಲ್ದಾಣದಿಂದ ಮಧ್ಯಾಹ್ನ 1:15 ಕ್ಕೆ ಹೊರಟು, ನವೆಂಬರ್ 11 ರಂದು ಬೆಳಿಗ್ಗೆ 10:30 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್‌ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ನರಸಿಂಗ್‌ಪುರ, ಜಬಲ್‌ಪುರ, ಕಟ್ನಿ, ಸತ್ನಾ, ಮಾಣಿಕ್‌ಪುರ, ಪ್ರಯಾಗ್‌ರಾಜ್ ಛೋಇಕಿ, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್​ಗಳಲ್ಲಿ ನಿಲುಗಡೆ ಹೊಂದಿರಲಿದೆ.

https://x.com/SWRRLY/status/1849107600740134954

Leave A Reply

Your email address will not be published.